Advertisement

ಸ್ತ್ರೀ-ಪುರುಷ ಹೊಂದಾಣಿಕೆಯಿಂದ ಮುನ್ನಡೆದರೆ ಪ್ರಗತಿ: ಅನುರಾಧಾ

02:04 PM Mar 10, 2017 | Team Udayavani |

ಉಡುಪಿ: ವೃತ್ತಿಯಲ್ಲಾಗಲಿ, ಸಮಾಜದಲ್ಲಾಗಲಿ ಮಹಿಳೆ ಹಾಗೂ ಪುರುಷರು ಪರಸ್ಪರ ವಿರೋಧಿಗಳಲ್ಲ. ಹೊಂದಾಣಿಕೆಯಿಂದ ಮುನ್ನಡೆದರೆ ಖಂಡಿತ ಪ್ರಗತಿ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅನುರಾಧಾ ಹೇಳಿದರು.

Advertisement

ಅವರು ಬುಧವಾರ ಸಿಂಡಿಕೇಟ್‌ ಬ್ಯಾಂಕಿನ ಉಡುಪಿ ವಲಯ ಕಚೇರಿಯಲ್ಲಿ ಬ್ಯಾಂಕಿನ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಹಿಳೆ ಅಬಲೆಯಲ್ಲ. ಅವಳು ಎಲ್ಲವನ್ನು ಸಾಧಿಸುವ ಮೂಲಕ ಸಬಲೆ ಅನ್ನುವುದನ್ನು  ನಿರೂಪಿಸುತ್ತಿದ್ದಾಳೆೆ. ಈಗ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಅದೇ ರೀತಿ ಕುಟುಂಬದಲ್ಲೂ ಆಕೆಗೆ ಪ್ರೋತ್ಸಾಹ, ಗೌರವ ಸಿಕ್ಕರೆ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ, ಬಾಲ್ಯವಿವಾಹ, ಲೈಂಗಿಕ ಕಿರುಕುಳ ಇಂತಹ ಪಿಡುಗನ್ನು ಮೆಟ್ಟಿನಿಲ್ಲಬೇಕಿದೆ. ಆಧುನಿಕತೆಯಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಮಹತ್ತರ ಹೊಣೆ ಮಹಿಳೆಯರ ಮೇಲಿದೆ. ಅದರ ಜತೆಗೆ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. 

ಜೆಎಂಎಫ್ಸಿ ನ್ಯಾಯಾಲಯದ ಮುಖ್ಯ ಸಿವಿಲ್‌ ನ್ಯಾಯಾಧೀಶೆ ವಿ. ಎನ್‌. ಮಿಲನಾ, ಸಿಂಡಿಕೇಟ್‌ ಬ್ಯಾಂಕಿನ ಉಪ ಮಹಾ ಪ್ರಬಂಧಕ ಎಸ್‌. ಎಸ್‌. ಹೆಗ್ಡೆ, ಎಡಿಜಿಎಂ ರವಿ, ಎಫ್ಜಿಎಂ ಸತೀಶ್‌ ಕಾಮತ್‌ ಉಪಸ್ಥಿತರಿದ್ದರು. ಮಹಿಳಾ ದಿನದ ಕುರಿತು ಎಲ್‌ಡಿಸಿಎಂ ಫ್ರಾನ್ಸಿಸ್‌ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಮಿ ಮುಕ್ತಾ ಶ್ರೀನಿವಾಸ್‌ ಹಾಗೂ ಸಮಾಜ ಸೇವಕಿ ಥೆರೇೆಸಾ ಪಾçಸ್‌ ಅವರನ್ನು ಸಮ್ಮಾನಿಸಲಾಯಿತು. ಎಲ್ಲ ಬ್ರಾಂಚ್‌ ಮುಖ್ಯಸ್ಥರನ್ನು ಗೌರವಿಸಲಾಯಿತು.

ನಿನಾದ ಭಟ್‌ ಸ್ವಾಗತಿಸಿದರು. ಅರ್ಚನಾ ಎನ್‌. ಕಾರ್ಯಕ್ರಮ ನಿರ್ವಹಿಸಿದರು. ರೇಖಾ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next