Advertisement
ಅಬ್ಬಬ್ಟಾ ಇಂಟರ್ನಲ್ ಅಂದರೆ ಏನು ಅಂತಾನೆ ಗೊತ್ತಿರಲ್ಲ, ಅದನ್ನು ಹೇಗೋ ಕಷ್ಟಪಟ್ಟು ಪಾಸ್ ಆಗುತ್ತೀವಿ. ಫಸ್ಟ್ ಇಯರ್ ಅಲ್ಲಿ ಚೈಲ್ಡ್‌ಗಳಾಗಿ ಇರುವ ನಾವು ಎರಡನೇ ವರ್ಷಕ್ಕೆ ಕಾಲಿಡುವಾಗ ಕಾಲೇಜಿನ ಅನೇಕ ವಿಚಾರಗಳನ್ನು ತಿಳಿದಿರುತ್ತೇವೆ. ಫ್ರೆಂಡ್ಸ್ ಗೆ ನೋಟ್ಸ್ ಬರೆದುಕೊಡುವುದೇನು, ಊಟ ಮಾಡುವಾಗ “ಬಿಲ್ ನಾನೇ ಕೊಡುತ್ತೇನೆ’ ಅನ್ನುವುದೇನು. ಎರಡನೇ ವರ್ಷ ಒಂಥರಾ ಬೆಚ್ಚನೆ ವರ್ಷ. ಆದರೆ, ಕ್ಲಾಸ್ ಬಂಕ್ ಹೊಡೆಯುವಾಗ ಮಾತ್ರ ಹಿಂದೇಟು ಹಾಕುತ್ತೀವಿ.
Related Articles
Advertisement
ಫೈನಲ್ ಇಯರ್‌ನಲ್ಲಿ ಮಳೆಗಾಲನೂ ಇಲ್ಲ, ಚಳಿಗಾಲನೂ ಇಲ್ಲ ಯಾವಾಗಲೂ ಪರೀಕ್ಷೆ ಕಾಲವೆ. ಜೊತೆಗೆ ಸೀನಿಯರ್ ಎಂಬ ಹವಾ ಅಂತೂ ಬೇಜಾನ್ ಜೋರಾಗಿರುತ್ತದೆ. ಎಂಟು ಗಂಟೆ ಕ್ಲಾಸ್ ಅಂದರೆ ಆರಾಮಾಗಿ ಹತ್ತು ಗಂಟೆಗೆ ಕ್ಲಾಸ್‌ಗೆ ಬರುವುದು. ಫಸ್ಟ್‌ಇಯರ್‌ನಲ್ಲಿದ್ದ ಫ್ರೆಂಡ್ಸ್ ಗ್ಯಾಂಗ್‌ಅಬ್ಬಬ್ಟಾ ಅಂದರೆ ಮೂರು ಪ್ರತ್ಯೇಕ ಪಕ್ಷವಾಗಿರುತ್ತದೆ. ಚಿಂದಿಚಿತ್ರಾನ್ನ ಆಗಿದ್ದರೂ ವಿಶೇಷವೇನೂ ಇಲ್ಲ. ಮುನಿಸುಗಳ ನಡುವೆಯೂ ಆ ಫೆಸ್ಟ್, ಸೆಮಿನಾರ್, ಟ್ರಿಪ್, ಕ್ಯಾಂಪ್- ಅನ್ನೋ ಜಂಜಾಟದಲ್ಲಿ ಫೈನಲ್‌ಇಯರ್ ಪರೀಕ್ಷೆ ಬೇರೆ ಹತ್ತಿರ ಬಂದಿರುತ್ತದೆ. ಲವ್ ಅನ್ನೋ ಹಳ್ಳಕ್ಕೆ ಬಿದ್ದವರ ಜೀವನದಲ್ಲಿ ಎಷ್ಟೋ ಸಲ ಆ ಪುಟ್ಟ ಹೃದಯಗಳ ನಡುವೆ ಮನಸ್ತಾಪ, ಬ್ರೇಕಪ್, ಪ್ಯಾಚಾಪ್- ಇದೆಲ್ಲದರ ನಡುವೆಯೂ ಮನಸ್ಸು ಒಡೆದು ಚೂರಾಗುವುದುಂಟು.
ನಾವು ತುಂಬಾ ಇಷ್ಟಪಡುವ “ಕಾಲೇಜ್ ಡೇ’ ಬಂದಿರುತ್ತದೆ. ಫೈನಲ್ ಇಯರ್ ಕಾಲೇಜು ಡೇ ದಿನ ಮಾತ್ರ ಎಲ್ಲರೂ ತಪ್ಪದೇ ಹಾಜರ್. ಎಲ್ಲದಕ್ಕೂ “ಕೊನೆಯದಾಗಿ’ ಎಂಬ ವಿಶೇಷಣ ಬೇರೆ. ಲಾಸ್ಟ್ ಡ್ಯಾನ್ಸ್, ಡೆಡಿಕೇಶನ್ ಸಾಂಗ್, ಲಾಸ್ಟ್ ಎಂಜಾಯ್‌ಮೆಂಟ್. ಅಬ್ಟಾ… ಇದನ್ನೆಲ್ಲ ನೆನಪಿಸಿಕೊಳ್ಳಲು ಬೇಜಾರುಗುತ್ತದೆ. ಬೇಜಾರು ಮುಗಿಯುವಾಗಲೇ “ಬೀಳ್ಕೊಡುಗೆ’ಯ ದಿನವೂ ಬಂದಿರುತ್ತದೆ. ಆ ದಿನ ವಾಚ್‌ಮಾನ್‌ನಿಂದ ಹಿಡಿದು ಪ್ರಿನ್ಸಿಪಾಲ್‌ರವರೆಗೂ ಎಲ್ಲರ ಹತ್ರನೂ ಫೋಟೊ ಗಿಟ್ಟಿಸಿಕೊಳ್ಳುತ್ತೀವಿ. ಈ ಫೈನಾಲ್‌ಇಯರ್ ಮುಗಿಯುವಷ್ಟರಲ್ಲಿ ಬ್ರೇಕಪ್ ಆಗಿರುವ ಫ್ರೆಂಡ್ಸ್ ಗ್ಯಾಂಗ್, ಅಹಂ-ಜಗಳಗಳ ನಡುವೆಯೂ ಮತ್ತೆ ಒಂದಾಗುವುದುಂಟು.
ವಿದಾಯದ ದಿನ ಹಿಂದೆ ತಿರುಗಿ ನೋಡಿದ್ರೆ, “ಇಷ್ಟೆಲ್ಲ ಮಾಡಿದ್ದು ನಾವೇನಾ’ ಅನಿಸುತ್ತದೆ. ಪದವಿಯ ದಿನಗಳು ಬೇಗ ಬೇಗನೇ ಮುಗಿಯುತ್ತವೆ. ಮೊದಲ ವರ್ಷದ ಮೊದಲ ದಿನದ ಬೆಪ್ಪುತಕ್ಕಡಿಯಂತಹ ನೋಟವು, ಅಂತಿಮ ವರ್ಷಕ್ಕೆ ಬರುವಾಗ ಎಷ್ಟೊಂದು ಬದಲಾಗಿರುತ್ತದೆ. ಬದುಕೂ ಹಾಗೆಯೇ ಇರಬಹುದು.
ಸೌಮ್ಯ ಕಾರ್ಕಳತೃತೀಯ ಬಿ.ಎ. ಆಳ್ವಾಸ್ ಕಾಲೇಜು ಮೂಡುಬಿದಿರೆ