Advertisement

ದೇಗುಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ..!

04:41 PM Nov 26, 2021 | Team Udayavani |

 ವಿಜಯಪುರ: ವಿಜಯಪುರದ ಚಿಕ್ಕಬಳ್ಳಾಪುರ ರಸ್ತೆಯ ಕೆರೆಯ ಕಟ್ಟೆಯ ಮೇಲಿರುವ ದುರ್ಗಮ್ಮ ದೇವಾಲಯದ ಒಳಗೆ ಅಪರಿಚಿತರು ನವಜಾತ ಶಿಶುವನ್ನು ಮಲಗಿಸಿ ಹೋಗಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಬಹುಶಃ ಬುಧವಾರ ರಾತ್ರಿಯಷ್ಟೇ ಹುಟ್ಟಿರುವ ಹೆಣ್ಣು ಮಗುವನ್ನು ಯಾವ ಹೊತ್ತಿನಲ್ಲಿ ದೇವರ ಮುಂದೆ ಮಲಗಿಸಿ ಹೋಗಲಾಗಿದೆಯೋ ತಿಳಿದುಬಂದಿಲ್ಲ. ದೇವಾಲಯದಿಂದ ಮಗು ಅಳುವ ಧ್ವನಿಯನ್ನು ಗಮನಿಸಿದ ಕೃಷ್ಣಮೂರ್ತಿ ನವಜಾತ ಶಿಶು ರಕ್ಷಣೆ ಮಾಡಿ ಸ್ಥಳೀಯರ ಸಹಾಯದಿಂದ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ತಂದು ಒಪ್ಪಿಸಿದ್ದಾರೆ.

ಇದನ್ನೂ ಓದಿ;- ಡಿ.18ಕ್ಕೆ ಮೆಗಾ ಲೋಕ ಅದಾಲತ್‌

ವಿಜಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತೂಕ ಎರಡುವರೆ ಕೆಜಿ ಇದ್ದು ಮಗುವನ್ನು ವೈದ್ಯರು ಆರೈಕೆ ಮಾಡುತ್ತಿದ್ದಾರೆ ಎಂದು ಸಮುದಾಯ ಆರೋಗ್ಯ ಕೇಂದ್ರ ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next