ಬೆಂಗಳೂರು: ಕುರುಬರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದೇನೆ, ಮುಂದೆಯೂ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತುಮಕೂರಿನಲ್ಲಿ ಶನಿವಾರ ನಡೆದ ಕುರುಬ ಜನಜಾಗೃತಿ ಸಮಾ ವೇಶದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಶೇ.33 ಮೀಸಲಾತಿ ಕೊಡಬೇಕೆಂದು ತೀರ್ಮಾನಿಸಿದ್ದೇ ನಾವು. 1995ರ ವರೆಗೂ ಹಿಂದುಳಿದವರಿಗೆ ಅಷ್ಟು ಮೀಸಲಾತಿ ಇರಲಿಲ್ಲ. ಇವತ್ತು ಅದನ್ನೆಲ್ಲ ಹಾಳು ಮಾಡಲು ಹೊರಟಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಪುಟ್ಟರಂಗಶೆಟ್ಟಿಗೆ ಹೆದರಿಸಿ ಬಿಟ್ಟರು ಎಂದು ದೂರಿದರು.
ಈ ವರದಿ ಬರಲು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಜಪ್ಪಯ್ಯ ಅಂದರೂ ಬಿಜೆಪಿ ಅವರು ವರದಿ ತೆಗೆದುಕೊಳ್ಳೋಕೆ ತಯಾ ರಿಲ್ಲ. ನಾವು ಬಂದ ತತ್‌ಕ್ಷಣ ತೆಗೆದು ಕೊಳ್ಳುತ್ತೇವೆ ಎಂದೂ ಸಿದ್ದು ಭರವಸೆ ನೀಡಿದರು.
ಸಿದ್ದರಾಮಯ್ಯ ಹೇಳಿದ್ದೇನು?
-ನಮ್ಮ ಸಮಾಜದ ಎಲ್ಲ ಜಾತಿ, ವರ್ಗಗಳು ರಾಜಕೀಯವಾಗಿ ಜಾಗೃತರಾಗಬೇಕಾದ ಅಗತ್ಯ ಇದೆ.
– ಸ್ವತಂತ್ರ ಭಾರತದಲ್ಲಿ ಬಲಾಡ್ಯರ ಕೈಯಲ್ಲಿ ಅಧಿಕಾರ ಇರಬಾರದು ಎಂದು ಅಂಬೇಡ್ಕರ್ ಹೇಳಿದ್ದರು. ಎಲ್ಲ ವರ್ಗದವರು ಸಬಲರಾದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗುತ್ತದೆ.
– ನನಗೆ ಶಾಸಕನಿಂದ ಹಿಡಿದು ಮುಖ್ಯಮಂತ್ರಿವರೆಗೂ ಅಧಿಕಾರ ಸಿಕ್ಕಿದೆ. ಇದಕ್ಕೆಲ್ಲ ಕಾರಣ ನೀವು ಹಾಗೂ ಕೆಳವರ್ಗದ ಜನರು.
– ನಾನು ಸಿಎಂ ಆಗಿದ್ದಾಗ ಯಾರೂ ಹಸಿವಿನಿಂದ ಮಲಗಬಾರದು ಎಂದು ಅಕ್ಕಿ ಭಾಗ್ಯ ಕೊಟ್ಟೆ.
– ನಾನು ಕುರುಬ ಜನಾಂಗದಲ್ಲಿ ಹುಟ್ಟಿದ್ದೇನೆ. ಅವರಿಗೆ ನ್ಯಾಯ ಕೊಡೋ ಕೆಲಸ ಮಾಡಬೇಕು. ಜತೆಗೆ ಯಾರ್ಯಾರು ಸಮಾಜದಲ್ಲಿ ವಂಚಿತರಿದ್ದಾರೋ ಅವರೆಲ್ಲರಿಗೂ ನ್ಯಾಯ ಕೊಡೋದು ನನ್ನ ಕರ್ತವ್ಯ.
Related Articles