ಯಾದಗಿರಿ: ಜಿಲ್ಲೆಯ ಸುರಪುರ ಶಾಸಕರ ಜನ್ಮದಿನದ ಬ್ಯಾನರ್ ಹಾಗೂ ಕಟೌಟ್ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಗಳ ನಡೆದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ಅವರ ಹುಟ್ಟುಹಬ್ಬದ ಬ್ಯಾನರ್ ಗಳನ್ನು ಕಟ್ಟುವ ಸಮಯದಲ್ಲಿ ಈ ಜಗಳ ನಡೆದಿದೆ. ಪರಿಣಾಮ ಟಾಟಾ ಏಸ್ ವಾಹನದ ಗಾಜು ಪುಡಿ ಮಾಡಲಾಗಿದೆ.
ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ ಕೇಳಿ ಬಂದಿದ್ದು, ಬರ್ತ್ ಡೇ ಬ್ಯಾನರ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ಹರಿದು ಹಾಕಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಶಾಸಕರ ರಾಜು ಗೌಡರ ಜನ್ಮದಿನವಾಗಿದ್ದು ಇದಕ್ಕಾಗಿ ಗುರುವಾರ ರಾತ್ರಿ ಕಾರ್ಯಕರ್ತರು ಶುಭಾಶಯ ಬ್ಯಾನರ್- ಕಟೌಟ್ ಗಳನ್ನು ಕಟ್ಟುತ್ತಿದ್ದರು.
ಬ್ಯಾನರ್ ಕಟ್ಟಲ್ಲು ತಂದಿದ್ದ ಟಾಟಾ ಏಸ್ ವಾಹನದ ಗ್ಲಾಸ್ ಧ್ವಂಸವಾಗಿದೆ.