Advertisement

ಹೊಸ ವೈರಾಣು ಸವಾಲು

08:42 AM Jan 29, 2019 | |

ಇಂದೋರ್‌: ನಿಗೂಢವಾದ ವೈರಾಣುವೊಂದು ಇಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 4 ತಿಂಗಳಲ್ಲಿ ಇದರ ಸೋಂಕಿಗೆ ಒಳಗಾದವರಲ್ಲಿ 64 ಜನರು ಪ್ರಾಣ ತೆತ್ತಿದ್ದಾರೆ ಎಂಬ ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.

Advertisement

ಈ ವೈರಾಣು (ವೈರಸ್‌) ತಗುಲಿದ ವ್ಯಕ್ತಿಗಳು ಹಂದಿ ಜ್ವರ ಹೋಲುವ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಉತ್ತರ ಭಾರತದ ಅಲ್ಲಲ್ಲಿ, ಈಗಾಗಲೇ ಹಂದಿ ಜ್ವರ, ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಈವರೆಗೆ 39 ಹಂದಿ ಜ್ವರ ಪ್ರಕರಣ, 350 ಡೆಂಗ್ಯೂ ಜ್ವರ ಪ್ರಕರಣಗಳು ದಾಖಲಾಗಿವೆ.

ಆದರೆ, ಇವೆರಡನ್ನೂ ಮೀರಿದ ಮತ್ತೂಂದು ಮಾದರಿಯ ಜ್ವರ ಲಕ್ಷಣಗಳು ಕಾಣಿಸಿಕೊಂಡಿರುವುದು ವೈದ್ಯರಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ಹಾಗಾಗಿ,ಜ್ವರದಿಂದ ದಾಖಲಾಗಿರುವ ಎಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಭೋಪಾಲ್‌ನಲ್ಲಿರುವ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 

ಹಂದಿ ಜ್ವರದ ವೈರಾಣುಗಳು ಪ್ರತಿ ವರ್ಷ ತಮ್ಮ ವಂಶವಾಹಿಯಲ್ಲಿ ಬದಲಾವಣೆ ಹೊಂದುವ ಮೂಲಕ ಹೊಸ ವೈರಸ್‌ಗಳಾಗಿ ಮಾರ್ಪಡುತ್ತವೆ. ನೂತನ ವೈರಸ್‌ಗಳ ಜ್ವರವೂ, ಹಂದಿ ಜ್ವರಕ್ಕೆ ಹೋಲುತ್ತಿದೆ. ಹಾಗಾಗಿ, ಹೊಸ ವೈರಾಣುಗಳು, ಹಂದಿ ಜ್ವರದ ವೈರಾಣುಗಳ ಹೊಸ ಸ್ವರೂಪವಿರಬಹುದು.
ಡಾ| ಅಮಿತ್‌ ಮಳಕರ್‌, ಐಡಿಎಸ್‌ಪಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next