ಕೋಲಾರ: ಆಶಾ ಕಾರ್ಯಕರ್ತೆಯರ ಆರೋಗ್ಯ ಸೇವೆ ಅಮೂಲ್ಯವಾದದ್ದು, ಕೋವಿಡ್-19 ರ ಅಂಗವಾಗಿ ಈಗ= ಜನರು ಆರೋಗ್ಯದ ಮೇಲೆ ತುಂಬಾ ಕಾಳಜಿ ವಹಿಸಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಸ್ಕೌಟ್ಸ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ರೋಟರಿ ಕೋಲಾರ ನಂದಿನಿ ಮತ್ತು ರೋಟರಿ ಗ್ರೇಟರ್ ಜಯನಗರ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೋವಿಡ್ ವಾರಿಯರ್ ಆಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗ್ರೇಟರ್ ಜಯನಗರ ಕ್ಲಬ್‌ನ ರವೀಂದ್ರನಾಥ್ ಮಾತನಾಡಿ, ಆಶಾ ಕಾರ್ಯರ್ತೆಯರು ಉತ್ತಮವಾದ ಆರೋಗ್ಯ ಸೇವೆಯನ್ನು ಸಲ್ಲಿಸುತ್ತಾ, ಎಲೆಮರೆಯ ಕಾಯಿಗಳಂತೆ ಸೇವೆ ಸಲ್ಲಿಸುತ್ತಿದ್ದರು. ಕೋವಿಡ್- 19ನಿಂದ ಜನ ಇವರ ಸೇವೆಯನ್ನು ಗುರುತಿಸುವಂತಾಯಿತು ಎಂದರು. ಜಿಲ್ಲಾ ಮುಖ್ಯ ಆಯುಕ್ತರು ಹಾಗೂ ರೋಟರಿ ಕೋಲಾರ ನಂದಿನಿ ಅಧ್ಯಕ್ಷ ಕೆ.ವಿ,ಶಂಕರಪ್ಪ ಮಾತನಾಡಿ, ಉತ್ತಮ ಪರಿಸರವನ್ನು ಬೆಳೆಸಿ ಪೋಷಿಸಿದಾಗ ಮಾತ್ರ ಮನುಷ್ಯ ಉಳಿಯಲು ಸಾಧ್ಯ ಎಂದರು.
ಗಾಜಲದಿನ್ನೆ ಆಶಾ ಕಾರ್ಯಕರ್ತೆ ಮುನಿರತ್ನಮ್ಮ, ಸಂಗೊಂಡಹಳ್ಳಿಯ ಮಂಜುಳ, ಕೀಲುಕೋಟೆಯ ಭಾಗ್ಯಮ್ಮ, ವಿಭೂತಿಪುರದ ಮಂಜುಳಮ್ಮ, ಹಾರೋ ಹಳ್ಳಿಯ ಸುಶೀಲಮ್ಮರನ್ನು ಸನ್ಮಾನಿಸಿದರು. ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಹರಣಿ ರವೀಂದ್ರನಾಥ್, ಮಹೇಂದ್ರ, ನಿಕಿಲ್ , ಶಶಿಕಾಂತ್, ಗೋಪಾಲರೆಡ್ಡಿ, ವೆಂಕಟರಾಮೇಗೌಡ, ಬಾಲಕೃಷ್ಣ, ಚಂದ್ರಶೇಖರ್, ಸ್ಕೌಟ್ಸ್ ಮತ್ತು ಗೆ„ಡ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಬಿಸಪ್ಪಗೌಡ, ಜಯಶ್ರೀ, ಸುರೇಶ್, ಚಂದ್ರಶೇಖರ್, ಜನಾರ್ದನ್, ಉಮಾದೇವಿ, ಬಾಬು, ಮಧು, ವಿನಯ್, ದೇವರಾಜ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.