Advertisement

ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಉಭಯ ಸದನಗಳಲ್ಲಿಯೂ ಹೋರಾಟ: ಹರಿಪ್ರಸಾದ್

02:14 PM Sep 12, 2022 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಉಭಯ ಸದನಗಳಲ್ಲಿಯೂ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರ ಜೊತೆ ಮಾತನಾಡಿ, ಮಳೆಗಾಲದ ಅಧಿವೇಶನ ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ಮಳೆ ಅನಾಹುತ, ಸರ್ಕಾರದ ವೈಫಲ್ಯದ, ಜನರ ಕಷ್ಟಗಳ ಬಗ್ಗೆ ಸದನದಲ್ಲಿ ಮಾತನಾಡುತ್ತೇವೆ. ಇದಕ್ಕೆ ಅವಕಾಶ ಕೋರಿದ್ದೇವೆ. ಪೊಲೀಸ್ ಇಲಾಖೆಯಲ್ಲಿನ ನೇಮಕಾತಿ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಈ ಹಿಂದೆ ಸದನದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಆದರೆ ನಂತರದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಬಂಧನ ಆಯಿತು. ತಾನು ತಪ್ಪಿಸಿಕೊಳ್ಳಲು ಐಪಿಎಸ್ ಅಧಿಕಾರಿಯನ್ನು ಬಲಿ ಕೊಟ್ಟರು. ಅಂತಹ ಗೃಹ ಸಚಿವರು ಇದ್ದರೆ ಅಮಿತ್ ಶಾ ಬಿಟ್ಟರೆ ಆರಗ ಮಾತ್ರ ಎಂದು ಹೇಳಿದರು.

ಇದನ್ನೂ ಓದಿ:ಅಯೋಧ್ಯೆ ಬೃಹತ್ ರಾಮ ಮಂದಿರ ನಿರ್ಮಾಣಕ್ಕೆ 1,800 ಕೋಟಿ ರೂಪಾಯಿ ವೆಚ್ಚವಾಗಲಿದೆ: ಟ್ರಸ್ಟ್

40% ಕಮಿಷನ್ ಆರೋಪದ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಮಳೆಯಿಂದ ಜನರು ಯಾವ ರೀತಿ ತತ್ತರಿಸುತ್ತಿದ್ದಾರೆ ಎಂಬ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು. ಪಿಎಸ್ ಐ ಅಕ್ರಮಕ್ಕೆ ಸಂಬಂಧಿಸಿದಂತೆ 46 ಜನ ಅಧಿಕಾರಿಗಳನ್ನು ಜೈಲಿಗೆ ಹೋಗಿದ್ದಾರೆ. ಈಗಾಗಲೇ ಗೃಹ ಸಚಿವರು ಪರಪ್ಪನ ಅಗ್ರಹಾರಕ್ಕೆ ಹೋಗಿ ಜೈಲು ಯಾವ ರೀತಿ ಇದೆ ಎಂದು ನೋಡಿಕೊಂಡು ಬಂದಿದ್ದಾರೆ. ಅವರು ಕೂಡಾ ಹೋಗಲು ತಯಾರಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

Advertisement

ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ. ಜನೋತ್ಸವದ ಸಂದರ್ಭದಲ್ಲಿ ಶೋಕಾಚರಣೆ ಇದ್ದರೂ ಮಂತ್ರಿ ಶಾಸಕರು ಡ್ಯಾನ್ಸ್ ಮಾಡ್ತಾರೆ. ಜನರು ಸಂಕಷ್ಟದಲ್ಲಿ ಇದ್ದಾರೆ.  ಇದು ಒಂದು ರೀತಿಯ ವಿಕೃತಿಯ ನಡೆ. ಬಿಜೆಪಿಗರು ವಿಕೃತ ಮನೋಭಾವದವರು ಎಂದು ದೇಶಕ್ಕೆ ತೋರಿಸಿಕೊಟ್ಟರು ಎಂದು ವಿವರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next