ನಿಡಗುಂದಿ: ಕೇಂದ್ರ ಸರಕಾರ ಜಾರಿ ಮಾಡಿದ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ 50 ತಡೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿ 50ನ್ನು ಮಧ್ಯಾಹ್ನ ಕೆಲ ಕಾಲ ತಡೆದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ತಿರುಪತಿ ಬಂಡಿವಡ್ಡರ ಮಾತನಾಡಿ, ಕೇಂದ್ರ ಸರಕಾರ ಜಾರಿ ಮಾಡಿದ ಕೃಷಿ ಕಾಯ್ದೆಗಳು ರೈತ ವಿರೋಧಿ ಯಾಗಿವೆ. ರೈತ ವಿರೋಧಿ ಭೂ ಸುಧಾರಣೆ ಕಾಯ್ದೆ ಕೈಬಿಡಬೇಕು. ವಿದ್ಯುತ್ ಖಾಸಗೀಕರಣ ಸಂಪೂರ್ಣ ನಿಷೇ ಧಿಸಬೇಕು. ಡಾ| ಸ್ವಾಮಿನಾಥನ್ ವರದಿಯಾಧಾರಿತ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಅನಾರೋಗ್ಯದಿಂದ ಯೋಧ ರಾಕೇಶ್ ನಿಧನ
ನಿಂಗರಾಜ ಆಲೂರ, ಸಂಗಣ್ಣ ಕೋತಿನ, ಬಾವಾಸಾಬ ವಾಲೀಕಾರ, ಸುಭಾಷ್ ಚೌಪಡೆ, ಸಾಬಣ್ಣ ಮಾದರ, ಮಹಾದೇವ ಮಾದರ, ಸರಸ್ವತಿ ವಸ್ತ್ರದ, ಪೀರಸಾಬ ನದಾಫ್, ಶಿವಪ್ಪ ಪಾಟೀಲ, ಮಲ್ಲಯ್ಯ ನಾಗೂರ, ವಿಠಲ ವಡ್ಡರ ಇತರರಿದ್ದರು.