Advertisement

ನಾಗರಹೊಳೆಯಲ್ಲಿ ಆವಾಸ ಸ್ಥಾನಕ್ಕಾಗಿ ವ್ಯಾಘ್ರಗಳ ಕಾದಾಟ: ಗಂಡು ಹುಲಿ ಸಾವು

05:52 PM Jul 31, 2022 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆವಾಸ ಸ್ಥಾನಕ್ಕಾಗಿ ನಡೆದ ಕಾದಾಟದಲ್ಲಿ ಸುಮಾರು7-8 ವರ್ಷದ ಗಂಡು ಹುಲಿ ಸಾವನ್ನಪ್ಪಿದೆ.

Advertisement

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ  ಆನೆಕೂರು ವನ್ಯಜೀವಿ ವಲಯದ ಚೆನ್ನಂಗಿ ಶಾಖೆಯ ಅಟ್ಟೂರು ಉಪ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ  ಹುಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.

ಸಿಬ್ಬಂದಿಗಳ ಮಾಹಿತಿ ಮೇರೆಗೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ, ಎ.ಸಿ.ಎಫ್.ಎ.ವಿ.ಸತೀಶ್ ಆರ್.ಎಫ್.ಓ.ಗಣರಾಜ್ ಪಟಗಾ‌ರ್,  ಆನೆಚೌಕೂರು ವನ್ಯಜೀವಿ ವಲಯ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ  ನಿರ್ದೇಶನಗೊಂಡ ಬೋಸ್ ಮಾದಪ್ಪ, ಮುಖ್ಯ ವನ್ಯಜೀವಿ ಪರಿಪಾಲಕರಾಗಿ ನಿರ್ದೇಶಿತರಾದ ಶರೀ‌ನ್ ಸುಬ್ಬಯ್ಯರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ:  ಮೈಸೂರು: ವ್ಯಕ್ತಿಯನ್ನು ಬಲಿ ಪಡೆದ ತಂಬಾಕು ಜಮೀನಿನಲ್ಲಿ ಅಡಗಿದ್ದ ಹುಲಿ

ನಾಗರಹೊಳೆ ಪಶುವೈದ್ಯ ಡಾ. ರಮೇಶ್ ಮತ್ತು ಪಾಲಿಬೆಟ್ಟ ಪಶು ವೈದ್ಯಾಧಿಕಾರಿ ಡಾ.ವಿ.ಎಸ್. ನವೀನ್ ಕುಮಾರ್ ರವರು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದರು.

Advertisement

ಅಂದಾಜು ಏಳರಿಂದ ಎಂಟು ವರ್ಷದ ಗಂಡು ಹುಲಿಯಾಗಿದ್ದು, ತನ್ನ ಆವಾಸ ಸ್ಥಾನದ ಅಧಿಪತ್ಯಕ್ಕಾಗಿ ಬೇರೊಂದು ಹುಲಿಯೊಂದಿಗೆ ಕಾದಾಟದಲ್ಲಿ ಉಂಟಾದ ಗಾಯದಿಂದ ಮೃತಪಟ್ಟಿದೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಹೆಚ್ಚಿನ ಪರೀಕ್ಷೆಗಾಗಿ ಮೃತ ಹುಲಿಯ ಕಳೇಬರದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಂದ ನಂತರವಷ್ಟೆ ನಿಖರ ಮಾಹಿತಿ ತಿಳಿಯಲಿದೆ. ಮೃತ ಹುಲಿಯ ಕಳೇಬರವನ್ನು ಪಂಚಾಯಿತಿದಾರರ ಸಮಕ್ಷಮ ಸುಡಲಾಯಿತೆಂದು  ಹುಲಿ ಯೋಜನೆ ನಿರ್ದೇಶಕ ಹರೀಶ್ ಕುಮಾರ್ ನರಗುಂದ ರವರು ಉದಯವಾಣಿಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next