Advertisement

ಬೆಂಗಳೂರು: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರ ಮೇಲುಗೈ ಎಂಬುದು ಸರ್ವೇಸಾಮಾನ್ಯ. ಆದರೆ, ರಾಜ್ಯದ ಒಟ್ಟು ಮತದಾರರಲ್ಲೂ ಮಹಿಳೆಯರದ್ದೇ ಪಾರುಪಾತ್ಯ ಆಗಿದೆ. ಪರಿಷ್ಕೃತ ಮತದಾರರ ಪಟ್ಟಿಯಂತೆ ಅರ್ಧ ರಾಜ್ಯದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು ಇದ್ದಾರೆ.

Advertisement

ರಾಜ್ಯದ ಒಟ್ಟು ಮತದಾರರಲ್ಲಿ ಮಹಿಳೆಯ ಸಂಖ್ಯೆ ಕಡಿಮೆ ಇದ್ದರೂ 15 ಜಿಲ್ಲೆಗಳಲ್ಲಿ ಮಹಿಳಾಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2022ರ ಅಂತಿಮ ಮತದಾರರ ಪಟ್ಟಿಪ್ರಕಟವಾಗಿದ್ದು, ಅದರಂತೆ 5.25 ಕೋಟಿಮತದಾರರು ಇದ್ದು, ಅದರಲ್ಲಿ 2.64 ಕೋಟಿ ಪುರುಷರು, 2.60 ಕೋಟಿ ಮಹಿಳೆಯರು ಇದ್ದಾರೆ. ಇತರರು 4,715 ಮತದಾರರು ಇದ್ದಾರೆ.

2021ರ ಅಂತಿಮ ಮತದಾರರ ಪಟ್ಟಿಯಂತೆ 3.27 ಲಕ್ಷ ಮತದಾರರು ಹೆಚ್ಚಾಗಿದ್ದಾರೆ. 4.01ಲಕ್ಷ ಯುವ ಮತದಾರರು ಇದ್ದು, ಅದರಲ್ಲಿ 1.04ಲಕ್ಷ 18 ವರ್ಷದ ಮತದಾರರು ಇದ್ದಾರೆ.ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಪ್ರಕಟಿಸಿರುವ ಮಾಹಿತಿಯಂತೆ ಬಾಗಲಕೋಟೆ,ರಾಯಚೂರು, ಕೊಪ್ಪಳ, ಬಳ್ಳಾರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ,ಕೋಲಾರ, ರಾಮನಗರ, ಮಂಡ್ಯ, ದಕ್ಷಿಣ ಕನ್ನಡ,ಕೊಡಗು, ಮೈಸೂರು ಹಾಗೂ ಚಾಮರಾಜನಗರಜಿಲ್ಲೆಗಳಲ್ಲಿ ಪುರಷರಿಗಿಂತ ಮಹಿಳಾ ಮತದಾರರುಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ವೇಳೆ ಗೋಕಾಕ್‌,ವಿಜಯಪುರ ನಗರ, ಸೇಡಂ, ಕೊಪ್ಪಳ, ಕಾರವಾರ, ಭದ್ರಾವತಿ, ಬೈಂದೂರು, ನರಸಿಂಹರಾಜ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಅಧಿಕವಾಗಿದ್ದಾರೆ.

2022ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 2021ರ ಆಗಸ್ಟ್‌ನಿಂದ ಆರಂಭವಾಗಿತ್ತು. 2022ರ ಜ.13ರಂದು ಅಂತಿಮ ಮತದಾರರ ಪಟ್ಟಿಪ್ರಕಟಿಸಲಾಗಿದ್ದು, ಮತದಾರರ-ಜನಸಂಖ್ಯಾಅನುಪಾತ ಶೇ.70.76 ಇದೆ. ಈ ಬಾರಿಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿಎಪಿಕ್‌ ನಂಬರ್‌ ನೀಡುವ ಮತ್ತು ಫೋಟೋ ಜೋಡಣೆ ಶೇ.100ರಷ್ಟುಆಗಿದೆ. 47,776 ಸೇವಾ ಮತ ದಾರರು(ಸರ್ವಿಸ್‌ ಓಟರ್), 4.23 ಸಾವಿರ ಅಂಗವಿಕಲ ಮತದಾರರು ಇದ್ದಾರೆ.

ಉಡುಪಿ, ತುಮಕೂರು, ಕೋಲಾರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಪರಿಣಾಮ ಕಾರಿಯಾಗಿ ನಡೆದಿದೆ ಎಂದು ಚುನಾವಣಾಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಲಿಂಗಾನುಪಾತ ಕೊಂಚ ಏರಿಕೆ: 2011ರ ಜನಗಣತಿ ಪ್ರಕಾರ ಲಿಂಗಾನುಪಾತ 973 ಇದ್ದರೆ,2022ರ ಅಂತಿಮ ಮತದಾರರ ಪಟ್ಟಿ ಪ್ರಕಾರಲಿಂಗಾನುಪಾತ 984 ಆಗಿದ್ದು, ಕಳೆದ ನಾಲ್ಕುವರ್ಷಗಳಲ್ಲಿ ಲಿಂಗಾನುಪಾತ ಸಣ್ಣ ಪ್ರಮಾಣದಲ್ಲಿಏರಿಕೆ ಕಂಡಿದೆ. 2108ರಲ್ಲಿ ಲಿಂಗಾನುಪಾತ 972,2019ರಲ್ಲಿ 976, 2020ರಲ್ಲಿ 981, 2021ರಲ್ಲಿ 983 ಹಾಗೂ 2022ರಲ್ಲಿ 984 ಆಗಿದೆ. ಈ ವರ್ಷಗಳಲ್ಲಿಮಹಿಳಾ ಮತದಾರರ ನೋಂದಣಿ ಸಹ ಹೆಚ್ಚಾಗಿದೆ.ಅದರ ಪರಿಣಾಮ ಲಿಂಗಾನುಪಾತದಲ್ಲೂ ಕೊಂಏರಿಕೆ ಕಂಡಿದೆ. 2022ರ ಅಂತಿಮ ಪಟ್ಟಿ ಪ್ರಕಾರ ಸಾವಿರ ಪುರಷ ಮತದಾರರಿಗೆ 984 ಮಹಿಳಾ ಮತದಾರರು ಇದ್ದಾರೆ.

ಶೇ.74ರಷ್ಟು ಆನ್‌ಲೈನ್‌ ಅರ್ಜಿ :

ಮತದಾರರ ಪಟ್ಟಿ ಪರಿಷ್ಕರಣೆಗೆ 2021ರ ನ.1ರಿಂದ ಡಿ.8ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು ಸಲ್ಲಿಕೆಯಾದ 6.12 ಲಕ್ಷಕ್ಕೂ ಹೆಚ್ಚು ಅರ್ಜಿಗಳಲ್ಲಿ 4.61 ಲಕ್ಷಕ್ಕೂ ಹೆಚ್ಚು, ಅಂದರೆ ಶೇ.76ರಷ್ಟು ಅರ್ಜಿಗಳು ಆನ್‌ಲೈನ್‌ ಮೂಲಕ ಸಲ್ಲಿಕೆಯಾಗಿದ್ದು 1.51 ಲಕ್ಷಕ್ಕೂ ಹೆಚ್ಚು ಅರ್ಜಿಗಳು (ಶೇ.24) ಆಫ್ಲೈನ್‌ ಮೂಲಕಸಲ್ಲಿಕೆಯಾಗಿವೆ. ಕಳೆದ ಬಾರಿಗೆ ಹೊಲಿಸಿದರೆ ಆನ್‌ಲೈನ್‌ ಅರ್ಜಿ ಸಲ್ಲಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಅಂದರೆ ಶೇ.34ರಷ್ಟು ಏರಿಕೆಯಾಗಿದೆ.

ಪುರುಷರ ಮೇಲುಗೈ :  ಅರ್ಧ ರಾಜ್ಯದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ದ್ದರೆ, ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರಿ ಗಿಂತ ಪುರುಮತದಾರರು ಹೆಚ್ಚಿದ್ದಾರೆ. ಬೆಂಗಳೂರು ನಗರ ಸೇರಿಕೊಂಡತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ, ಉತ್ತರ, ದಕ್ಷಿಣ ವಲಯದಲ್ಲೂ  ಮಹಿಳೆಯರಿಗಿಂತ ಪುರುಷ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

 2022ರ ಅಂತಿಮ ಮತದಾರರ ಪಟ್ಟಿ :

ಪುರುಷರು: 2,64,60,225

ಮಹಿಳೆಯರು: 2,60,42,784

ಇತರರು : 4,715

ಒಟ್ಟು : 5,25,07,724

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next