Advertisement

ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದ ಫಿಲ್ಮ್ ಸ್ಟುಡಿಯೋ ಬೆಂಕಿಗೆ ಅಹುತಿ: ಕಾರಣ ನಿಗೂಢ

05:56 PM May 13, 2023 | Team Udayavani |

ಮುಂಬಯಿ: ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದ ಫಿಲ್ಮ್ ಸ್ಟುಡಿಯೋ ಬೆಂಕಿಗೆ ಅಹುತಿಯಾಗಿರುವ ಬಗ್ಗೆ ವರದಿಯಾಗಿದೆ.

Advertisement

ಶುಕ್ರವಾರ ಮಧ್ಯರಾತ್ರಿ ಮುಂಬೈನ ಹೊರವಲಯದ ವಸೈನಲ್ಲಿರುವ ಕಮಾನ್‌ನಲ್ಲಿರುವ ಭಜನ್‌ಲಾಲ್ ಸ್ಟುಡಿಯೋಸ್ ಬೆಂಕಿಗೆ ಅಹುತಿಯಾಗಿ ಸುಟ್ಟು ಕರಕಲಾಗಿದೆ. ಶನಿವಾರ ( ಮೇ.13 ರಂದು) ಮುಂಜಾನೆ 4 ಗಂಟೆಯ ಸುಮಾರಿಗೆ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ  ಎಂದು ವಸಾಯಿ-ವಿರಾರ್ ನಗರ ಮುನ್ಸಿಪಲ್ ಕಾರ್ಪೊರೇಷನ್‌ನ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

‘ಅಲಿ ಬಾಬಾ: ದಾಸ್ತಾನ್-ಇ-ಕಾಬೂಲ್’ ಧಾರಾವಾಹಿ ಮೂಲಕ ಅಪಾರ ಪ್ರೇಕ್ಷಕರ ಮನಗೆದ್ದಿದ್ದ ನಟಿ ತುನಿಶಾ ಶರ್ಮಾ 2022 ರ ಡಿಸೆಂಬರ್‌ 24 ರಂದು ಶೂಟಿಂಗ್‌ ಸೆಟ್‌ ನ ವಾಶ್‌ ರೂಮ್‌ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪ್ರಕರಣ ಸಂಬಂಧ ಮಾಜಿ ಗೆಳಯ ಹಾಗೂ ಸಹನಟ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಮಾ. 5 ರಂದು ಶೀಜಾನ್‌ ಅವರಿಗೆ ಕೋರ್ಟ್‌ ಜಾಮೀನು ನೀಡಿತ್ತು. ಸದ್ಯ ಅವರು ರಿಯಾಲಿಟಿ ಶೋವೊಂದರಲ್ಲಿ ಭಾಗಿಯಾಗಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next