Advertisement

ಶಿಕ್ಷಣದಿಂದ ಸ್ತ್ರೀ ಶಕ್ತಿ ಹೆಚ್ಚು ಬಲಿಷ್ಠ

12:41 PM Feb 05, 2018 | |

ಬೀದರ: ಪ್ರತಿ ಮಹಿಳೆ ಉನ್ನತ ಶಿಕ್ಷಣ ಪಡೆದಾಗ ಮಾತ್ರ ಸ್ತ್ರೀ ಶಕ್ತಿ ಮತ್ತಷ್ಟು ಬಲಿಷ್ಠಗೊಳ್ಳಲು ಸಾಧ್ಯ ಎಂದು ಪ್ರಧಾನ
ಜಿಲ್ಲಾ ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಸ್‌. ಪಾಟೀಲ ಹೇಳಿದರು.

Advertisement

ನಗರದ ಶಹಾಪುರ ಗೇಟ್‌ನ ಗಣೇಶ ಗಾರ್ಡನ್‌ ಅವರಣದಲ್ಲಿ ರವಿವಾರ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ತ್ರೀ ಶಕ್ತಿ ಸಂಘ ಹುಟ್ಟಿಕೊಂಡಿದ್ದು ತೆಲಂಗಾಣಾ ರಾಜ್ಯದಲ್ಲಾದರೂ ಇಂದು ಇಡೀ ದೇಶದಲ್ಲಿ ತನ್ನ ಶಕ್ತಿ ಆವರಿಸಿದೆ. ಆರಂಭದಲ್ಲಿ ತಮ್ಮ ಪತಿ ಸಾರಾಯಿ ಕುಡಿದು ಹಾಳಾಗುತ್ತಿದ್ದುದನ್ನು ತಡೆಯಲು ಆ ಕಾಲದಲ್ಲಿ ಸಾರಾಯಿ ಅಂಗಡಿಯೊಂದಕ್ಕೆ ಬೆಂಕಿ ಇಟ್ಟ ಉದಾಹರಣೆ ಇದೆ. ಇಂದು ಮಹಿಳೆ ತನ್ನ ಪತಿಯ ಸಾರಾಯಿ ವ್ಯಸನ ಬಿಡಿಸುವುದು ಔಷಧದಿಂದ ಸಾಧ್ಯವಿಲ್ಲ. ಬದಲಿಗೆ, ಕೈಯಲ್ಲಿ ತಂಬೂರಿ ಕೊಟ್ಟು ಸಾರಾಯಿ ಕುಡಿಯುವುದಿಲ್ಲ ಎಂದು ಕಂಠಪಾಠ ಮಾಡಿಸಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಸತ್ಯ ಜೀವಂತ ಉಳಿಯಬೇಕಾದರೆ ನಂಬಿಕೆ ಬಹು ಮುಖ್ಯವಾಗಿದ್ದು, ಅದು ಒಳ್ಳೆಯದಕ್ಕೆ ಸೀಮಿತವಾಗಿರಬೇಕು ಹೊರತು ಮೂಢನಂಬಿಕೆಗಲ್ಲ. ಉತ್ತಮ ನಂಬಿಕೆಯಿಂದ ಜೀವನದಲ್ಲಿ ಸದಾಚಾರದಿಂದ ಹಾಗೂ ನಿರೋಗಿಯಾಗಿ ಬದುಕಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಮನುಷ್ಯ ಎಲ್ಲ ರಂಗಗಳಲ್ಲಿ ಸಬಲನಾಗಿ ಬದುಕಲು ಕಾನೂನು ತಿಳಿವಳಿಕೆ ಅಗತ್ಯವಾಗಿದ್ದು, ಜೀವನದಲ್ಲಿ ಅನ್ಯಾಯ ಸಹಿಸುವುದು ಹಾಗೂ ಇತರರಿಗೆ ಕಷ್ಟ ನೀಡುವುದು ಸಹ ಮಹಾಪರಾಧವಾಗಿದ್ದು, ಕಾನೂನುಗಳನ್ನು ಚೆನ್ನಾಗಿ ಕರಗತ
ಮಾಡಿಕೊಂಡು ಸ್ವಾಭಿಮಾನಿ ಹಾಗೂ ಧೈರ್ಯಶಾಲಿಯಾಗಿ ಬದುಕಬೇಕೆಂದು ಕರೆ ನೀಡಿದರು.

Advertisement

ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಯಮನಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಗತ್ತಿನ ಅತೀ ದೊಡ್ಡ ಹಾಗೂ ಬಹು ವಿಸ್ತಾರವಾದ ಸಂವಿಧಾನ ನಮ್ಮ ದೇಶದ್ದು, ನಮಗೆ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಕಲಂ 21ರಲ್ಲಿ ಉಲ್ಲೇಖೀಸಲಾಗಿದೆ. ಸಂವಿಧಾನದ ಆಶಯಗಳನ್ನು ಅರಿತು ತಮಗಿರುವ ಎಲ್ಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತನ್ನ ಪಾಲಿನ ಕರ್ತವ್ಯವನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ದೇಶಕ್ಕೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದರು.

ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ನಂಜುಂಡಯ್ಯ, ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್‌.ರಾಘವೇಂದ್ರ, ಅರಣ್ಯ ಇಲಾಖೆಯ ಅಧಿಕಾರಿ ಅಬ್ದುಲ ಜಮೀರ್‌, ಪದ್ಮಸಾಲಿ ಸಮಾಜದ ಮುಖ್ಯಸ್ಥ ಮೋಹನರಾವ್‌ ಬಾಚಾ ವೇದಿಕೆಯಲ್ಲಿದ್ದರು. ಈ ವೇಳೆ ಅರಣ್ಯ ಇಲಾಖೆಯಿಂದ ಗಣೇಶ ಗಾರ್ಡನ್‌ ಅವರಣದಲ್ಲಿ ಸಾಂಕೇತಿಕವಾಗಿ ಕೆಲವು
ಸಸಿಗಳನ್ನು ನೆಡಲಾಯಿತು. ಮುಖಂಡ ನಾಗನಾಥ ವಿಶ್ವಕರ್ಮ ಸ್ವಾಗತಿಸಿದರು. ದೇವರಾಜಗೌಡ ನಿರೂಪಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಪೇನಿನಾ ಗೌಡ ವಂದಿಸಿದರು.

ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕರ್ನಾಟಕ ಮಹಿಳಾ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ
ಪದ್ಮಶಾಲಿ ಸಮಾಜಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತು.

Advertisement

Udayavani is now on Telegram. Click here to join our channel and stay updated with the latest news.

Next