ವಾಡಿ: ರಾಜಕೀಯ ಅಧಿಕಾರ ಶಾಶ್ವತವಾಗಿ ಉಳಿಯುವುದಿಲ್ಲ. ಜನಪ್ರತಿನಿಧಿ ಯಾದವರು ಮಾಜಿ ಆಗುವ ಮುಂಚೆಯೇ ಜನರ ಕಷ್ಟಗಳನ್ನುಕೇಳಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿ ಕಾರಿ ಶ್ರೀ ಸಿದ್ಧಲಿಂಗ ದೇವರು ನುಡಿದರು.
ರಾವೂರ ಗ್ರಾಪಂಗೆ ಅವಿರೋಧವಾಗಿಆಯ್ಕೆಯಾದ ಎಲ್ಲ 32 ಜನ ನೂತನ ಸದಸ್ಯರಿಗೆಶನಿವಾರ ಮಠದ ವತಿಯಿಂದ ಸಾಮೂಹಿಕ ಸನ್ಮಾನಮಾಡಿ, ಶ್ರೀಗಳು ಆಶೀರ್ವಚನ ನೀಡಿದರು.ಗ್ರಾಮದಲ್ಲಿ ಕಲಹ ಉಂಟಾಗಾಬಾರದು.ಕುಡುಕರ ಸಂಖ್ಯೆ ಹೆಚ್ಚಾಗಬಾರದು. ಕುಟುಂಬಗಳುಒಡೆದು ಛಿದ್ರವಾಗಬಾರದು. ಸೌಹಾರ್ದತೆಉಳಿದು ಗ್ರಾಮಸ್ಥರು ಸಂತೋಷದಿಂದ ಬಾಳಬೇಕು ಎನ್ನುವ ಸದಾಶಯದಿಂದ ಊರಿನ ಮುಖಂಡರುಪಕ್ಷಬೇಧ ಮರೆತು ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಲು ಶ್ರಮಿಸಿದ್ದಾರೆ. ಊರಿನ ಅಭಿವೃದ್ಧಿ ಮಾಡುವ ಮೂಲಕ ಹಿರಿಯರ ನಿರೀಕ್ಷೆ ಈಡೇರಿಸಬೇಕು ಎಂದರು. ಗೆದ್ದು ಮನೆಯಲ್ಲಿ ಕೂಡದೆ, ಸ್ವಾರ್ಥ ಕೆಲಸಗಳಿಗಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳದೇ ಜನರ ಬೇಡಿಕೆಗಳನ್ನು ಈಡೇರಿಸಲು ಪಣ ತೊಡಬೇಕು ಎಂದು ಹೇಳಿದರು.
ಜಿ.ಪಂ ಸದಸ್ಯ ಅಶೋಕ ಸಗರ, ಹಿರಿಯರಾದ ಡಾ| ಗುಂಡಣ್ಣ ಬಾಳಿ ಮಾತನಾಡಿದರು. ಗ್ರಾಮದಹಿರಿಯ ಮುಖಂಡರಾದ ಚೆನ್ನಣ್ಣ ಬಾಳಿ, ಶಿವಲಿಂಗಪ್ಪ ವಾಡೇದ, ಅಬ್ದುಲ್ ಮಶಾಕ್, ಗುರುನಾಥಗುದಗಲ್, ಅಣ್ಣಾರಾವ್ ಬಾಳಿ, ರಾಮಚಂದ್ರ ರಾಠೊಡ, ತಿಪ್ಪಣ್ಣ ವಗ್ಗರ, ಸಾಹೇಬಗೌಡ ತಳವಾರ, ದೇವಿಂದ್ರ ತಳವಾರ, ಕೈಲಾಸ ಚವ್ಹಾಣ, ಯುನ್ಯೂಸ್ ಪ್ಯಾರೆ, ಮಹೇಶ ಬಾಳಿ, ಬಸವರಾಜ ಮಡ್ಡಿ,ಮಾಳಪ್ಪ ಕೊಳ್ಳಿ, ವೆಂಕಟೇಶ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.
ಗ್ರಾಪಂ ವ್ಯಾಪ್ತಿಯ ಎಲ್ಲ 32 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದ ಸದಸ್ಯರನ್ನು ಸಿದ್ಧಲಿಂಗ ಶ್ರೀಗಳು ಸನ್ಮಾನಿಸಿದರು. ಶರಣು ಜ್ಯೋತಿ ನಿರೂಪಿಸಿ, ವಂದಿಸಿದರು.
ಕಲಬುರಗಿಯಲ್ಲಿ ತೊಗರಿ ಸಂಸ್ಕರಣಾ ಘಟಕ : ಔಷಧಿಧೀಯ ಸತ್ವಗಳಿಂದ ಕೂಡಿದ ಬೆಳೆಗಳನ್ನೇ ಹೆಚ್ಚು ಬೆಳೆಯುತ್ತಿರುವ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಸಂಸ್ಕರಣಾ ಘಟಕ ಸ್ಥಾಪಿಸುವ ಚಿಂತನೆನಡೆದಿದೆ. ಅಂಗನವಾಡಿ ಕೇಂದ್ರಗಳಿಗೆ ಮಂಡಳಿಯಿಂದಲೇ ತೊಗರಿ ಬೇಳೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ತೊಗರಿ ನಾಡಿನಲ್ಲಿರೈತರಿಗೆ ಅನುಕೂಲಕರವಾದ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ. ದ್ವಿದಳ ಧಾನ್ಯ ಬೆಳೆಯುವ ಕಲ್ಯಾಣ ನಾಡಿನ ರೈತರು ಸಂತೋಷವಾಗಿರಬೇಕು. ತೊಗರಿ ಬೆಳೆಗಾರರಿಗೆ ಏನಾದರೂಉತ್ತಮ ಯೋಜನೆ ಜಾರಿಗೆ ತರಬೇಕು ಎಂಬುದುನನ್ನಾಸೆಯಾಗಿದೆ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಜ್ಯ ದ್ವಿದಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ತಿಳಿಸಿದ್ದಾರೆ.