ಬೆಳ್ತಂಗಡಿ: ಅರಣ್ಯ ಹಕ್ಕು ಯೋಜನೆ ಜಾರಿಗೆ ಬಂದು ವರ್ಷಗಳೇ ಕಳೆದಿವೆ. ಆದರೆ ಅದರ ಸರಿಯಾದ ಪ್ರಯೋಜನ ಇನ್ನೂ ಅರಣ್ಯಗಳೊಳಗೆ ವಾಸಿಸುತ್ತಿರುವ ಮೂಲನಿವಾಸಿಗಳಿಗೆ ದೊರೆತಿಲ್ಲ. ತಮಗಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಅವರು ಪಡುತ್ತಿರುವ ಪಾಡು ಹೇಳತೀರದ್ದಾಗಿದೆ. ಇದೀಗ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಯಾವುದೇ ಸೌಲಭ್ಯಗಳನ್ನು ಪಡೆಯಲು ಆನ್‌ಲೆ„ನ್‌ನಲ್ಲಿಯೇ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಇದಕ್ಕಾಗಿ ಮೂಲ
ನಿವಾಸಿಗಳು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ.
Advertisement
ಕಚೇರಿಯಿಂದ ಕಚೇರಿಗೆ ಅಲೆದಾಟಆನ್ಲೈನ್ ಅರ್ಜಿ ಸಲ್ಲಿಕೆಯ ಕಾರ್ಯ ಮಾತ್ರ ಎಲ್ಲಿಯೂ ಸಾಧ್ಯವಾಗುತ್ತಿಲ್ಲ. ಇಲಾಖೆಗಳ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿಯಿಲ್ಲವಾಗಿದೆ. ಕಳೆದ ಮೂರು ತಿಂಗಳುಗಳಿಂದ ಸವಣಾಲು ಗ್ರಾಮದ ಇತ್ತಿಲ ಪೇಲ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಹಾಗೂ ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪ್ರದೇಶಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಮೂಲ ನಿವಾಸಿಗಳು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಸವಣಾಲು ಗ್ರಾಮದ ಇತ್ತಿಲ ಪೇಲ ಪ್ರದೇಶಕ್ಕೆ ರಸ್ತೆ ಮಂಜೂರಾಗಿ ಅನುದಾನ ಬಿಡುಗಡೆಯಾಗಿ ಗುತ್ತಿಗೆದಾರರಿಗೆ ವಹಿಸಿ
ಕೊಡಲಾಗಿತ್ತು. ಆದರೆ ಅರಣ್ಯ ಇಲಾಖೆಯವರು ಕಾಮಗಾರಿಗೆ ಅವಕಾಶ ನೀಡಲಿಲ್ಲ. ಅಂದಿನಿಂದ ಅನುಮತಿಗಾಗಿ ಇಲ್ಲಿನ ಜನರು ಅಲೆಯುತ್ತಿದ್ದಾರೆ, ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ಖಾಸಗಿ ವ್ಯಕ್ತಿಯೋರ್ವ ಆನ್‌ಲೆ„ನ್‌ನಲ್ಲಿ ತಾನು ಅರ್ಜಿ ಸಲ್ಲಿಸುವುದಾಗಿಯೂ ಅದಕ್ಕೆ 30,000 ರೂ. ಹಣ ನೀಡುವಂತೆಯೂ ಕೇಳುತ್ತಿದ್ದಾರೆ. ಸರಕಾರಿ ಅ ಧಿಕಾರಿಗಳಿಗೆ ಅರ್ಜಿ ಹೇಗೆ ಸಲ್ಲಿಸಬೇಕು ಎಂದು ತಿಳಿಯದಿರುವಾಗ ಖಾಸಗಿ ವ್ಯಕ್ತಿಗೆ ಇದು ಹೇಗೆ ಸಾಧ್ಯವಾಗುತ್ತಿದೆ ಎಂಬ ಪ್ರಶ್ನೆ ಇಲ್ಲಿನ ಜನರದ್ದಾಗಿದೆ. ಇಷ್ಟು ಖರ್ಚುಮಾಡಿ ಅರ್ಜಿ ಸಲ್ಲಿಸುವ ಶಕ್ತಿ ನಮಗಿಲ್ಲ ಎನ್ನುತ್ತಾರೆ.
ಬಹುತೇಕ ಆದಿವಾಸಿಗಳು ಅರಣ್ಯಗಳ ನಡುವೆಯೇ ವಾಸಿಸುತ್ತಿದ್ದಾರೆ. ಅವರಿಗೆ ಅಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಅರಣ್ಯ ಇಲಾಖೆ ಸದಾ ಅಡ್ಡಿಪಡಿಸುತ್ತಾ ಬಂದಿದೆ. ಇದು ಇಲಾಖೆ ಮತ್ತು ಮೂಲನಿವಾಸಿಗಳ ನಡುವೆ ಸದಾ ಘರ್ಷಣೆಗೆ ಕಾರಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹತ್ತು ವರ್ಷಗಳ ಹಿಂದೆ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯಡಿಯಲ್ಲಿ ಮೂಲ ಸೌಲಭ್ಯಗಳನ್ನು ಪಡೆಯಲು ಅವರಿಗೆ ಅವಕಾಶ ಒದಗಿಸಿತ್ತು. ಆರಂಭದಲ್ಲಿ ಅರ್ಜಿಗಳನ್ನು ಸಂಬಂಧಪಟ್ಟ ನಮೂನೆಯಲ್ಲಿ ತುಂಬಿಸಿ ಸಲ್ಲಿಸಿದರೆ ಸಾಕಾಗುತ್ತಿತ್ತು, ಆಗ ಸುಲಭವಾಗಿ ಜನರು ತಮ್ಮ ಅರ್ಜಿಗಳನ್ನು ಸಲ್ಲಿಸಿ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಇದನ್ನು ಆನ್‌ಲೈನ್ ನಲ್ಲಿ ಸಲ್ಲಿಸುವಂತೆ ಸೂಚನೆ ಬಂದಿದೆ. ಆದರೆ ಮೂಲನಿವಾಸಿಗಳು ಇದೀಗ ತಮ್ಮ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳಿಗೆ ಅನುಮತಿ ಪಡೆಯಲು ಏನು ಮಾಡಬೇಕು ಎಂದು ತಿಳಿಯದೆ ಪರದಾಡುತ್ತಿದ್ದಾರೆ. ನಿರೀಕ್ಷೆ ಹುಸಿಯಾಗಿದೆ
ಕಳೆದ ಮೂರು ನಾಲ್ಕು ತಿಂಗಳುಗಳಿಂದ ಆನ್‌ಲೆ„ನ್ ಅರ್ಜಿ ಸಲ್ಲಿಸುವುದಕ್ಕಾಗಿ ಓಡಾಡುತ್ತಿದ್ದೇನೆ. ಆದರೆ ಯಾರಿಗೂ ಅರ್ಜಿ ಸಲ್ಲಿಸುವುದು ಹೇಗೆಂದೇ ತಿಳಿದಿಲ್ಲ . ನಮ್ಮ ಪ್ರದೇಶಗಳಿಗೂ ರಸ್ತೆ, ವಿದ್ಯುತ್ ಬೇಕು ಎಂಬುದು ನಮ್ಮ ಕನಸು. ಅರಣ್ಯ ಹಕ್ಕು ಯೋಜನೆಯಲ್ಲಿ ಅದು ಸಾಧ್ಯವಾಗಬಹುದು ಎಂದು ನಂಬಿದ್ದೆವು. ಆದರೆ ಇದೀಗ ಆ ನಿರೀಕ್ಷೆಯೂ ಹುಸಿಯಾಗುತ್ತಿದೆ, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.
-ಜಯಾನಂದ ಪಿಲಿಕಳ , ಸವಣಾಲು
Related Articles
ಆನ್‌ಲೈನ್ ಅರ್ಜಿ ಸಲ್ಲಿಕೆಯ ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ಹಿರಿಯ ಅ ಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅ ಧಿಕಾರಿಗಳೊಂದಿಗೂ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿ ಒಂದೆರಡು ದಿನಗಳಲ್ಲಿಯೇ ಆನ್‌ಲೆ„ನ್ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡುತ್ತೇವೆ.
– ಮೋಹನ್‌ಕುಮಾರ್,
ಸಮಾಜ ಕಲ್ಯಾಣ ಅಧಿಕಾರಿ ಬೆಳ್ತಂಗಡಿ.
Advertisement