Advertisement
ಮಹಾನಗರ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡು ಉತ್ತಮ ಆಡಳಿತ ನೀಡಲು ಆರ್ಥಿಕ ಸಂಪನ್ಮೂಲ ಅವಶ್ಯ. ಇದೇ ಹೊಸ ಆಡಳಿತಕ್ಕೆ ಇರುವ ಪ್ರಮುಖ ಸವಾಲು. ಆಸ್ತಿ ತೆರಿಗೆ, ಜಾಹೀರಾತು ತೆರಿಗೆ, ವಾಣಿಜ್ಯ ಕಟ್ಟಡಗಳ ಬಾಡಿಗೆ, ಪಾರ್ಕಿಂಗ್ ಶುಲ್ಕ, ನೀರಿನ ಶುಲ್ಕ- ಇವುಗಳು ಪಾಲಿ ಕೆಯ ಪ್ರಮುಖ ಆದಾಯ ಮೂಲ ಗಳು. ಇವುಗಳಿಂದ ಬರಬೇಕಾದ ಶುಲ್ಕ ಸಮರ್ಪಕವಾಗಿ ವಸೂಲಾದರೆ ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ಕೊರತೆಯಾಗು ವುದಿಲ್ಲ. ವಾಸ್ತವದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈಗ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ.
Related Articles
ಪಾಲಿಕೆ ವ್ಯಾಪ್ತಿಯಲ್ಲಿ 2008-09ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಸರಕಾರಿ ಹಾಗೂ ಖಾಸಗಿ ಮಾಲಕತ್ವಕ್ಕೆ ಒಳಪಟ್ಟ ಎಲ್ಲ ನಿವೇಶನ ಹಾಗೂ ನಿವೇಶನವನ್ನೊಳಗೊಂಡ ಕಟ್ಟಡಗಳು ಈ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಆದರೆ ಹಲವಾರು ಆಸ್ತಿಗಳಿಗೆ ಸಂಬಂಧಿಸಿದಂತೆ ಪಾವತಿಗಳಲ್ಲಿ ಬರುತ್ತಿರುವ ವ್ಯತ್ಯಾಸ, ವಿವರ ಪಟ್ಟಿಗಳಲ್ಲಿ ಅಸಮರ್ಪಕ ವಿವರ, ಅವಧಿ ಮೀರಿದ ಪಾವತಿಗಳಿಗೆ ಹಾಕಿದ ದಂಡನೆ ಪಾವತಿಸದಿರುವುದು ಹಾಗೂ ಕಡಿಮೆ ಪಾವತಿ ಮಾಡಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ.
Advertisement
ಸೇವಾ ಶುಲ್ಕಕಟ್ಟಡ ನಂಬರನ್ನು ತಪ್ಪಾಗಿ ನಮೂದಿಸಿರುವುದು, ಹೊಸ ಕಟ್ಟಡಗಳನ್ನು ನಿರ್ಮಿಸಿದ್ದರೂ ಹಳೆ ಕಟ್ಟಡ ನಂಬರನ್ನು ಮುಂದುವರಿಸಿ ಹಳೆ ವಿಸ್ತೀರ್ಣವನ್ನು ಲೆಕ್ಕಾಚಾರ ಮಾಡಿ ಪಾವತಿಸಿರುವ ಹಲವು ಪ್ರಕರಣಗಳು ತನಿ ಖೆಯ ವೇಳೆ ಬೆಳಕಿಗೆ ಬಂದಿವೆ. ಜತೆಗೆ ವಿನಾಯಿತಿ ವ್ಯಾಪ್ತಿಗೆ ಒಳಪಡದ ವಾಣಿಜ್ಯ/ವಾಸ್ತ ವ್ಯೇತರ ಉದ್ದೇಶದ ಕಟ್ಟಡಗಳಿಗೆ ಸೇವಾ ಶುಲ್ಕವನ್ನು ಪಾವತಿಸಿ ರುವುದೂ ಗಮನಕ್ಕೆ ಬಂದಿದೆ. ಇದು ಪ್ರಸ್ತುತ ಸಾಲಿನ ತೆರಿಗೆ ಪಾವತಿ ಪ್ರಗತಿಯು ಕುಂಠಿತವಾಗಲು ಕಾರಣ. ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಹಾಗೂ ವಾಣಿಜ್ಯ ಮಳಿಗೆ/ಸಂಕೀರ್ಣಗಳಲ್ಲಿ ಮಾಲಕತ್ವ ಪಡೆದವರು, ಬಿಲ್ಡರ್‌ಗಳು ಹಲವು ವರ್ಷಗಳಿಂದ ಆಸ್ತಿ ತೆರಿಗೆಯನ್ನೇ ಪಾವತಿ ಮಾಡಿಲ್ಲ. ಈ ಎಲ್ಲ ಸವಾಲುಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಿದೆ. ಆಸ್ತಿ ತೆರಿಗೆ ಹೆಚ್ಚಳದ ಸವಾಲು
ಕರ್ನಾಟಕ ಪೌರ ಕಾಯಿದೆ ಪ್ರಕಾರ ಪ್ರತಿ 3 ವರ್ಷಗಳಿಗೊಮ್ಮೆ ನಗರ ಸ್ಥಳೀಯ ಆಡಳಿತ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಬೇಕು. ನಿಯಮದಂತೆ 2017ರಲ್ಲಿ ಶೇ.15ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿತ್ತು. ಇದಾಗಿ ಮೂರು ವರ್ಷಗಳು ಕಳೆದಿವೆ. 2020ರ ಎ.1ರಿಂದ ಅನ್ವಯವಾಗುವಂತೆ ಮತ್ತೆ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕು. ಆದರೆ ನಾಗರಿಕರಿಗೆ ಹೊರೆಯಾಗದಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಜನರ ವಿಶ್ವಾಸ ಗಳಿಸುವುದೂ ಒಂದು ಸವಾಲೇ ಸರಿ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ಬಂದ ಬಳಿಕ 2008, 2011, 2014 ಹಾಗೂ 2017 ಸೇರಿ ಒಟ್ಟು ನಾಲ್ಕು ಬಾರಿ ಹೆಚ್ಚಳ ಮಾಡಲಾಗಿತ್ತು. ಬಾಕಿ ಕಂದಾಯ ವಸೂಲಾತಿಗೆ ವಿಶೇಷ
ಅಭಿಯಾನ ಕೈಗೊಂಡು ಫೆಬ್ರವರಿ ತಿಂಗಳಲ್ಲಿ 11.67 ಕೋಟಿ ರೂ. ಆಸ್ತಿ ತೆರಿಗೆ ವಸೂಲು ಮಾಡಲಾಗಿದೆ. ಇದರೊಂದಿಗೆ ಒಟ್ಟು ಆಸ್ತಿ ತೆರಿಗೆ ಸಂಗ್ರಹ 46,93,34,000 ರೂ. ಗೇರಿದ್ದು ಶೇ. 87.13 ಗುರಿ ವಸೂಲಾಗಿದೆ. “ಹೊಸ ಮೇಯರ್-ಹಲವು ಸವಾಲು’
ಜನರ ನಿರೀಕ್ಷೆಗೆ ಸುದಿನ ವೇದಿಕೆ
“ಹೊಸ ಮೇಯರ್-ಹಲವು ಸವಾಲು’ ಎನ್ನುವ ಸರಣಿಯಲ್ಲಿ ನೀವೂ ಭಾಗವಹಿಸಿ. ನಗರದ ಅಭಿವೃದ್ಧಿ ಕುರಿತಂತೆ ಸೂಕ್ತವಾದ ಸಲಹೆಗಳನ್ನು ಸಂಕ್ಷಿಪ್ತವಾಗಿ ಬರೆದು ಹೆಸರು, ಫೋಟೋದೊಂದಿಗೆ ವಾಟ್ಸಾಪ್ ಮಾಡಬಹುದು.
9900567000 - ಹಿಲರಿ ಕ್ರಾಸ್ತಾ