ಗುಡಿಬಂಡೆ: ಅನೇಕ ಮಹನೀಯರ,ಯೋಧರ ತ್ಯಾಗ ಬಲಿದಾನಗಳಿಂದ ನಮ್ಮದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ನಮಗೆಲ್ಲಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹನೀಯರನ್ನು ಸದಾಕಾಲ ನೆನೆದು ಅವರಮಾರ್ಗದರ್ಶನದಲ್ಲಿ ನಡೆದಾಗ ಮಾತ್ರಸ್ವಾತಂತ್ರ್ಯ ದಿನಾಚರಣೆಗೆಅರ್ಥಬರುತ್ತದೆಎಂದು ಶಾಸಕ ಎಸ್.ಎನ್.ಸುಬ್ಟಾರೆಡ್ಡಿಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಬಾಲಕಿಯರಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳಆಚರಣಾ ಸಮಿತಿ ಏರ್ಪಡಿಸಿದ್ದ 75ನೇಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿಮಾತನಾಡಿ, ರಾಷ್ಟ್ರೀಯ ಹಬ್ಬಗಳುಶಾಲೆಗಳಿಗೆ ಮಾತ್ರ ಸೀಮಿತವಾಗದೇ,ಪ್ರತಿಯೊಬ್ಬರು ಧಾರ್ಮಿಕ ಹಬ್ಬಗಳಂತೆತಮ್ಮ ಮನೆಗಳಲ್ಲಿ ಆಚರಿಸಿ ಎಂದರು.
ಯೋಧರ ಸೇವೆ ಮರೆಯಬಾರದು:ರಾಷ್ಟ್ರೀಯ ಹಬ್ಬಗಳಲ್ಲಿ ಜನತೆಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಮಾಡಬೇಕು.ಆದರೆ, ಇತ್ತೀಚಿನಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಕಡಿಮೆಯಾಗಿದೆ. ನಾವೆಲ್ಲ ಇಲ್ಲಿ ನೆಮ್ಮದಿಯಾಗಿಜೀವಿಸುತ್ತಿದ್ದೇವೆ ಎಂದರೇ ಅದು ಗಡಿಕಾಯುವ ಯೋಧರಿಂದ ಎಂಬುದನ್ನುಮರೆಯಬಾರದು ಎಂದು ತಿಳಿಸಿದರು.
ಈಗಾಗಲೇ ಗುಡಿ ಬಂಡೆ ತಾಲೂಕಿನಬಹುತೇಕ ರಸ್ತೆಗಳು ಗುಣಮಟ್ಟದಿಂದಕೂಡಿವೆ. ಮುಂದಿನ ದಿನಗಳಲ್ಲಿ ಗುಡಿಬಂಡೆ ತಾಲೂಕನ್ನು ಪ್ರವಾಸಿ ತಾಣವನ್ನಾಗಿಮಾಡಲು ಎಲ್ಲಾ ಸಿದ್ಧತೆ ಮಾಡುತ್ತಿದ್ದೇನೆ.ಹತ್ತಿರದಲ್ಲೇ ಕ್ರೀಡಾಂಗಣಕ್ಕೆ ಜಾಗಮಂಜೂರು ಮಾಡಲು ಇರುವ ತೊಡಕುನಿವಾರಿಸಿ, ಜಾಗ ಮಂಜೂರುಮಾಡಿಸುತ್ತೇನೆ ಎಂದು ಹೇಳಿದರು.
ಮುಖ್ಯಾಧಿಕಾರಿಗಳಿಗೆ ಸೂಚನೆ:ಪಟ್ಟಣದ ರಸ್ತೆ ಅಗಲೀಕರಣದ ಸಮಯದಲ್ಲಿ ಮನೆಕಳೆದುಕೊಂಡವರಿಗೆ ನಿವೇಶನನೀಡಲು ಜಾಗ ಗುರುತಿಸಿದ್ದು,ಶೀಘ್ರದಲ್ಲಿಯೇ ನಿವೇಶನ ನೀಡಲುಮುಖ್ಯಾಧಿಕಾರಿಗಳಿಗೆ ಸೂಚನೆನೀಡಿದ್ದೇನೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ ಹಲವು ವರ್ಷಗಳ ಹಿಂದೆಸಾಗುವಳಿ ಚೀಟಿ ಮಂಜೂರಿಗೆ ಅರ್ಜಿಸಲ್ಲಿಸಿಕೊಂಡದ್ದವರಿಗೆ ಸಾಗುವಳಿ ಚೀಟಿಮತ್ತು ಪಹಣಿಗಳನ್ನು ಶಾಸಕರು ರೈತರಿಗೆವಿತರಣೆ ಮಾಡಿದರು.
ತಹಶೀಲ್ದಾರ್‌ಸಿಗ್ಬತುಲ್ಲಾ, ಇಒ ರವೀಂದ್ರ, ವೃತ್ತ ನಿರೀಕ್ಷಕಲಿಂಗರಾಜು, ಸರ್ಕಾರಿ ನೌಕರರ ಸಂಘದಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷಬಾಲಾಜಿ, ಜಿಪಂ ಮಾಜಿ ಸದಸ್ಯೆಗಾಯತ್ರಿ, ಪಪಂ ಮಾಜಿ ಸದಸ್ಯ ದ್ವಾರಕನಾಥನಾಯ್ಡು,ಕೃಷ್ಣೇಗೌಡ ಇತರರಿದ್ದರು.