Advertisement

ಮುಂದಿನ ತಿಂಗಳು ಪ್ರಧಾನಿ ಮೋದಿ-ಜಿಯಾನಿ ಇನ್‌ಫಾಂಟಿನೊ ಭೇಟಿ?

11:03 PM Sep 19, 2022 | Team Udayavani |

ಕೋಲ್ಕತಾ: ವಿಶ್ವ ಫುಟ್‌ಬಾಲ್‌ ಆಡಳಿತ ಮಂಡಳಿ (ಫಿಫಾ) ಯ ಅಧ್ಯಕ್ಷ ಜಿಯಾನಿ ಇನ್‌ಫಾಂಟಿನೊ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ಭಾರತೀಯ ಫುಟ್‌ಬಾಲ್‌ನ ಮುಂದಿನ ಹಾದಿಯ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

Advertisement

ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಅ.ಭಾ. ಫುಟ್‌ಬಾಲ್‌ ಫೆಡರೇಶನ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಅ. 11ರಿಂದ 30ರ ವರೆಗೆ ಭಾರತದಲ್ಲಿ ನಡೆಯಲಿರುವ ಫಿಫಾ ವನಿತೆಯರ ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ಅಂತಿಮ ಹಂತದಲ್ಲಿ ಇನ್‌ಫಾಂಟಿನೊ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಸಭೆಯ ಆರಂಭದಲ್ಲಿಯೇ ಎಐಎಫ್ಎಫ್ ಅಧ್ಯ ಕ್ಷರು ಫಿಫಾ ಅಧ್ಯಕ್ಷರ ಭಾರತ ಭೇಟಿ ಮತ್ತು ಪ್ರಧಾನಿ ಮೋದಿ ಜತೆ ಚರ್ಚೆ ನಡೆಸುವ ಸಾಧ್ಯತೆಯನ್ನು ತಿಳಿಸಿದರು ಎಂದು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next