ಮಂಗಳೂರು: ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿ ಅವರನ್ನು ಮಂಗಳೂರು ಸೆನ್ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಕಟ್ಟಡ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಷನ್‌ನ ಆಡಳಿತ ನಿರ್ದೇಶಕ ರೋಹನ್ ಮೊಂತೆರೋ ಮತ್ತು ತೊಕ್ಕೊಟ್ಟಿನ ಫೈನಾನ್ಸ್ ಮಾಲಕ ಹರೀಶ್ ಅವರಿಗೆ ವಿಶ್ವನಾಥ ಶೆಟ್ಟಿ 1.75 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣ ಸಂಸ್ಥೆಗೆ 300 ಕೋಟಿ ರೂ. ಸಾಲ ತೆಗೆಸಿಕೊಡುವುದಾಗಿ ನಂಬಿಸಿ ವಿಶ್ವನಾಥ್ ಶೆಟ್ಟಿ ಮತ್ತು ಮುಂಬಯಿಯ ಕದಂ ಅವರು ಸೇರಿ ರೋಹನ್ ಮತ್ತು ಹರೀಶ್ ಅವರಿಂದ 1.75 ಕೋ. ರೂ.ಗಳನ್ನು ಮುಂಗಡ ಪಡೆದಿದ್ದರು. ಅನಂತರ ಹಣಕಾಸು ನೆರವು ಒದಗಿಸದೆ ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.