Advertisement

ಕ್ಷೇತ್ರ ಪುನರ್ವಿಂಗಡಣೆ ಅವೈಜ್ಞಾನಿಕ: ದತ್ತ

02:55 PM Mar 30, 2021 | Team Udayavani |

ಚಿಕ್ಕಮಗಳೂರು: ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ ಅವೈಜ್ಞಾನಿಕವಾಗಿದ್ದು ಚುನಾವಣಾ ಆಯೋಗಮತ್ತು ಜಿಲ್ಲಾಡಳಿತ ತಕ್ಷಣ ಸರಿ ಪಡಿಸಬೇಕೆಂದು ಕಡೂರುಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್‌ ಮುಖಂಡ ವೈ. ಎಸ್‌.ವಿ. ದತ್ತ ಆಗ್ರಹಿಸಿದರು.

Advertisement

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಚುನಾವಣಾಆಯೋಗ ಕ್ಷೇತ್ರ ವಿಂಗಡಣೆ 10 ವರ್ಷಗಳಿಗೊಮ್ಮೆನಡೆಸುತ್ತಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆಬಂದ ಮೇಲೆ ಚುನಾವಣಾ ಆಯೋಗದ ಮೇಲೆ ತನ್ನ ಪ್ರಭಾವ ಬಳಸಿ 5 ವರ್ಷಕ್ಕೆ ಕ್ಷೇತ್ರ ಪುನರ್‌ ವಿಂಗಡಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು, ಯಾವುದೇ ಸರ್ಕಾರ ಚುನಾವಣಾ ಆಯೋಗದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂದ ಅವರು, ಚುನಾವಣಾ ಆಯೋಗ ಈಗ ಹೊರಡಿಸಿರುವ ಕ್ಷೇತ್ರ ಪುನರ್‌ ವಿಂಗಡಣೆ ಅನೇಕ ಲೋಪದೋಷಗಳಿಂದ ಕೂಡಿದೆ. ಆಕ್ಷೇಪಣೆಯನ್ನು ಸಲ್ಲಿಸಲಾಗಿದೆ.

ಲೋಪದೋಷಗಳನ್ನು ಸರಿಪಡಿಸಬೇಕು. ದೋಷಪೂರಿತ ಜಿಪಂ ಮತ್ತುತಾಪಂ ಕ್ಷೇತ್ರ ಪುನರ್‌ ವಿಂಗಡಣೆಯಿಂದ ತಳಸಮುದಾಯದವರಿಗೆ ಅನ್ಯಾಯವಾಗಲಿದೆ. ಬಲಾಡ್ಯರಿಗೆಅನುಕೂಲವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 49 ಗ್ರಾಪಂ ಹೊಂದಿದ್ದು, ಗ್ರಾಪಂ ಮತ್ತು ಭೌಗೋಳಿಕ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಆದರೆ, ತಾಪಂ23ರಿಂದ 24 ಸಾವಿರ ಜನಸಂಖ್ಯೆ ಹಾಗೂ ಜಿಪಂ 30ಸಾವಿರ ಜನಸಂಖ್ಯೆ ಆಧಾರದ ಮೇಲೆ ವಿಂಗಡಣೆ ಮಾಡುವ ಮೂಲಕ ತಾರತಮ್ಯ ನೀತಿ ಅನುಸರಿಸಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ರಾಜ್ಯ ಉಪಾಧ್ಯಕ್ಷ ಎಚ್‌.ಎಚ್‌.ದೇವರಾಜ್‌, ಜೆಡಿಎಸ್‌ಮುಖಂಡರಾದ ಚಂದ್ರಪ್ಪ, ಯಗಟಿ ತಮ್ಮಯಣ್ಣ,ರಾಜಪ್ಪ, ಪ್ರೇಮ್‌ಕುಮಾರ್‌, ಗಂಗಾಧರಯ್ಯ, ಷಣ್ಮುಖಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next