ವಿಟ್ಲ: ಕನ್ಯಾನ ಗ್ರಾ.ಪಂ. ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆ ವೇಳೆ ರಿಕ್ಷಾ ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾನೆ ಎಂದು ಆರೋಪಿಸಿ, ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಕರೀಂ ಅವರ ಪುತ್ರ ಸಾದಿಕ್ ಅವರು ಹಲ್ಲೆಗೊಳಗಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳಾದ ರಿಕ್ಷಾ ಉಮ್ಮರ್, ಭಾತಿಷ್, ಆರಿಸ್ ಕುಕ್ಕಾಜೆ, ಮಜೀದ್, ಕೆ ಪಿ ಅಬ್ದುಲ್ ರಹಿಮಾನ್, ಸಾಬಿತ್, ಇಸ್ಮಾಲಿ ಕುಕ್ಕಾಜೆ, ಆಸೀಫ್, ನಾಸೀರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅತ್ತಾವರ ಬಬ್ಬುಸ್ವಾಮಿ ಕ್ಷೇತ್ರದ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ ಪತ್ತೆ!
ಕನ್ಯಾನ ಜಂಕ್ಷನ್‌ನ ಸಿಂಡಿಕೇಟ್ ಬ್ಯಾಂಕ್ ಬಳಿ ರಸ್ತೆಯಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ಮೆರವಣಿಗೆ ತೆರಳುತ್ತಿದ್ದಾಗ ವಿರುದ್ದ ದಿಕ್ಕಿನಿಂದ ಸಾದಿಕ್ ಆಟೊ ಚಲಾಯಿಸಿಕೊಂಡು ಬರುತ್ತಿದ್ದ. ಈ ವೇಳೆ ಸಾದಿಕ್ ಅಡ್ಡಾದಿಡ್ಡಿ ರಿಕ್ಷಾ ಚಲಾವಣೆ ಮಾಡಿದ್ದಾನೆಂದು ಆರೋಪಿಸಿ ಉಮ್ಮರ್, ಭಾತಿಷಾ, ಆರೀಸ್ ಕುಕ್ಕಾಜೆ, ಮಜೀದ್, ಕೆ.ಪಿ ಅಬ್ದುಲ್ ರಹೀಮಾನ್, ಸಾಬೀತ್ ,ಇಸ್ಮಾಲಿ ಕುಕ್ಕಾಜೆ, ಅಸೀಪ್, ನಾಸೀರ್ ರಿಕ್ಷಾವನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಉಮ್ಮರ್ ಎಂಬಾತ ಆಟೋ ರಿಕ್ಷಾದಿಂದ ಸಾದಿಕ್ ನನ್ನು ಎಳೆದು ಹಾಕಿ, ಮರದ ಕೋಲಿನಿಂದ ಹೊಡೆದಿದ್ದಾನೆ ಎಂದು ಗಾಯಾಳು ಆರೋಪಿಸಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.