Advertisement

ಫಿರೋಜ್‌ಪುರ ಸಂಸದ ಶೇರ್‌ ಸಿಂಗ್‌ ಘುಬಯಾ ಕಾಂಗ್ರೆಸ್‌ ಪಕ್ಷಕ್ಕೆ

06:39 AM Mar 05, 2019 | udayavani editorial |

ಹೊಸದಿಲ್ಲಿ : ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕ್ಕೆ ರಾಜೀನಾಮೆ ನೀಡಿದ ಒಂದು ದಿನದ ತರುವಾಯ ಫಿರೋಜ್‌ಪುರ ಸಂಸದ ಶೇರ್‌ ಸಿಂಗ್‌ ಘುಬಯಾ ಅವರು ಇಂದು ಮಂಗಳವಾರ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೇರಿಕೊಂಡಿದ್ದಾರೆ.

Advertisement

ಕಾಂಗ್ರೆಸ್‌ ಮುಖ್ಯಸ್ಥರ ಮನೆಯಲ್ಲಿ ನಡೆದಿದ್ದ ಪಕ್ಷ ಸೇರ್ಪಡೆ ಪ್ರಕ್ರಿಯೆ ವೇಳೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ಸುನೀಲ್‌ ಕುಮಾರ್‌ ಜಾಖಡ್‌, ಪಂಜಾಬ್‌ ಕಾಂಗ್ರೆಸ್‌ ವ್ಯವಹಾರಗಳ ಎಐಸಿಸಿ ಪ್ರಭಾರಿ ಆಶಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

ಘುಬಯಾ ಅವರು ಫಿರೋಜ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಬಲ ಆಕಾಂಕ್ಷಿ ಅಭ್ಯರ್ಥಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next