Advertisement
ಇನ್ನೊಂದೆಡೆ ಹೊಳೆನರಸೀಪುರ ಠಾಣೆ ಯಲ್ಲಿ ದಾಖಲಾದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳು ನ್ಯಾಯಾ ಲಯದಿಂದ ಆರೆಸ್ಟ್ ವಾರೆಂಟ್ ಪಡೆದಿ ದ್ದಾರೆ ಎನ್ನಲಾಗಿದೆ. ಆದರೆ ಎಸ್‌ಐಟಿ ಅಧಿಕಾರಿಗಳು ಈ ವಿಚಾರವನ್ನು ದೃಢ ಪಡಿಸಲು ನಿರಾಕರಿಸಿದ್ದಾರೆ. ಲುಕೌಟ್, ಬ್ಲೂಕಾರ್ನರ್ ನೋಟಿಸ್ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಜತೆ ತಿರುಗಾಟ?
ಪ್ರಜ್ವಲ್ ವಿದೇಶದಲ್ಲಿ ದುಬಾೖ ಹಾಗೂ ಬೆಂಗಳೂರು ಮೂಲದ ಇಬ್ಬರು ಸ್ನೇಹಿತರ ಜತೆಗಿದ್ದಾರೆ ಎನ್ನಲಾಗುತ್ತಿದೆ. ಮೂವರೂ ಜತೆಗೂಡಿ ತಿರುಗಾಡುತ್ತಿ ರುವ ಸಾಧ್ಯತೆಗಳಿವೆ. ಕೆಲವು ದಿನಗಳಿಂದ ಅವರು ಕುಟುಂಬ ಸದಸ್ಯರ ಜತೆಗೆ ನೇರ ಫೋನ್ ಸಂಪರ್ಕದಲ್ಲಿಲ್ಲ ಎನ್ನಲಾಗಿದೆ. ಖಾತೆಗಳ ಸ್ತಂಭನ
ಪ್ರಜ್ವಲ್‌ಗಾಗಿ ಶೋಧ ಮುಂದುವರಿಸಿರುವ ಎಸ್‌ಐಟಿಯು ಈಗ ಒಂದು ಹೆಜ್ಜೆ ಮುಂದೆ ಹೋಗಿ ಅವರ ಬ್ಯಾಂಕ್ ಖಾತೆಗಳ ಜಾಡು ಹಿಡಿಯಲು ಹೊರಟಿದೆ. ಎಸ್‌ಐಟಿ ಶೀಘ್ರದಲ್ಲೇ ನ್ಯಾಯಾಲಯದ ಅನುಮತಿ ಪಡೆದು ಬ್ಯಾಂಕ್ ಖಾತೆ ಸ್ತಂಭನ ಮಾಡುವ ಸಾಧ್ಯತೆ ಇದೆ. ಅವರ ಖಾತೆಗೆ ಹಣ ಸಂದಾಯವಾಗಿದೆಯೇ, ಜರ್ಮನಿಯಲ್ಲಿ ಯಾರ ಸಹಾಯ ಪಡೆದಿದ್ದಾರೆ, ಎಲ್ಲಿ ಆಶ್ರಯ ಪಡೆದಿದ್ದಾರೆ, ಅಲ್ಲಿ ಉಳಿದುಕೊಳ್ಳುವ ವೆಚ್ಚವನ್ನು ಹೇಗೆ ಭರಿಸುತ್ತಿದ್ದಾರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಎಸ್‌ಐಟಿ ತಂಡ ಗೌಪ್ಯವಾಗಿ ಮಾಹಿತಿ ಕಲೆ ಹಾಕುತ್ತಿದೆ.
Related Articles
ಮೂಲಗಳ ಪ್ರಕಾರ, ಪ್ರಜ್ವಲ್ ಸುಮಾರು 6 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಹಲವು ಬ್ಯಾಂಕ್‌ಗಳಲ್ಲಿರುವ ಈ ಖಾತೆಗಳ ಮೇಲೆ ಪಾನ್ ನಂಬರ್ ಮೂಲಕ ನಿಗಾ ಇರಿಸಲಾಗುತ್ತಿದೆ. ಈ ಮೂಲಕ ಆರ್ಥಿಕವಾಗಿ ಪ್ರಜ್ವಲ್ ರೇವಣ್ಣ ಅವರನ್ನು ಕಟ್ಟಿಹಾಕಿ ಜರ್ಮನಿಯಲ್ಲಿ ಓಡಾಟ, ವಸತಿ ಪಡೆಯಲು ಸಾಧ್ಯವಾಗದಂತೆ ಮಾಡಲು ಎಸ್‌ಐಟಿ ತಂತ್ರ ರೂಪಿಸಿದೆ. ಲೋಕಸಭಾ ಚುನಾವಣ ಫಲಿತಾಂಶದ ಬಳಿಕ ಈ ಪ್ರಕರಣದಲ್ಲಿ ಇನ್ನಷ್ಟು ಬೆಳವಣಿಗೆಗಳು ಆಗಲಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
Advertisement