Advertisement

ಕಾವೇರಿ ತಟದಲ್ಲಿ 6 ಪುರಾತನ ಶಿವಲಿಂಗ ಪತ್ತೆ

01:46 PM May 17, 2018 | Team Udayavani |

ಶ್ರೀರಂಗಪಟ್ಟಣ: ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ ಬಳಿ ಕಾವೇರಿ ನದಿ ತೀರದಲ್ಲಿ ಪುರಾತನ ಕಾಲದ ಶಿವ ಲಿಂಗಗಳು ಪತ್ತೆಯಾಗಿವೆ. ಪುರಾತನ ಗುಂಜಾ ನರಸಿಂಹಸ್ವಾಮಿ ದೇವಾಲಯದ ಹಿಂಭಾಗಕ್ಕೆ ಇರುವ ಸರ್ವೆ
ನಂಬರ್‌ 185ರಲ್ಲಿ ಪಾಳು ಬಿದ್ದ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯ ಜಾಗವನ್ನು ಸ್ವತ್ಛ ಮಾಡಲಾಗುತ್ತಿತ್ತು.

Advertisement

ಪುನರ್‌ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ದೇವಾಲಯದ ಸುತ್ತಲೂ ಬೆಳೆದಿದ್ದ ಗಿಡ ಗಂಟಿಗಳನ್ನು ತೆಗೆದು ಸ್ವತ್ಛ ಮಾಡಿ ಕಾವೇರಿ ನದಿ ತೀರದಲ್ಲಿ ಜೆಸಿಬಿ ಯಂತ್ರದಿಂದ ಮಣ್ಣು ತೆಗೆದು ಸಮತಟ್ಟು ಮಾಡಲಾಗುತ್ತಿತ್ತು.

ಈ ವೇಳೆ ಪುರಾತನ ಕಾಲದ 6 ಬೃಹತ್‌ ಶಿವಲಿಂಗಗಳು ದೊರೆತಿವೆ. ಇವುಗಳನ್ನು ನೂರಾರು ವರ್ಷಗಳ
ಹಿಂದೆಯೇ ಕೆತ್ತನೆ ಮಾಡಿ ಅದನ್ನು ಪ್ರತಿಷ್ಟಾಪಿಸಲು ಮರಳಿನಲ್ಲಿ ಹೂತಿಟ್ಟಿರಬಹುದು ಎಂದು ಹಿರಿಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೊದಲು ಗಿಡಗಂಟಿಗಳನ್ನು ತೆಗೆದು ಮಣ್ಣನ್ನು ಸಮತಟ್ಟು ಮಾಡಿಕೊಳ್ಳಲು ಜೆಸಿಬಿ ಯಂತ್ರದಿಂದ ನದಿ ತೀರದಲ್ಲಿ ಬಗೆದಾಗ ಒಂದು ಶಿವಲಿಂಗದ ಮಧ್ಯ ಭಾಗದ ಪೀಠ ಕಂಡು ಬಂದಿತು. 

ಅದರ ಜೊತೆಯಲ್ಲಿ ಲಿಂಗದ ಮೇಲೆ ಕೂರುವ ಉದ್ದನೆ ಗುಂಡು ಆಕಾರದಂತಿರುವ ಲಿಂಗದ ಕಂಬಮೇಲೆ ಬಂದಿದೆ. ಹೀಗೆ ಒಂದರ ಹಿಂದೆ ಒಂದೊಂದಾಗಿ ಸಾಲಾಗಿ 6 ಲಿಂಗಗಳು ಸಿಕ್ಕಿವೆ.

Advertisement

ನಂತರ ಗ್ರಾಮಸ್ಥರು ಲಿಂಗಗಳನ್ನು ಹೊರ ತೆಗೆದು ದೇವಾಲಯದ ಪಕ್ಕದಲ್ಲಿಟ್ಟಿದ್ದಾರೆ. ದೇವಾಲಯದ ಬಳಿ ನದಿ ತೀರದಲ್ಲಿ ಲಿಂಗಗಳು ಸಿಕ್ಕ ಸುದ್ದಿ ಹಬ್ಬುತ್ತಿದ್ದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಜಮಾಯಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next