Advertisement
* ಜೈನಾಬ್ ಅಬ್ಟಾಸ್ಪಾಕಿಸ್ಥಾನದವರಾದ ಜೈನಾಬ್ ಅಬ್ಟಾಸ್ ತವರಿನಲ್ಲಿ ಪಿಎಸ್‌ಎಲ್ ಸೇರಿ ಹಲವು ಕ್ರಿಕೆಟ್ ಶೋಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಂತೆಯೇ ಅನೇಕ ಖ್ಯಾತ ಆಟಗಾರರ ಮತ್ತು ಕ್ರಿಕೆಟ್ ಅಧಿಕಾರಿಗಳ ಸಂದರ್ಶನಗಳನ್ನು ಮಾಡಿದ್ದಾರೆ. ಕ್ರಿಕೆಟ್‌ನ ಉತ್ತಮ ಜ್ಞಾನ ಮತ್ತು ಅನುಭವ ಹೊಂದಿರುವ ಜೈನಾಬ್ ಪಕ್ಷಪಾತರಹಿತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರು ಮಾಡಿರುವ ಸಂದರ್ಶನಗಳು, ಕ್ರಿಕೆಟಿಗರ ಜತೆಗಿನ ಮಾತುಕತೆಗಳು ನಿಜಕ್ಕೂ ಲವಲವಿಕೆಯಿಂದ ಕೂಡಿವೆ.
ಪುಣೆಯ ರಿಧಿಮಾ ಪಾಠಕ್ ಅವರದ್ದು ಬಹುಮುಖೀ ಅಭಿರುಚಿ. ರೇಡಿಯೊ ಜಾಕಿ ಆಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಎಂಜಿನಿಯರಿಂಗ್ ಕಲಿಯುತ್ತಿರುವಾಗಲೇ ಇನ್ನೂ ಹಲವು ಕೆಲಸಗಳನ್ನು ಹುಡುಕಿಕೊಂಡಿದ್ದರು. ನಟಿ, ಮಾಡೆಲ್, ಟಿವಿ ನಿರೂಪಕಿ… ಹೀಗೆ ನಾನಾ ಅವತಾರಗಳಲ್ಲಿ ರಿಧಿಮಾ ಕಾಣಿಸಿಕೊಂಡಿದ್ದಾರೆ. ಕೊಂಚ ಸಮಯ ಕಾರ್ಪೋರೇಟ್ ಕಂಪೆನಿಯೊಂದರಲ್ಲಿ ನೌಕರಿ ಮಾಡಿದ ಬಳಿಕ ಅವರು ಕ್ರಿಕೆಟ್ ಫೀಲ್ಡ್‌ಗೆ ಬಂದರು. ಸ್ಟಾರ್ ನ್ಪೋರ್ಟ್ಸ್, ಸೋನಿ ಸಿಕ್ಸ್, ಟೆನ್ ನ್ಪೋರ್ಟ್ಸ್, ಝೀ ಸ್ಟುಡಿಯೊ ಮತ್ತಿತರ ಚಾನೆಲ್‌ಗಳಲ್ಲಿ ಕ್ರೀಡಾ ನಿರೂಪಕಿಯಾಗಿ ಹಲವು ಖ್ಯಾತ ಆಟಗಾರರ ಸಂದರ್ಶನ ಮಾಡಿದ್ದಾರೆ. ಏಶ್ಯನ್ ಗೇಮ್ಸ್-2018ಕ್ಕೂ ಅವರು ನಿರೂಪಕಿಯಾಗಿದ್ದರು. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರ ಸಂದರ್ಶನ ಮಾಡಿ ಮಿಂಚಿದ್ದಾರೆ. * ಎಲ್ಮಾ ಸ್ಮಿತ್
ದಕ್ಷಿಣ ಆಫ್ರಿಕಾದ ಎಲ್ಮಾ ಸ್ಮಿತ್ ಕೂಡ ವೃತ್ತಿ ಜೀವನ ಪ್ರಾರಂಭಿಸಿದ್ದು ರೇಡಿಯೊ ಜಾಕಿ ಆಗಿ. ನ್ಯೂಜಿಲ್ಯಾಂಡ್‌ನಲ್ಲಿ ನಡೆದ ರಗಿº ವರ್ಲ್ಡ್ ಕಪ್ 2011ರ ಪ್ರಸೆಂಟರ್ ಆದ ಬಳಿಕ ಎಲ್ಮಾ ಕ್ರೀಡಾ ಜಗತ್ತಿನಲ್ಲಿ ಖ್ಯಾತರಾದರು. 2011ರಲ್ಲಿ ಎಂಕೆ ಅವಾರ್ಡ್ಸ್ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಕಿಯಾದದ್ದು ಅವರ ಕಿರುತೆರೆಯ ಮೊದಲ ಅನುಭವ. ಸೂಪರ್ ನ್ಪೋಟ್‌ರ್ಸ ಟಿವಿಯ ನಿರೂಪಕಿಯಾಗಿರುವ ಎಲ್ಮಾ ಕ್ರಿಕೆಟ್ ಪ್ರಸೆಂಟೇಶನ್‌ನಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.
Related Articles
ಬಾಂಗ್ಲಾದೇಶದ ಮಾಡೆಲ್ ಪೆಯಾ ಜನ್ನತುಲ್ 2007ರ ಮಿಸ್ ಬಾಂಗ್ಲಾ ಸೌಂದರ್ಯ ಸ್ಪರ್ಧೆಯ ವಿಜೇತೆ. ವೃತ್ತಿಯಿಂದ ವಕೀಲೆಯಾಗಿರುವ ಪೆಯಾ 2008ರಲ್ಲಿ ಮೋಡೆಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟರು. 2013ರಲ್ಲಿ ಮಿಸ್ ಇಂಡಿಯನ್ ಪ್ರಿನ್ಸೆಸ್ ಇಂಟರ್‌ನ್ಯಾಶನಲ್ ಸೌಂದರ್ಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಥಳೀಯ ಟಿವಿ ವಾಹಿನಿಗಳಲ್ಲಿ ಕ್ರಿಕೆಟ್ ನಿರೂಪಕಿಯಾಗಿ ಜನಪ್ರಿಯರಾಗಿರುವ ಪೆಯಾರನ್ನು ಟಿವಿ ವಾಹಿನಿಯೊಂದು ಬಾಂಗ್ಲಾ ತಂಡದ ಕವರೇಜ್‌ಗಾಗಿ ಕಳುಹಿಸಿದೆ.
Advertisement
* ಮಾಯಾಂತಿ ಲ್ಯಾಂಗರ್ಹಲವು ವರ್ಷಗಳಿಂದ ಸ್ಟಾರ್ ನೆಟ್‌ವರ್ಕ್ ಸಮೂಹದಲ್ಲಿರುವ ಮಾಯಾಂತಿ ಲ್ಯಾಂಗರ್ ಭಾರತದ ಜನಪ್ರಿಯ ನ್ಪೋರ್ಟ್ ಪ್ರಸೆಂಟರ್. ಭಾರತೀಯ ಕ್ರೀಡಾಪ್ರೇಮಿಗಳಿಗೆ ಮಾಯಾಂತಿಯನ್ನು ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಮಾಯಾಂತಿ ಕ್ರೀಡಾ ಪ್ರಸೆಂಟೇಶನ್ ವೃತ್ತಿಯನ್ನು ಆರಂಭಿಸಿದ್ದು ಫುಟ್‌ಬಾಲ್ ಪ್ರಸೆಂಟರ್ ಆಗಿ. ಫಿಫಾ ವರ್ಲ್ಡ್ಕಪ್ 2010ರಲ್ಲಿ ಅವರು ಪ್ರಸೆಂಟರ್ ಆಗಿದ್ದರು. ಅನಂತರ ಕ್ರಿಕೆಟ್ ಒಲವು ಬೆಳೆಸಿಕೊಂಡ ಮಾಯಾಂತಿ 2011ಮತ್ತು 2015ರ ವಿಶ್ವಕಪ್‌ಗ್ೂ ಪ್ರಸೆಂಟರ್ ಆಗಿದ್ದರು. ಈ ಸಲದ ಪ್ರಸೆಂಟರ್‌ಗಳಲ್ಲಿ ಮಾಯಾಂತಿಯೇ ಹೆಚ್ಚು ಅನುಭವಿ ಎನ್ನಲಡ್ಡಿಯಿಲ್ಲ. ಸ್ಟಾರ್ ವಾಹಿನಿಯ ಪರವಾಗಿ ಅವರು ಈ ಸಲ ಇಂಗ್ಲೆಂಡ್‌ನಲ್ಲಿರುತ್ತಾರೆ.