Advertisement

ನೀರು ಸರಬರಾಜಿಗೆ ಆರ್ಥಿಕ ಸಂಕಷ್ಟ; ಸಮಸ್ಯೆ ಜಟಿಲ

09:39 PM Apr 08, 2019 | Sriram |

ಮೂಲ್ಕಿ: ಕೇವಲ ಒಂದು ಗ್ರಾಮದ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಕಿಲ್ಪಾಡಿ ಗ್ರಾಮ ಪಂಚಾಯತ್‌ ಬೇಸಗೆ ಕಾಲ ದಲ್ಲಿ ನೀರಿನ ಬವಣೆಯಿಂದ ತೊಂದರೆಯನ್ನು ಅನುಭವಿಸುತ್ತಿರುವ ಗ್ರಾ.ಪಂ.ಗಳಲ್ಲಿ ಒಂದಾಗಿದೆ.

Advertisement

ಈ ಹಿಂದೆ ಗ್ರಾ.ಪಂ. ವ್ಯಾಪ್ತಿಯ ಕೆಂಚನಕೆರೆಯೂ ನೀರಿನ ಒರತೆ ಅಧಿಕ ಇರುವ ಪ್ರದೇಶವಾದ್ದರಿಂದ ಬೇಸಗೆ, ಮಳೆಗಾಲದಲ್ಲಿ ನೀರಿನ ಸಮಸ್ಯೆಯು ಕಂಡು ಬರುತ್ತಿರಲಿಲ್ಲ. ಆದರೆ ಈ ಬಾರಿ ನೀರಿನ ಒರತೆಯ ಪ್ರಮಾಣ ಈಗಾಗಲೇ ಕಡಿಮೆಯಾಗಿದ್ದು, ಮುಂದಿನ ಒಂದೆರಡು ವಾರದೊಳಗೆ ನೀರಿನ ಸಮಸ್ಯೆ ಜಟಿಲವಾಗುವ ಸ್ಥಿತಿ ತಲೆದೋರಿದೆ.

ಪಂಚಾಯತ್‌ ಕೆರೆ ಕಾಡು ವ್ಯಾಪ್ತಿಗೆ ಸಂಕಲಕರಿಯ- ಬಳುಂಜೆಯ ಗ್ರಾಮಗಳು ಬಹು ಗ್ರಾಮ ನೀರಿನ ಯೋಜನೆ ಸಂಪರ್ಕ ಹೊಂದಿರುವುದು ಕೊಂಚ ಮಟ್ಟಿಗೆ ಸಮಾಧಾನ ತಂದರೂ, ಮಳೆ ಪ್ರಮಾಣ ಕಡಿಮೆಯಾದರೆ ಸಮಸ್ಯೆ ಉದ್ಭವಿಸುವುದು ಖಂಡಿತ.

ಶಾಸಕರ ನಿಧಿಯಿಂದ ಕೆಂಚನಕೆರೆಯ ಅಂಗರಗುಡ್ಡೆ ಬಳಿ ಕೊಳವೆಬಾವಿ ತೆರೆಯಲಾಗಿದೆ. ಆದರೆ ನಿರೀಕ್ಷಿತ ಪ್ರಮಾಣದ ನೀರು ದೊರೆಯುವುದಿಲ್ಲ ಎಂಬುದು ಸೋಜಿಗವಾಗಿದೆ. ಕೆಂಚನಕೆರೆ ಮತ್ತು ಕೆರೆಕಾಡು ವ್ಯಾಪ್ತಿಯಲ್ಲಿ ದಿನದ ಎರಡು ಗಂಟೆ ನೀರು ಬಿಡಲಾಗುತ್ತಿದ್ದು, ಕೆಂಪು ಗುಡ್ಡೆ, ಕಲ್ಲಗುಡ್ಡೆ ಮುಂತಾದೆಡೆ ಎರಡು ದಿನಗಳಿಗೊಮ್ಮೆ ನೀರು ಕೊಡಲಾಗುತ್ತಿದೆ. ಗೇರುಕಟ್ಟೆಯ ಸಮೀಪದಲ್ಲಿ ಬಹಳಷ್ಟು ನೀರಿನ ಸಮಸ್ಯೆ ಈಗಾಗಲೇ ಮುಂದುವರಿದಿದೆ. ಗ್ರಾ.ಪಂ. ಹಾಗೂ ಆಡಳಿತ ವ್ಯವಸ್ಥೆ ನೀರು ಸರಬರಾಜು ಜನರ ಬೇಡಿಕೆಯನ್ನು ತೃಪ್ತಿಪಡಿಸಿದಂತೆ ಕಂಡುಬರುತ್ತಿಲ್ಲ. ಮೂಲ್ಕಿ-ಕಿನ್ನಿಗೋಳಿಯ ರಾಜ್ಯ ಹೆದ್ದಾರಿಯ ಗ್ರಾ. ಪಂ. ಕಟ್ಟಡದ ಎದುರಿನಲ್ಲಿ ಒಂದು ಬೋರ್‌ವೆಲ್‌ ತೆಗೆಯಲಾಗಿದ್ದರೂ ಇದರಲ್ಲೂ ಫಲಿತಾಂಶ ಸರಿಯಾಗಿ ಬಂದಿಲ್ಲ.

ಆರ್ಥಿಕ ಮೂಲದ ಕೊರತೆ 
ಕಳೆದ ಬಾರಿ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಿ ಜನರಿಗೆ ತಾತ್ಕಲಿಕ ಪರಿಹಾರವನ್ನು ಕಂಡು ಕೊಳ್ಳಲಾಗಿತ್ತು ಆದರೆ ಈ ವ್ಯವಸ್ಥೆಯ ಬಗ್ಗೆ ಬಿಲ್‌ ಪಾವತಿಯನ್ನು ಸಂಪನ್ಮೂಲ ಕೊರತೆಯಿಂದ ಪಾವತಿಸುವಲ್ಲಿ ಅಡಚಣೆ ಉಂಟಾಗಿರುವುದರಿಂದ ಮತ್ತೆ ಟ್ಯಾಂಕರಿನ ನೀರು ಸರಬರಾಜು ಕಷ್ಟಕರ ಪರಿಸ್ಥಿತಿಯಾಗಿ ಉಳಿದಿದೆ. ಆರ್ಥಿಕ ಮೂಲದ ಕೊರತೆಯಿಂದಾಗಿ ನೀರಿನ ಸಮಸ್ಯೆಗೆ ಪರಿಹಾರ ಕಾಣ ದಂತಾಗಿದೆ.

Advertisement

ಕಿಲ್ಪಾಡಿ ಪಂಚಾಯತ್‌ ವ್ಯಾಪ್ತಿಯೊಳಗೆ ತೆರಿಗೆ ಸಂಗ್ರಹ ಬಹಳಷ್ಟು ಕಡಿಮೆಯಾಗಿದೆ.
ಅಭಿವೃದ್ಧಿಯ ದೃಷ್ಠಿಯಿಂದ ಈ ಪಂಚಾಯತ್‌ ವ್ಯಾಪ್ತಿಯನ್ನು ಮೂಲ್ಕಿ ನಗರ ಪಂಚಾಯತ್‌ಗೆ ಸೇರಿಸಿಕೊಂಡರೆ ಬಹಳಷ್ಟು ಒಳ್ಳೆಯದು ಎಂಬುದು ಗ್ರಾಮ ಸ್ಥರ ಅಭಿಪ್ರಾಯ.

ಸಮಸ್ಯೆ ಪರಿಹಾರಕ್ಕೆ ಪ್ರಯತ್ನ
ವರ್ಷದಿಂದ ವರ್ಷಕ್ಕೆ ನೀರಿನ ಒರತೆಯಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ.ಪಂಚಾಯತ್‌ನಿಂದ ಸಾಧ್ಯವಾದಷ್ಟು ಪ್ರಮಾಣದಲ್ಲಿ ಜನರ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಲು ಪ್ರಯತ್ನ ಮುಂದುವರಿದಿದೆ.ಟ್ಯಾಂಕರಿನ ಮೂಲಕ ಸರಬರಾಜು ಮಾಡುವಂತಹ ಕೆಲವೊಂದು ಪ್ರಯತ್ನಗಳಿಗೆ ಆರ್ಥಿಕ ಸಂಪನ್ಮೂಲದ ಕೊರತೆ ಎದುರಾಗಿದೆ.
 - ಹರಿಶ್ಚಂದ್ರ,
ಪಿ.ಡಿ.ಓ.ಕಿಲ್ಪಾಡಿ ಗ್ರಾ.ಪಂ.

 ನೀರು ಸರಬಾರಜಿಗೆ ಪೂರಕ ಕ್ರಮ
ಜನರ ಬೇಡಿಕೆಗೆ ತಕ್ಕಂತೆ ನೀರು ಒದಗಿಸುವುದು ಕಷ್ಟವಾದರೂ ಸಂಪನ್ಮೂಲ ಕಡಿಮೆ ಇರುವ ನಮ್ಮ ಪಂಚಾಯತ್‌ನಿಂದ ಇತರೆಡೆಗಳ ಸಮಸ್ಯೆಗೆ ಹೋಲಿಸಿದರೆ ನಮ್ಮಲ್ಲಿ ಸಾಧ್ಯವಷ್ಟು ಮಟ್ಟದ ತೃಪ್ತಿಕರ ಎನ್ನ ಬಹುದಾದ ವ್ಯವಸ್ಥೆಯಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.
– ಶ್ರೀಕಾಂತ್‌ ರಾವ್‌,
ಅಧ್ಯಕ್ಷರು, ಕಿಲ್ಪಾಡಿ ಗ್ರಾಮ ಪಂಚಾಯತ್‌

 – ಸರ್ವೋತ್ತಮ ಅಂಚನ್‌

Advertisement

Udayavani is now on Telegram. Click here to join our channel and stay updated with the latest news.

Next