ಮುಂಬಯಿ, ಜ. 8: ಮುಂಬಯಿಯ ಮಹಾನಗರ ಪಾಲಿಕೆ ಮತ್ತು ರಾಜ್ಯದಪ್ರಮುಖ ಚುನಾವಣೆಗಳಲ್ಲಿ ಮಹಾವಿಕಾಸ್ ಅಘಾಡಿಯ ಮೂರು ಪಕ್ಷಗಳು ಒಟ್ಟಾಗಿ ಹೋರಾಡಲಿವೆ ಎಂದು ಶಿವಸೇನೆ ಮತ್ತು ಎನ್‌ಸಿಪಿ ಕಳೆದ ಕೆಲವು ದಿನಗಳಿಂದ ಹೇಳುತ್ತಿವೆ.
ಆದರೆ ಮುಂಬಯಿ ಕಾಂಗ್ರೆಸ್ ಅಧ್ಯಕ್ಷ ಭಾಯ್ ಜಗತಾಪ್ ಅವರು ಕಾಂಗ್ರೆಸ್ ನಿಲುವನ್ನು ಪ್ರಸ್ತುತಪಡಿಸಿ ನಾವು ಏಕಾಂಗಿಯಾಗಿ ಹೋರಾಡುವು ದಾಗಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು, ನಾವು ವಾರ್ಡ್‌ನಲ್ಲಿ 100 ದಿನಗಳ ಪರಿಶೀಲನೆ ನಡೆಸಲು ಯೋಜಿಸಿದ್ದೇವೆ.
ಈ ಸಂದರ್ಭ ಅಲ್ಲಿ ನಡೆದ ಕಾರ್ಯಗಳನ್ನು ಪರಿಶೀ ಲಿಸಲಿದ್ದೇವೆ. ಅಲ್ಲದೆ ನಾವು ಏಕಾಂಗಿಯಾಗಿ ಹೋರಾಡಲು ನಿರ್ಧರಿಸಿದ್ದೇವೆ ಎಂದು ಭಾಯ್ ಜಗತಾಪ್ ಹೇಳಿದ್ದಾರೆ. ಮುಂಬಯಿ ಕೊಳೆಗೇರಿ ನಿವಾಸಿಗಳಿಗೆ ಉಚಿತ ನೀರು ಒದಗಿಸಬೇಕು. ನಿಗಮದ ಬೊಕ್ಕಸಕ್ಕೆ 168 ಕೋಟಿ ರೂ.ಗಳ ಭಾರವಿದ್ದರೂ ಬಡವರಿಗೆ ಉಚಿತ ನೀರು ಒದಗಿಸು ವುದು ಆವಶ್ಯಕ.
ವಾಟರ್ ಮಾಯಾ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವು ದರಿಂದ ಬಡವರು ಇದರಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಬಡವರಿಗೆ ನೀರನ್ನು ಒದಗಿಸಬೇಕು. ಕೊಳೆಗೇರಿ ನಿವಾಸಿಗಳ ಮನೆಗಳನ್ನು ಕ್ರಮಬದ್ಧಗೊಳಿಸುವಂತೆ ದೇವೇಂದ್ರ ಫಡ್ನವೀಸ್ ಘೋಷಿಸಿದ್ದರು, ಆದರೆ ಮುಂದೆ ಏನಾಯಿತು ಎಂದು ಭಾಯ್ ಜಗತಾಪ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಅಮೀರಾ ಪುನ್ವಾನಿ ಹುಟ್ಟುಹಬ್ಬ ಆಚರಿಸಿದ ಅನುಷ್ಕಾ
ನಾವು ಮುಂಬಯಿ ಮಹಾನಗರ ಪಾಲಿಕೆಯಲ್ಲಿ ವಿಪಕ್ಷದಲ್ಲಿದ್ದೇವೆ ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದೇವೆ. ಮಹಾನಗರ ಪಾಲಿಕೆ ಮತ್ತು ಮಹಾವಿಕಾಸ್ ಅಘಾಡಿಯ ನಡುವೆ ಯಾವುದೇ ಸಂಬಂಧವಿಲ್ಲ. ನಾವು ಇಲ್ಲಿ ವಿಪಕ್ಷದಲ್ಲಿದ್ದೇವೆ. ಆದ್ದರಿಂದ ನಾವು 227 ಸ್ಥಾನಗಳಿಗೆ ಹೋರಾಡುವ ಬಗ್ಗೆ ಈ ಹಿಂದೆ ಹೇಳಿದ್ದೇವೆ ಭಾಯ್ ಜಗತಾಪ್ ತಿಳಿಸಿದ್ದಾರೆ.