Advertisement

ಎಫ್ಐಎಚ್‌ ಪ್ರೊ ಲೀಗ್‌ ಹಾಕಿ: 24 ಸದಸ್ಯರ ಭಾರತ ತಂಡ ಪ್ರಕಟ

10:58 PM May 15, 2023 | Team Udayavani |

ಹೊಸದಿಲ್ಲಿ: ಯೂರೋಪ್‌ನಲ್ಲಿ ನಡೆಯಲಿರುವ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಗಾಗಿ 24 ಸದಸ್ಯರ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಡ್ರ್ಯಾಗ್‌ ಫ್ಲಿಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ಈ ತಂಡದ ನಾಯಕರಾಗಿದ್ದಾರೆ. ನೂತನ ಕೋಚ್‌ ಕ್ರೆಗ್‌ ಫ‌ುಲ್ಟನ್‌ ಅವರಿಗೆ ಇದು ಮೊದಲ ಪಂದ್ಯಾವಳಿಯಾಗಿದೆ.

Advertisement

ಲಂಡನ್‌ನಲ್ಲಿನ ಪಂದ್ಯಗಳಲ್ಲಿ ಭಾರತ ತಂಡ ಬೆಲ್ಜಿಯಂ ಮತ್ತು ಗ್ರೇಟ್‌ ಬ್ರಿಟನ್‌ ವಿರುದ್ಧ ಆಡಲಿದೆ. ಹಾಗೆಯೇ ಈಂದ್‌ಹೋವೆನ್‌ನಲ್ಲಿ ಆತಿಥೇಯ ನೆದರ್ಲೆಂಡ್ಸ್‌ ಮತ್ತು ಆರ್ಜೆಂಟೀನಾವನ್ನು ಎದುರಿಸಲಿದೆ.
ಗೋಲ್‌ಕೀಪರ್: ಪಿ.ಆರ್‌. ಶ್ರೀಜೇಶ್‌, ಕೃಷ್ಣ ಬಹಾದೂರ್‌ ಪಾಠಕ್‌.

ಡಿಫೆಂಡರ್: ಹರ್ಮನ್‌ಪ್ರೀತ್‌ ಸಿಂಗ್‌ (ನಾಯಕ), ಅಮಿತ್‌ ರೋಹಿದಾಸ್‌, ಜರ್ಮನ್‌ಪ್ರೀತ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌, ಸುಮಿತ್‌, ಸಂಜಯ್‌, ಮನ್‌ದೀಪ್‌ ಮೋರ್‌, ಗುರಿಂದರ್‌ ಸಿಂಗ್‌.

ಮಿಡ್‌ಫಿಲ್ಡರ್: ಹಾರ್ದಿಕ್‌ ಸಿಂಗ್‌ (ಉಪನಾಯಕ), ದಿಲ್‌ಪ್ರೀತ್‌ ಸಿಂಗ್‌, ಎಂ. ರಬಿಚಂದ್ರ ಸಿಂಗ್‌, ಶಮ್ಶೆàರ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌.

ಫಾರ್ವರ್ಡ್ಸ್‌: ಅಭಿಷೇಕ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಎಸ್‌. ಕಾರ್ತಿ, ಗುರ್ಜಂತ್‌ ಸಿಂಗ್‌, ಸುಖಜೀತ್‌ ಸಿಂಗ್‌, ರಾಜ್‌ಕುಮಾರ್‌ ಪಾಲ್‌, ಮನ್‌ದೀಪ್‌ ಸಿಂಗ್‌, ಸಿಮ್ರನ್‌ಜಿàತ್‌ ಸಿಂಗ್‌.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next