Advertisement

ತೆರಿಗೆ ಪಾವತಿದಾರರ ವಿನಾಯಿತಿಗೆ ತೆರೆ? 2020-21ನೇ ಸಾಲಿನ ಘೋಷಣೆ ಜಾರಿಗೆ ಕೇಂದ್ರದ ಚಿಂತನೆ

09:07 PM Aug 14, 2022 | |

ನವದೆಹಲಿ: ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ನೀಡುವ ವಿನಾಯಿತಿ ವ್ಯವಸ್ಥೆಯನ್ನು ಇನ್ನಷ್ಟು ಆಕರ್ಷಕವಾಗಿಸುವ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಚಿಂತನೆ ನಡೆಸುತ್ತಿದೆ. ಹೊಸ ವ್ಯವಸ್ಥೆಯ ಪ್ರಕಾರ ಹಳೆಯ ಮತ್ತು ಸಂಕೀರ್ಣವಾಗಿರುವ ತೆರಿಗೆ ಪದ್ಧತಿಗೆ ವಿದಾಯ ಹೇಳುವುದು, ವೈಯಕ್ತಿಕ ತೆರಿಗೆ ಪಾವತಿದಾರರಿಗೆ ನೀಡುವ ವಿನಾಯಿತಿಗೆ ತೆರೆ ಎಳೆಯುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

Advertisement

2020-2021ರ ಬಜೆಟ್‌ನಲ್ಲಿ 2 ವ್ಯವಸ್ಥೆ ಜಾರಿ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದಾಯ ತೆರಿಗೆ ಇಲಾಖೆ ನಿಯಮ ಸರಳಗೊಳಿಸಿ, ತೆರಿಗೆ ಪಾವತಿದಾರರಿಗೆ ನೆಮ್ಮದಿ ನೀಡುವುದು ಕೇಂದ್ರದ ಉದ್ದೇಶವಾಗಿದೆ.

ಗೃಹ ಮತ್ತು ಶಿಕ್ಷಣ ಸಾಲ ಪಡೆದವರು ತಮ್ಮ ಇಎಂಐ ಪಾವತಿ ಮಾಡುವುದನ್ನು ಮುಕ್ತಾಯಗೊಳಿಸಿದ್ದರೆ ಯಾವುದೇ ರೀತಿಯ ಡಿಡಕ್ಷನ್‌ ಅಥವಾ ಕಡಿತ ಇಲ್ಲದೇ ಇರುವ ಹೊಸ ತೆರಿಗೆ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಲು ಚಿಂತನೆ ನಡೆಸಲಾಗಿದೆ. 2019ರ ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್‌ ತೆರಿಗೆ ಪಾವತಿ ಮಾಡುವವರಿಗೆ ಇದೇ ಮಾದರಿ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಅವರಿಗೆ ನೀಡಲಾಗಿದ್ದ ವಿನಾಯಿತಿ ಮತ್ತು ತೆರಿಗೆಯ ಹಂತಗಳನ್ನೂ ಗಣನೀಯವಾಗಿ ಇಳಿಕೆ ಮಾಡಲಾಗಿತ್ತು. ಕಾರ್ಪೊರೇಟ್‌ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next