ಅಹ್ಮದಾಬಾದ್: “ಕೊರೊನಾ ಹಾಗೂ ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ದೇಶದಲ್ಲಿ ರಸಗೊಬ್ಬರದ ಅಭಾವ ತೀವ್ರವಾಗಿ ಆವರಿಸಿದೆ. ಇದನ್ನು ಮನಗಂಡಿರುವ ಸರಕಾರ ದೇಶದ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಪೂರೈಕೆ ಮಾಡಲು ಕ್ರಮ ಕೈಗೊಂಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಶನಿವಾರದಂದು ಗಾಂಧಿನಗರದಲ್ಲಿ ನೂತನವಾಗಿ ಅಂದಾಜು 175 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸ ಲಾಗಿರುವ ಅತ್ಯಾಧುನಿಕ ನ್ಯಾನೊ ದ್ರವರೂಪದ ಯೂರಿಯಾ ಉತ್ಪಾದನ ಘಟಕವನ್ನು ಅವರು ಉದ್ಘಾಟಿಸಿದರು. ಇದೇ ವೇಳೆ ಆಯೋಜಿಸಲಾಗಿದ್ದ, ಸಹಕಾರ ಸೇ ಸಮೃದ್ಧಿ (ಸಹಕಾರದಿಂದ ಸಮೃದ್ಧಿ) ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸರಕಾರ ರೈತರ ಬೆಂಬಲಕ್ಕೆ ಸದಾ ನಿಂತಿದೆ.
ಆಮದಾಗುತ್ತಿರುವ ರಸಗೊಬ್ಬರದ ಒಂದು ಬ್ಯಾಗ್‌ನ ಬೆಲೆ 3,500 ರೂ. ಇದ್ದು, ಇದನ್ನು ರೈತರಿಗೆ 300 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನುಳಿದ 3,200 ರೂ.ಗಳನ್ನು ಸರಕಾರವೇ ಭರಿಸುತ್ತಿದೆ ಎಂದು ಅವರು ವಿವರಿಸಿದರು.
“2014ರಲ್ಲಿ ಕೇಂದ್ರದಲ್ಲಿ ತಮ್ಮ ಸರಕಾರ ಅಧಿಕಾರಕ್ಕೆ ಬಂದ ಅನಂತರ ಶೇ. 100ರಷ್ಟು ಬೇವು ಲೇಪಿತ ಯೂರಿ ಯಾವನ್ನು ಉತ್ಪಾದಿಸಲು ಆರಂಭಿಸಲಾಗಿದೆ. ಇದರಿಂದ ದೇಶೀಯ ರೈತರಿಗೆ ರಸಗೊಬ್ಬರ ಯಥೇಚ್ಚವಾಗಿ ಸಿಗುವಂತೆ ನೋಡಿಕೊಳ್ಳಲಾಗಿದೆ. ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್, ಒಡಿಶಾ ಹಾಗೂ ತೆಲಂಗಾಣದಲ್ಲಿ ಬಂದ್ ಆಗಿದ್ದ ಯೂರಿಯಾ ಕಾರ್ಖಾನೆಯನ್ನು ಪುನ ರಾರಂಭಿಸಲಾಗಿದೆ” ಎಂದು ಮೋದಿ ತಿಳಿಸಿದ್ದಾರೆ.