ಗುಂಡ್ಲುಪೇಟೆ: ಸೀಬೆಹಣ್ಣು ಕೀಳಲು ಹೋಗಿ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು, ಅಕ್ಕ-ತಂಗಿ ಇಬ್ಬರೂ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಕೆಬ್ಬೇಪುರ ಗ್ರಾಮದ ರೇಚಪ್ಪ ಮತ್ತು ವೇದಾ ದಂಪತಿಗಳ ಇಬ್ಬರು ಮಕ್ಕಳಾದ 8ನೇ ತರಗತಿ ಓದುತ್ತಿದ್ದ ಪೂಜಿತಾ(14) ಹಾಗೂ 6ನೇ ತರಗತಿ ಓದುತ್ತಿದ್ದ ಪುಣ್ಯ(12) ಮೃತ ಸಹೋದರಿಯರು.
ಕೆಬ್ಬೇಪುರ ಗ್ರಾಮದ ರೇಚಪ್ಪ ಜಮೀನಿನ ಮನೆಯಲ್ಲಿ ವಾಸವಿದ್ದಾರೆ. ಪೂಜಿತಾ ಹಾಗೂ ಪುಣ್ಯ ಇಬ್ಬರು ಬಾಲಕಿಯರು ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂದು ನಂತರ ಜಮೀನಿನಲ್ಲಿ ಬೆಳೆದಿದ್ದ ಸೀಬೆ ಮರದಲ್ಲಿ ಹಣ್ಣು ಕೀಳಲು ಮರದ ಮೇಲೆ ಹತ್ತಿದ್ದಾರೆ. ಈ ವೇಳೆ ಆಯತಪ್ಪಿ ಮರದ ಕೆಳಗೆ ಇದ್ದ ಕೃಷಿ ಹೊಂಡಕ್ಕೆ ಬಿದ್ದು, ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಪ್ರಸ್ತುತ ಒಡೆದಾಳುವ ನೀತಿಯ ರಾಜಕಾರಣ ಸ್ವಾಗತಾರ್ಹವಲ್ಲ: ಸಿಎಂ ಮಮತಾ ಬ್ಯಾನರ್ಜಿ
Related Articles
ಸಹೋದರಿಯರ ಮೃತ ದೇಹಗಳನ್ನು ಕೃಷಿ ಹೊಂಡದಿಂದ ಮೇಲೆತ್ತಲಾಗಿದೆ. ಈ ವೇಳೆ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.