Advertisement

ಸಮಸ್ಯೆಗಳಿಗೆ ಸ್ಥಳೀಯವಾಗೇ ಪರಿಹಾರ ಹುಡುಕಿ

12:44 PM Jun 13, 2017 | |

ಕೆಂಗೇರಿ: ದೇಶದಲ್ಲಿ ಎದುರಾಗುವ ಸಣ್ಣ ಸಮಸ್ಯೆ ಪರಿಹಾರಕ್ಕೂ ವಿದೇಶಗಳ ನೆರವು ಕೋರುವ ನಮ್ಮ ಆಲೋಚನೆಗಳನ್ನು ಬದಲಿಸಿಕೊಂಡು ಸ್ಥಳೀಯವಾಗೇ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಎಚ್‌.ಎನ್‌.ಚಾಣಕ್ಯ ಹೇಳಿದರು.

Advertisement

ಉಲ್ಲಾಳು ಮುಖ್ಯ ರಸ್ತೆಯ ಮಂಗಳೂರು ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವ ಹಾಗೂ ದ್ವಿತೀಯ ಪಿಯುಸಿಯಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳ ಅಭಿನಂದನೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರಿಗೆ ಇರುವ “ಗಾಬೇಜ್‌ ಸಿಟಿ’ ಎಂಬ ಕಳಂಕವನ್ನು ಅಳಿಸಿಹಾಕುವ ನಿಟ್ಟಿನಲ್ಲಿ ನಮ್ಮಲ್ಲೇ ಪರಿಹಾರ ಹುಡುಕುವ, ಕಸದಿಂದಲೇ ರಸ ತೆಗೆಯುವ ಯೋಜನೆ ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಹೊಸ ಆವಿಷ್ಕಾರಗನ್ನು ಪರಿಚಯಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಜಯರಾಮ್‌ ಶೆಟ್ಟಿ ಮಾತನಾಡಿ, ನಾಡಿನ ಕಲೆ, ಕ್ರೀಡೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ವಾತಾವರಣ ಕಾಲೇಜಿನಲ್ಲಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ನಮ್ಮ ಪರಂಪರೆ, ಇತಿಹಾಸವನ್ನು ಪರಿಚಯಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿಸು ಪ್ರಯತ್ನದಲ್ಲಿ ಸಂಸ್ಥೆ ತೊಡಗಿದೆ ಎಂದರು.

ಸಮಾರಂಭದಲ್ಲಿ ಶ್ರೀದೇವಿ ಎಜುಕೇಷನ್‌ ಟ್ರಸ್ಟ್‌ ಉಪಾಧ್ಯಕ್ಷ ಎಚ್‌.ಆರ್‌.ಸುರೇಶ್‌, ಕಾರ್ಯದರ್ಶಿ ಡಾ.ಎಂ.ಜಯಕರ ಶೆಟ್ಟಿ, ಕಾಲೇಜಿನ ಆಡಳಿತ ಸಲಹೆಗಾರ ಟಿ.ಎಸ್‌.ತುಳಸಿಕುಮಾರ್‌ ಇದ್ದರು. ಇದೇ ವೇಳೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಆರು ಮತ್ತು ಹತ್ತನೇ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next