Advertisement

ಪ್ರಮೋಷನ್‌ ಸಿಗದ್ದಕ್ಕೆ ಮಹಿಳಾ ಉದ್ಯೋಗಿ ನೇಣಿಗೆ 

12:18 PM May 26, 2017 | Team Udayavani |

ಬೆಂಗಳೂರು: ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಕ್ಕಿದ್ದ ಮಹಿಳೆಯೊಬ್ಬರು ವೃತ್ತಿಯಲ್ಲಿ ಬಡ್ತಿ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಿಂಡ್ಲುವಿನ ವಿಘ್ನೇಶ್ವರ ಲೇಔಟ್‌ನಲ್ಲಿ ನಡೆದಿದೆ. ಕೊಡಗು ಮೂಲದ ದಿವ್ಯ ದಮಯಂತಿ (28) ಆತ್ಮಹತ್ಯೆಗೆ ಶರಣಾದವರು.

Advertisement

ಪತಿ ತಿಮ್ಮಯ್ಯ ಹಾಗೂ ಮೂರು ವರ್ಷದ ಗಂಡುಮಗುವಿನ ಜೊತೆ ಹಲವು ವರ್ಷಗಳಿಂದ ವಿಘ್ನೇಶ್ವರ ಲೇಔಟ್‌ನಲ್ಲಿ ನೆಲೆಸಿದ್ದ ದಿವ್ಯಾ,  ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದರು. ತನಗೆ ಹಿರಿತನ ಇದ್ದು ಫ್ಲೋರ್‌ ಮ್ಯಾನೇಜರ್‌ ಪ್ರಮೋಷನ್‌ ನೀಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.

ಆದರೆ ಕಳೆದ ಒಂದು ವರ್ಷದಿಂದ ಹಲವು ಕಾರಣಗಳನ್ನು ಮುಂದಿಟ್ಟು ಬಡ್ತಿ ತಡೆಯಲಾಗಿತ್ತು. ಇದರಿಂದ ಖನ್ನರಾಗಿದ್ದ ದಿವ್ಯ, ಬುಧವಾರ ಕೂಡ ಕಚೇರಿಯಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಯಾವುದೇ ಭರವಸೆ ದೊರೆತಿರಲಿಲ್ಲ.

ಇದೇ ನೋವಿನಿಂದ ಸಂಜೆ ಮನೆಗೆ ಆಗಮಿಸಿದ್ದ ದಿವ್ಯ, ಮಗುವನ್ನು ಸಂಬಂಧಿಕರ ಮನೆಗೆ ಬಿಟ್ಟು, ಮರಳಿಗೆ ಮನಗೆ ಬಂದು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ರಾತ್ರಿ ಕೆಲಸ ಮುಗಿಸಿಕೊಂಡು ಪತಿ ತಿಮ್ಮಯ್ಯ ಮನೆಗೆ ಬಂದಾಗ ಘಟನೆ ಗೊತ್ತಾಗಿದೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next