ಹೊಸದಿಲ್ಲಿ: ಹಬ್ಬಗಳ ಋತುವಿನ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಬ್ಯಾಂಕ್‌ಗಳಾದ ಭಾರತೀಯ ಸ್ಟೇಟ್ ಬ್ಯಾಂಕ್, ಐಸಿಐಸಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಯೆಸ್ ಬ್ಯಾಂಕ್ ಇತ್ಯಾದಿಗಳು ಗೃಹಸಾಲ ಬಡ್ಡಿದರಗಳಲ್ಲಿ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿವೆ.
ಎಸ್‌ಬಿಐ ಇದೇ ಮೊದಲ ಬಾರಿಗೆ ಕ್ರೆಡಿಟ್ ಸ್ಕೋರ್ ಲಿಂಕ್ಡ್ ಗೃಹಸಾಲಗಳಿಗೆ ಎಷ್ಟೇ ಮೊತ್ತದ ಸಾಲವಾಗಿದ್ದರೂ ಶೇ. 6.70 ಬಡ್ಡಿದರ ಪ್ರಕಟಿಸಿದೆ.
ಈ ಹಿಂದೆ 75 ಲಕ್ಷಕ್ಕಿಂತ ಹೆಚ್ಚು ಮೊತ್ತದ ಗೃಹಸಾಲಕ್ಕೆ ಶೇ. 7.15 ಬಡ್ಡಿದರ ಇತ್ತು. ಗೃಹಸಾಲ ಸಂಸ್ಕರಣೆ ಶುಲ್ಕವನ್ನೂ ರದ್ದುಪಡಿಸಲಾಗಿದೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ 50 ಲಕ್ಷಗಳಿಗಿಂತ ಹೆಚ್ಚು ಮೊತ್ತದ ಗೃಹಸಾಲಗಳ ಬಡ್ಡಿದರವನ್ನು ಶೇ. 6.60ಕ್ಕೆ ಇಳಿಸಿದೆ.
ಐಸಿಐಸಿಐ ಬ್ಯಾಂಕ್ ಗ್ರಾಹಕರು ಶೇ. 6.70 ಬಡ್ಡಿದರದಲ್ಲಿ ಗೃಹಸಾಲ ಪಡೆಯಬಹುದು. ಯೆಸ್ ಬ್ಯಾಂಕ್ ಸೀಮಿತ ಅವಧಿಗೆ ಶೇ. 6.7 ಬಡ್ಡಿದರದಲ್ಲಿ ಗೃಹಸಾಲ ನೀಡುತ್ತಿದೆ.
ಇದನ್ನೂ ಓದಿ:ಐವಿಎಫ್ ಮೂಲಕ 6 ಕರು ಸೃಷ್ಟಿ! ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ವೈಜ್ಞಾನಿಕ ಪ್ರಯೋಗ ಯಶಸ್ವಿ