Advertisement
ಬೇಸಿಗೆಗೆ ಸೂಕ್ತವಾದ ಶೈಲಿಯ ಈ ಉಡುಗೆಯ ಸುದ್ದಿ ಈಗ್ಯಾಕೆ? ಫ್ಲೋರಲ್‌ಪ್ರಿಂಟ್‌ನ ಸೀರೆಗಳು ಮಾರ್ಕೆಟ್‌ಗೆ ಬಂದು ಎಷ್ಟೋ ಕಾಲವಾಗಿದೆ, ಮತ್ಯಾಕೆ ಈ ವಿಷಯ ಬಂತು ಎಂದಿರಾ? ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ, ಸಿನಿಮಾ ಪ್ರಚಾರದ ವೇಳೆ, ಕಪ್ಪುಬಣ್ಣದ ಫ್ಲೋರಲ್ ಪ್ರಿಂಟ್ ಸೀರೆಯುಟ್ಟು, ಟ್ರೆಂಡ್ ಸೃಷ್ಟಿಸಿದ್ದಾರೆ. ರಾಧಿಕಾ ಆಪ್ಟೆ, ಮಲಯಾಳಿ ನಟಿ ಅಹಾನ ಕೃಷ್ಣ ಕೂಡಾ ಹೂವಿನ ಪ್ರಿಂಟ್‌ನ ಸೀರೆಯುಟ್ಟು ಗಮನ ಸೆಳೆದಿರುವುದು, ಈ ಸೀರೆಗಳು ಟ್ರೆಂಡ್ ಆಗಲು ಮತ್ತೂಂದು ಕಾರಣ.
Related Articles
Advertisement
ಫ್ಲೋರಲ್ ಫೇರ್‌ವೆಲ್: ಕಾಲೇಜಿನ ಫೇರ್‌ವೆಲ್ ಡೇ ದಿನ ಹುಡುಗಿಯರೆಲ್ಲ ಸೀರೆ ಉಡಲು ಇಷ್ಟಪಡುತ್ತಾರೆ. ಆ ದಿನಕ್ಕೆ ಪಫೆìಕ್ಟ್ ಆಗಿ ಹೊಂದುವುದು, ಫ್ಲೋರಲ್ ಪ್ರಿಂಟ್ ಹಾಗೂ ಫ್ರಿಲ್ಸ್ ಇರುವ ಶಿಫಾನ್ ಸೀರೆಗಳು. ತಿಳಿಬಣ್ಣದ ಶಿಫಾನ್ ಸೀರೆ, ಬಿಳಿ ಬಣ್ಣದ ಕ್ಲಚ್, ಬಿಳಿ ಹೈ ಹೀಲ್ಸ್ ಹಾಗೂ ಮುತ್ತಿನ ಕಿವಿಯೋಲೆ- ಇವು ಕಳೆದ ವರ್ಷ ಟ್ರೆಂಡ್ ಸೃಷ್ಟಿಸಿರುವ ಫೇರ್‌ವೆಲ್ ಡ್ರೆಸ್ ಅಂತೆ.
ಇಂಗ್ಲಿಷ್ ವಿಂಗ್ಲಿಷ್ ಸೀರೆ: ಶ್ರೀದೇವಿ ಅಭಿನಯದ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ ನೋಡಿದ್ದೀರಾದರೆ, ಅದರಲ್ಲಿ ಶ್ರೀದೇವಿ ಫ್ಲೋರಲ್ ಪ್ರಿಂಟ್‌ನ ಶಿಫಾನ್ ಸೀರೆ ಉಟ್ಟಿರುವುದನ್ನು ಗಮನಿಸಿರಬಹುದು. ಅಂದ್ರೆ, ಈ ಟ್ರೆಂಡ್ ಹಳೆಯದಾದರೂ, ಎಂದಿಗೂ ಹಳೆಯದಾಗದು ಅಂತ ಅರ್ಥ. ಅಷ್ಟೇ ಅಲ್ಲ, ಹೂವಿನ ವಿನ್ಯಾಸದ ಸಿಂಪಲ್ ಸೀರೆಗಳು ಎಲ್ಲ ವಯೋಮಾನದವರಿಗೂ ಸೂಟ್ ಆಗುತ್ತವೆ.
ಸೀರೆ ಆಯ್ಕೆಯ ಸಿಂಪಲ್ ಟಿಪ್ಸ್-ನಿಮ್ಮ ಎತ್ತರವನ್ನು ಗಮನದಲ್ಲಿಟ್ಟುಕೊಂಡು ಫ್ಲೋರಲ್ ಪ್ರಿಂಟ್ ಸೀರೆಗಳನ್ನು ಆರಿಸಿಕೊಳ್ಳಬೇಕು. -ಕುಳ್ಳಗಿರುವವರು ಸಣ್ಣ ಪ್ರಿಂಟ್ ಇರುವ ಶಿಫಾನ್ ಸೀರೆಗಳನ್ನು, ಎತ್ತರವಿರುವವರು ಬೋಲ್ಡ್ ಫ್ಲೋರಲ್ ಪ್ರಿಂಟ್‌ನ ಸೀರೆಯುಟ್ಟರೆ ಚೆಂದ. -ಹೂವಿನ ಬಣ್ಣ ಮತ್ತು ವಿನ್ಯಾಸ ಬೋಲ್ಡ್ ಆಗಿದ್ದಾಗ, ಕಡಿಮೆ ಮೇಕಪ್ ಮಾಡಿಕೊಳ್ಳಿ. -ಫ್ಲೋರಲ್ ಪ್ರಿಂಟ್‌ನ ಶಿಫಾನ್ ಸೀರೆಗಳ ಮೇಲೆ ಕಸೂತಿ ಅಥವಾ ಸೀಕ್ವಿನ್‌ಗಳಂಥ ಹೆಚ್ಚಿನ ಅಲಂಕಾರ ಬೇಡ. -ದೊಡ್ಡ ಪ್ರಿಂಟ್‌ನ ಹೂವುಗಳಿದ್ದಾಗ ಬಾರ್ಡರ್ ಚಿಕ್ಕದಾಗಿದ್ದರೆ ಚೆನ್ನ. -ಫ್ಲೋರಲ್ ಶಿಫಾನ್ ಸೀರೆಗಳನ್ನು ಸಿಂಗಲ್ ಪಿನ್ ಹಾಕಿ ಉಟ್ಟರೆ ಚೆನ್ನಾಗಿ ಕಾಣುವುದು. -ದೊಡ್ಡ ಹೂವುಗಳ ಡಿಸೈನ್ ರೆಟ್ರೋ ಲುಕ್‌ನಂತೆ ಕಾಣಿಸಿದರೂ, ಈಗಲೂ ಟ್ರೆಂಡ್‌ನಲ್ಲಿದೆ. * ಅದಿತಿ ಮಾನಸ ಟಿ. ಎಸ್