Advertisement

ಎಫ್ಐಎಚ್‌ ಪ್ರೊ ಲೀಗ್‌ ಹಾಕಿ: ಆರ್ಜೆಂಟೀನಾ ವಿರುದ್ಧ ಭಾರತಕ್ಕೆ ಗೆಲುವು

10:37 PM Jun 18, 2022 | Team Udayavani |

ರಾಟರ್‌ಡಮ್‌: ಗುರ್ಜಿತ್‌ ಕೌರ್‌ ಅವರ ಅವಳಿ ಗೋಲುಗಳ ನೆರವಿನಿಂದ ಭಾರತೀಯ ವನಿತಾ ಹಾಕಿ ತಂಡವು ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಕೂಟದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲುಗಳಿಂದ ಆರ್ಜೆಂಟೀನಾವನ್ನು ಸೋಲಿಸಿದೆ.

Advertisement

ಈ ಮೊದಲು ನಿಗದಿತ ಆಟದ ವೇಳೆ ಉಭಯ ತಂಡಗಳು 3-3 ಸಮಬಲ ಸ್ಥಾಪಿಸಿದ್ದವು.ನಿಗದಿತ ಆಟದ ವೇಳೆ ಗುರ್ಜಿತ್‌ 37 ಮತ್ತು 61ನೇ ನಿಮಿಷ ದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಹೊಡೆದಿದ್ದರೆ ಲಾಲ್ರೆಮ್ಸಿಯಾಮಿ 4ನೇ ನಿಮಿಷದಲ್ಲಿ ಫೀಲ್ಡ್‌ ಗೋಲು ಹೊಡೆದಿದ್ದರು. ಇದರಿಂದಾಗಿ ಆರ್ಜೆಂಟೀನಾದ ಆಗಸ್ಟಿನಾ ಗೋರ್ಜೆಲನಿ ಹ್ಯಾಟ್ರಿಕ್‌ ಗೋಲು ಹೊಡೆದಿದ್ದರೂ ಪಂದ್ಯ ಸಮಬಲದಲ್ಲಿ ನಿಲ್ಲುವಂತಾಯಿತು.

ಶೂಟೌಟ್‌ನಲ್ಲಿ ಭಾರತ ಪರ ನೇಹಾ ಗೋಯಲ್‌ ಮತ್ತು ಸೋನಿಕಾ ಗೋಲು ಹೊಡೆದರೆ ಆರ್ಜೆಂಟೀನಾ ಪರ ವಿಕ್ಟೋರಿಯಾ ಗ್ರ್ಯಾನಟೊ ಗೋಲು ಹೊಡೆದಿದ್ದರು. ಈ ಗೆಲುವಿನಿಂದ ಸವಿತಾ ಪೂನಿಯಾ ನೇತೃತ್ವದ ಭಾರತೀಯ ವನಿತಾ ತಂಡ ಟೋಕಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಆರ್ಜೆಂಟೀನಾ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next