ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ ಮಾಡಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಹಾಪೌರ ಈರೇಶ ಅಂಚಟಗೇರಿ ಅವರು ರಾಷ್ಟ್ರಪತಿ ಅವರಿಗೆ ರೇಷ್ಮೆ ಶಾಲು, ಸಿದ್ಧಾರೂಢ ಸ್ವಾಮೀಜಿಯವರ ಬೆಳ್ಳಿ ಮೂರ್ತಿ, ಸಿದ್ಧಾರೂಢರ ಕುರಿತ ಪುಸ್ತಕ, ಧಾರವಾಡ ಪೇಡ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು, ಒರಿಸ್ಸಾದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹೆಣ್ಞುಮಗಳಿಗೆ ನೀವು ತೋರಿದ ಸನ್ಮಾನ, ದೇಶದ ಇಡೀ ಹೆಣ್ಣುಮಕ್ಕಳಿಗೆ ತೋರಿದ ಸನ್ಮಾನ ಹಾಗೂ ಗೌರವವಾಗಿದೆ. ಹುಬ್ಬಳ್ಳಿ-ಧಾರವಾಡ ವಿದ್ಯಾಕಾಶಿ, ಸಂಗೀತದ ನೆಲವಾಗಿದೆ. ಉತ್ತರ ಕರ್ನಾಟಕ ಬಸವೇಶ್ವರ, ಸಿದ್ಧರೂಢರ ಅಧ್ಯಾತ್ಮದ ತಾಣ ಇದಾಗಿದೆ ಎಂದರು.
ಇದನ್ನೂ ಓದಿ:ಇರಾನ್ ಹಿಜಾಬ್ ಪ್ರತಿಭಟನೆ: ಅಣ್ಣನ ಮೃತ ದೇಹದ ಮುಂದೆ ಕೂದಲು ಕತ್ತರಿಸಿ ತಂಗಿಯ ಆಕ್ರೋಶ..
ಆತ್ಮನಿರ್ಭರ ಭಾರತ ಸಂಕಲ್ಪದ ಕಾಲವಿದು. ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದು, 2047ಕ್ಕೆ ಸ್ವಾತಂತ್ರ್ಯ ಶತಮಾನೋತ್ಸವ ವೇಳೆಗೆ, ಭಾರತ ಬಲಾಢ್ಯ ಹಾಗೂಪೂರ್ಣ ಆತ್ಮನಿರ್ಭರ ದೇಶವಾಗಿ ಹೊರಹೊಮ್ಮ ಬೇಕಾಗಿದೆ ಎಂದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಜಿವ ಪ್ರಹ್ಲಾದ ಜೋಶಿ, ಸಚಿವರಾದ ಹಾಲಪ್ಪ ಆಚಾರ್, ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ ಇದ್ದರು.
ಇದನ್ನೂ ಓದಿ:ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು