Advertisement

ತುಂಬಿದರೆ ತುಂಬಿದರೆ ಅಪಾಯ ಗ್ಯಾರಂಟಿ

02:30 PM Nov 04, 2019 | Suhan S |

ನರಗುಂದ: ಈ ಊರಲ್ಲಿ ಬಾವಿಯೊಂದಿದ್ದು,ಈ ಬಾವಿಯ ಮೇಲ್ಮಟ್ಟಕ್ಕೆ ನೀರು ಬಂದರೆ ಭೂ ಕುಸಿತ ಕಟ್ಟಿಟ್ಟ ಬುತ್ತಿ. ಇದೇನಪ್ಪಾ, ಬಾವಿಯ ನೀರು ಹೆಚ್ಚಳವಾಗುವುದಕ್ಕೂ, ಭೂ ಕುಸಿತಕ್ಕೂ ಏನು ಸಂಬಂಧ ಎಂದರೆ ಸಂಬಂಧ ಇದೆ. ಅಂತರ್ಜಲ ಹೆಚ್ಚಳವಾದ ನೀರು ಪಟ್ಟಣದ ದೇಸಾಯಿ ಬಾವಿಯಲ್ಲಿ ಸಂಗ್ರಹ ಆಗುತ್ತಿದೆ. ಈ ಬಾವಿ ನೀರು ನೆಲ ಮಟ್ಟದಿಂದ 5-6 ಅಡಿ ಕೆಳಗಿರಬೇಕು. ನೆಲಮಟ್ಟಕ್ಕೆ ನೀರು ಬರದಂತೆ ನೋಡಿಕೊಳ್ಳಬೇಕೆಂದು ಹೈದರಾಬಾದ್‌ ಮೂಲದ ವಿಜ್ಞಾನಿಗಳ ತಂಡ 2009ರಲ್ಲೇ ಅಧ್ಯಯನ ವರದಿ ಸಲ್ಲಿಸಿದೆ. ಹೀಗಾಗಿ ಈ ಬಾವಿ ತುಂಬದಂತೆ ದಿನದ 24 ಗಂಟೆಯೂ ಪಂಪ್‌ಸೆಟ್‌ನಿಂದ ನೀರು ಹೊರ ಹಾಕಲಾಗುತ್ತಿದೆ. ದಶಕದಿಂದ ನಡೆಯುತ್ತಿದೆ ಈ ಕಾರ್ಯ: ಈ ಊರಲ್ಲಿರುವ ಅಂತರ್ಜಲವೆಲ್ಲಾ ದೇಸಾಯಿ ಬಾವಿಯಲ್ಲಿಯೇ ಸೇರುತ್ತಿರುವುದರಿಂದ 2009ರಿಂದ ಇಲ್ಲಿಯವರೆಗೆ 2 ಪಂಪ್‌ಸೆಟ್‌ಗಳ ಮೂಲಕ ನೀರನ್ನು 24 ಗಂಟೆಯೂ ಹೊರ ಹಾಕಲಾಗುತ್ತಿದೆ. ಕೆಲವೊಂದಿಷ್ಟು ನೀರನ್ನು ಬಾವಿ ಪಕ್ಕದಲ್ಲೇ ನಿರ್ಮಿಸಿದ ಡೋಣಿಯಲ್ಲಿ ಸಂಗ್ರಹಿಸುತ್ತಿದ್ದರೆ, ಒಂದಷ್ಟು ನೀರು ಸಾರ್ವಜನಿಕರಿಗೆ ಬಳಕೆಯಾಗುತ್ತಿದೆ. ಉಳಿದ ನೀರು ಚರಂಡಿ ಸೇರುತ್ತಿದೆ.

Advertisement

ಅಂತರ್ಜಲ ಹೆಚ್ಚಳವೇ ಮಾರಕ: ಬಾವಿಯ ನೀರನ್ನು ಶುದ್ಧೀಕರಿಸಿ ಕುಡಿಯಲು ಬಳಸಬೇಕೆಂಬ ಉದ್ದೇಶದಿಂದ ಪಕ್ಕದಲ್ಲೇ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಶೇ.10 ಮಾತ್ರ ನೀರು ಶುದ್ಧೀಕರಣ ವಾಗುವುದರಿಂದ ಘಟಕಕ್ಕೆ ಬೀಗ ಜಡಿಯಲಾಗಿದೆ. ಇತ್ತ ಕುಡಿಯಲೂ ಬಳಕೆಯಾಗದೇ ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗಿ ಮಾರಕವಾಗಿ ಪರಿಣಮಿಸಿದೆ. ಅಂತರ್ಜಲ ಹೆಚ್ಚಳದಿಂದ ದೇಸಾಯಿ ಬಾವಿ ನೀರು ಹೊರ ಹಾಕುವಲ್ಲಿ ಮಾತ್ರ ಮುತುವರ್ಜಿ ವಹಿಸಿದ ಪುರಸಭೆ ಅಂತರ್ಜಲ ಹೆಚ್ಚಳ ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲವೆಂಬ ಆರೋಪ ಜೀವಂತವಾಗಿದೆ.

 

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next