Advertisement

ಭಾರತದ ವಿಶ್ವಕಪ್‌ ಕನಸು ಅಂತ್ಯ: ಸ್ಪೇನ್‌ ವಿರುದ್ಧ 0-1 ಗೋಲಿನಿಂದ ಸೋಲು

11:13 PM Jul 11, 2022 | Team Udayavani |

ಟೆರಸ್ಸಾ (ಸ್ಪೇನ್‌): ಸಹ ಆತಿಥ್ಯ ಸ್ಪೇನ್‌ ವಿರುದ್ಧ ನಡೆದ ಕ್ರಾಸ್‌ಓವರ್‌ ಪಂದ್ಯದಲ್ಲಿ 0-1 ಗೋಲಿನಿಂದ ಸೋಲನ್ನು ಕಂಡ ಭಾರತೀಯ ವನಿತಾ ಹಾಕಿ ತಂಡವು ಎಫ್ಐಎಚ್‌ ವಿಶ್ವಕಪ್‌ ಕೂಟದಿಂದ ಹೊರಬಿತ್ತು.

Advertisement

ಭಾರತ ಮತ್ತು ಸ್ಪೇನ್‌ ಆಟಗಾರ್ತಿಯರು ಆರಂಭ ಮೂರು ಕ್ವಾರ್ಟರ್‌ಗಳಲ್ಲಿ ತೀವ್ರ ಪೈಪೋಟಿಯ ಹೋರಾಟ ನೀಡಿದ್ದರು. ಪಂದ್ಯ ಮುಗಿಯಲು ಕೇವಲ ಮೂರು ನಿಮಿಷಗಳಿರುವಾಗ ಮಾರ್ಟಾ ಸೆಗು ಹೊಡೆದ ಗೋಲಿನಿಂದಾಗಿ ಭಾರತ ನಾಕೌಟ್‌ ಹಂತದಿಂದ ಹೊರಬಿತ್ತು. ಈ ಪಂದ್ಯದಲ್ಲಿಯೂ ಭಾರತೀಯ ವನಿತೆಯರು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ವಿಫ‌ಲರಾದರು. ನಾಲ್ಕು ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿದ್ದರೂ ಗೋಲಾಗಿ ಪರಿವರ್ತಿಸಲು ಭಾರತಕ್ಕೆ ಸಾಧ್ಯವಾಗಲೇ ಇಲ್ಲ. ಸ್ಪೇನ್‌ಗೆ ಮೂರು ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತ್ತು.

ಕೊನೆ ಹಂತದಲ್ಲಿ ಸ್ಪೇನ್‌ 9 ಆಟಗಾರ್ತಿಯರೊಂದಿಗೆ ಆಡಿದರೂ ಭಾರತ ಇದರ ಲಾಭವೆತ್ತಲು ವಿಫ‌ಲವಾಯಿತು. ಭಾರತ ಇನ್ನು 9ರಿಂದ 16ರ ನಡುವಣ ಸ್ಥಾನಕ್ಕಾಗಿ ಮಂಗಳವಾರ ಕೆನಡ ತಂಡವನ್ನು ಎದುರಿಸಲಿದೆ.
ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್‌ ತಂಡವು ಜರ್ಮನಿ ಯನ್ನು ಎದುರಿಸಲಿದೆ.

ಕ್ವಾರ್ಟರ್‌ಫೈನಲ್‌ಹೋರಾಟ ಹೀಗಿದೆ
ನ್ಯೂಜಿಲ್ಯಾಂಡ್‌-ಜರ್ಮನಿ
ನೆದರ್ಲೆಂಡ್‌-ಬೆಲ್ಜಿಯಂ
ಆಸ್ಟ್ರೇಲಿಯ-ಸ್ಪೇನ್‌
ಇಂಗ್ಲೆಂಡ್‌-ಆರ್ಜೆಂಟೀನಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next