Advertisement

Filmfare Awards 2023:‌ ಯಾವೆಲ್ಲಾ ಸಿನಿಮಾಗಳು ನಾಮಿನೇಟ್? ಇಲ್ಲಿದೆ ಫುಲ್‌ ಲಿಸ್ಟ್

02:29 PM Apr 27, 2023 | Team Udayavani |

ಮುಂಬಯಿ: 2023ನೇ ಸಾಲಿನ 68ನೇ ಫಿಲ್ಮ್‌ಫೇರ್  ಪ್ರಶಸ್ತಿಯ ನಾಮಿನೇಷನ್‌ ಪಟ್ಟಿ ರಿಲೀಸ್‌ ಆಗಿದೆ. ಕಳೆದ ವರ್ಷ ತೆರೆಕಂಡು ಮೋಡಿ ಮಾಡಿದ ಸಿನಿಮಾಗಳು, ನಿರ್ದೇಶಕರು ಹಾಗೂ ಕಲಾವಿದರ ಪಾತ್ರಗಳು ಈ ಪಟ್ಟಿಯಲ್ಲಿ ಸೇರಿವೆ.

Advertisement

ಮುಖ್ಯವಾಗಿ ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಥಿಯಾವಾಡಿ ʼ ಸಿನಿಮಾ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ (ಆಲಿಯಾ ಭಟ್‌), ಅತ್ಯುತ್ತಮ ಸಂಗೀತ ಮತ್ತು ನಟ ಅತ್ಯುತ್ತಮ ಪದಾರ್ಪಣೆ ನಟ (ಶಂತನು ಮಹೇಶ್ವರಿ) ಸೇರಿದಂತೆ 10 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.

ಅಯಾನ್ ಮುಖರ್ಜಿ ಅವರ ʼಬ್ರಹ್ಮಾಸ್ತ್ರʼ ( ಪಾರ್ಟ್‌ -1) ಸಿನಿಮಾ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಪೋಷಕ ಪಾತ್ರ ( ಮೌನಿ ರಾಯ್‌) ಅತ್ಯುತ್ತಮ ನಟ, ಅತ್ಯುತ್ತಮ ವಿಎಫ್‌ ಎಕ್ಸ್ ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ಇನ್ನು ಇದೇ ಸಿನಿಮಾ ಮ್ಯೂಸಿಕ್‌( ಪ್ರೀತಮ್) ಸಾಹಿತ್ಯ‌ (ಕೇಸರಿಯಾ ಹಾಡಿಗೆ ಅಮಿತಾಭ್ ಭಟ್ಟಾಚಾರ್ಯ) ಹಾಡನ್ನು ಹಾಡಿ ಗಾಯಕರಾದ ಅರಿಜಿತ್ ಸಿಂಗ್ ಮತ್ತು ಜೊನಿತಾ ಗಾಂಧಿ ಅವರು ಕೂಡ ನಾಮಿನೇಟ್‌ ಆಗಿದ್ದಾರೆ.

ಇನ್ನು ಕಳೆದ ಬಹುದೊಡ್ಡ ಸದ್ದು ಮಾಡಿದ  ವಿವೇಕ್‌ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮ 7 ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ (ಅನುಪಮ್ ಖೇರ್‌), ಪೋಷಕ ಪಾತ್ರಕ್ಕೆ ( ಮಿಥುನ್ ಚಕ್ರವರ್ತಿ) ಸೇರಿದಂತೆ ಇತರೆ ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ಅತ್ಯುತ್ತಮ ಚಲನಚಿತ್ರ:

Advertisement

ಬಧಾಯಿ ದೋ

ಭೂಲ್ ಭುಲೈಯಾ 2

ಬ್ರಹ್ಮಾಸ್ತ್ರ ಭಾಗ ಒಂದು: ಶಿವ

ಗಂಗೂಬಾಯಿ ಕಥಿಯಾವಾಡಿ

ಕಾಶ್ಮೀರ ಫೈಲ್ಸ್

ಉಂಚೈ

ಅತ್ಯುತ್ತಮ ನಿರ್ದೇಶಕ:

ಅನೀಸ್ ಬಾಜ್ಮೀ (ಭೂಲ್ ಭುಲೈಯಾ 2)

ಅಯಾನ್ ಮುಖರ್ಜಿ (ಬ್ರಹ್ಮಾಸ್ತ್ರ ಪಾರ್ಟ್-1: ಶಿವ)

ಹರ್ಷವರ್ಧನ್ ಕುಲಕರ್ಣಿ (ಬಧಾಯಿ ದೋ)

ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)

ಸೂರಜ್ ಆರ್. ಬರ್ಜತ್ಯಾ (ಉಂಚೈ)

ವಿವೇಕ್ ರಂಜನ್ ಅಗ್ನಿಹೋತ್ರಿ (ದಿ ಕಾಶ್ಮೀರ ಫೈಲ್ಸ್)

ಅತ್ಯುತ್ತಮ ಚಲನಚಿತ್ರ ಕ್ರಿಟಿಕ್ಸ್:

ಬಧಾಯಿ ದೋ (ಹರ್ಷವರ್ಧನ್ ಕುಲಕರ್ಣಿ)

ಭೇಡಿಯಾ (ಅಮರ್ ಕೌಶಿಕ್)

ಜುಂಡ್ (ನಾಗರಾಜ ಪೋಪತ್ರರಾವ್ ಮಂಜುಳೆ)

ರಾಕೆಟ್ರಿ: ನಂಬಿ ಎಫೆಕ್ಟ್ (ಆರ್ ಮಾಧವನ್)

ವಧ್ (ಜಸ್ಪಾಲ್ ಸಿಂಗ್ ಸಂಧು ಮತ್ತು ರಾಜೀವ್ ಬರ್ನ್ವಾಲ್)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ

ಅಜಯ್ ದೇವಗನ್ (ದೃಶ್ಯಂ 2)

ಅಮಿತಾಭ್ ಬಚ್ಚನ್ (ಉಂಚೈ)

ಅನುಪಮ್ ಖೇರ್ (ದಿ ಕಾಶ್ಮೀರ ಫೈಲ್ಸ್)

ಹೃತಿಕ್ ರೋಷನ್ (ವಿಕ್ರಮ್ ವೇದಾ)

ಕಾರ್ತಿಕ್ ಆರ್ಯನ್ (ಭೂಲ್ ಭುಲೈಯಾ 2)

ರಾಜ್‌ಕುಮಾರ್ ರಾವ್ (ಬಧಾಯಿ ದೋ)

ಅತ್ಯುತ್ತಮ ನಟ ಕ್ರಿಟಿಕ್ಸ್:

ಅಮಿತಾಭ್ ಬಚ್ಚನ್ (ಜುಂಡ್)

ಆರ್ ಮಾಧವನ್ (ರಾಕೆಟ್ರಿ: ದಿ ನಂಬಿ ಎಫೆಕ್ಟ್)

ರಾಜ್‌ಕುಮಾರ್ ರಾವ್ (ಬಧಾಯಿ ದೋ)

ಸಂಜಯ್ ಮಿಶ್ರಾ (ವಧ್)

ಶಾಹಿದ್ ಕಪೂರ್ (ಜೆರ್ಸಿ)

ವರುಣ್ ಧವನ್ (ಭೇಡಿಯಾ)‌

ಲೀಡಿಂಗ್‌ ರೋಲ್: ಅತ್ಯುತ್ತಮ ನಟಿ (ಮಹಿಳೆ):

ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ)

ಭೂಮಿ ಪೆಡ್ನೇಕರ್ (ಬಧಾಯಿ ದೋ)

ಜಾನ್ವಿ ಕಪೂರ್ (ಮಿಲಿ)

ಕರೀನಾ ಕಪೂರ್ ಖಾನ್ (ಲಾಲ್ ಸಿಂಗ್ ಚಡ್ಡಾ)

ತಬು (ಭೂಲ್ ಭುಲೈಯಾ 2)

ಅತ್ಯುತ್ತಮ ನಟಿ ಕ್ರಿಟಿಕ್ಸ್:

ಭೂಮಿ ಪೆಡ್ನೇಕರ್ (ಬಧಾಯಿ ದೋ)

ಕಾಜೋಲ್ (ಸಲಾಮ್ ವೆಂಕಿ)

ನೀನಾ ಗುಪ್ತಾ (ವಧ್)

ತಾಪ್ಸಿ ಪನ್ನು (ಶಭಾಷ್ ಮಿಥು)

ತಬು (ಭೂಲ್ ಭುಲೈಯಾ 2)‌

ಪೋಷಕ ಪಾತ್ರ: ಅತ್ಯುತ್ತಮ ನಟ:

ಅನಿಲ್ ಕಪೂರ್ (ಜುಗ್‌ ಜುಗ್ ಜೀಯೋ)

ಅನುಪಮ್ ಖೇರ್ (ಉಂಚೈ)

ದರ್ಶನ್ ಕುಮಾರ್ (ದಿ ಕಾಶ್ಮೀರ ಫೈಲ್ಸ್)

ಗುಲ್ಶನ್ ದೇವಯ್ಯ (ಬಧಾಯಿ ದೋ)

ಜೈದೀಪ್ ಅಹ್ಲಾವತ್ (ಆಕ್ಷನ್ ಹೀರೋ)

ಮನೀಶ್ ಪಾಲ್ (ಜಗ್ಗುಗ್ ಜೀಯೋ)

ಮಿಥುನ್ ಚಕ್ರವರ್ತಿ (ದಿ ಕಾಶ್ಮೀರ ಫೈಲ್ಸ್)

ಪೋಷಕ ಪಾತ್ರ: ಅತ್ಯುತ್ತಮ ನಟಿ:

ಮೌನಿ ರಾಯ್ (ಬ್ರಹ್ಮಾಸ್ತ್ರ ಭಾಗ 1: ಶಿವ)

ನೀತು ಕಪೂರ್ (ಜುಗ್‌ ಜುಗ್ ಜೀಯೋ)

ಶೀಬಾ ಚಡ್ಡಾ (ಬಧಾಯಿ ದೋ)

ಶೀಬಾ ಚಡ್ಡಾ (ಡಾಕ್ಟರ್ ಜಿ)

ಶೆಫಾಲಿ ಶಾ (ಡಾಕ್ಟರ್ ಜಿ)

ಸಿಮ್ರಾನ್ (ರಾಕೆಟ್ರಿ: ದಿ ನಂಬಿ ಎಫೆಕ್ಟ್)

ಅತ್ಯುತ್ತಮ ಮ್ಯೂಸಿಕ್ ಆಲ್ಬಮ್:

ಅಮಿತ್ ತ್ರಿವೇದಿ (ಉಂಚೈ)

ಪ್ರೀತಮ್ (ಬ್ರಹ್ಮಾಸ್ತ್ರ ಭಾಗ ಒಂದು: ಶಿವ)

ಪ್ರೀತಮ್ (ಲಾಲ್ ಸಿಂಗ್ ಚಡ್ಡಾ)

ಸಚಿನ್ ಜಿಗರ್ (ಭೇಡಿಯಾ)

ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ಸಾಹಿತ್ಯ:

ಎ ಎಂ ತುರಾಜ್ (ಜಬ್ ಸೈಯಾನ್- ಗಂಗೂಬಾಯಿ ಕಥಿಯಾವಾಡಿ)

ಅಮಿತಾಭ್ ಭಟ್ಟಾಚಾರ್ಯ (ಅಪ್ನಾ ಬನಾ ಲೆ ಪಿಯಾ- ಭೇಡಿಯಾ)

ಅಮಿತಾಭ್ ಭಟ್ಟಾಚಾರ್ಯ (ಕೇಸರಿಯಾ- ಬ್ರಹ್ಮಾಸ್ತ್ರ ಭಾಗ 1: ಶಿವ)

ಅಮಿತಾಭ್ ಭಟ್ಟಾಚಾರ್ಯ (ತೇರೆ ಹವಾಲೆ- ಲಾಲ್ ಸಿಂಗ್ ಚಡ್ಡಾ)

ಶೆಲ್ಲಿ (ಮೈಯ್ಯ ಮೈನು- ಜೆರ್ಸಿ)

ಫಿಲ್ಮ್ಸ್‌ ಫೇರ್‌ ಪ್ರಶಸ್ತಿ ಕಾರ್ಯಕ್ರ ಎ.27 ರಂದು ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಡೆಯಲಿದೆ. ನಟ ಸಲ್ಮಾನ್‌ ಖಾನ್‌ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಆಯುಷ್ಮಾನ್ ಖುರಾನಾ ಮತ್ತು ಮನೀಶ್ ಪಾಲ್ ಕೂಡ ಕಾರ್ಯಕ್ರಮದ ಸಹ ನಿರೂಪಕರಾಗಲಿದ್ದಾರೆ.

ನಟರಾದ ವಿಕ್ಕಿ ಕೌಶಲ್, ಗೋವಿಂದ, ಟೈಗರ್ ಶ್ರಾಫ್, ಜಾನ್ವಿ ಕಪೂರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ಮನರಂಜನಾ ಕಾರ್ಯಕ್ರಮವನ್ನು ನೀಡಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next