Advertisement

ಮೊಣಕಾಲಿನ ಗಾಯದಿಂದ ಗುಣಮುಖ: ಅಭ್ಯಾಸಕ್ಕೆ ಮರಳಿ ಸಂತಸ ವ್ಯಕ್ತ ಪಡಿಸಿದ ಜಡೇಜಾ

12:42 PM Feb 23, 2022 | Team Udayavani |

ಲಕ್ನೋ: ಎರಡು ತಿಂಗಳ ನಂತರ ಭಾರತ ತಂಡಕ್ಕೆ ಪುನರಾಗಮನ ಮಾಡುತ್ತಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ, ಶ್ರೀಲಂಕಾ ವಿರುದ್ಧದ ಮೊದಲ ಟಿ20 ಗೆ ಮುನ್ನ, ತಮ್ಮ ಮೊದಲ ಅಭ್ಯಾಸದ ನಂತರ ತಮ್ಮ ಸಂತಸ ಹೊರ ಹಾಕಿದ್ದಾರೆ.

Advertisement

ಜಡೇಜಾ ಅವರು ಕಳೆದ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರಿಂದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ಕೊನೆಯ ಎರಡು ಸರಣಿಗಳನ್ನು ತಪ್ಪಿಸಿಕೊಂಡಿದ್ದರು.

“ಭಾರತ ತಂಡಕ್ಕೆ ಮರಳಿರುವುದು ಸಂತಸ ತಂದಿದೆ. ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಎಂದು ಜಡೇಜಾ ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.

“ನಾನು ತುಂಬಾ ಫಿಟ್ ಆಗಿದ್ದೇನೆ, ಅಂತಿಮವಾಗಿ ಎರಡು ತಿಂಗಳ ನಂತರ ನಾನು ಭಾರತಕ್ಕಾಗಿ ಆಡುತ್ತಿದ್ದೇನೆ” ಎಂದು ಅವರು ಹೇಳಿದರು.

33 ರ ಹರೆಯದ ಜಡೇಜಾ “ನನ್ನ ವಿರಾಮವನ್ನು ಸರಿಯಾಗಿ ಬಳಸಿಕೊಳ್ಳಲು ಉತ್ಸುಕನಾಗಿದ್ದೆ. ನಾನು ಎನ್‌ಸಿಎಯಲ್ಲಿ ನನ್ನ ಫಿಟ್‌ನೆಸ್‌ಗಾಗಿ ಶ್ರಮಿಸುತ್ತಿದ್ದೆ. ಎರಡು ತಿಂಗಳ ನಂತರ ಆಡುತ್ತಿದ್ದೇನೆ, ಸರಣಿಗಾಗಿ ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

Advertisement

“ನಾನು ಬೆಂಗಳೂರಿನಲ್ಲಿ ಬೌಲಿಂಗ್, ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದೆ. ಹಾಗಾಗಿ ಟಚ್ ನಲ್ಲಿದ್ದೆ. ಇಂದು, ನನ್ನ ಮೊದಲ ಅಭ್ಯಾಸಕ್ಕೆ ಇಲ್ಲಿಗೆ ಬಂದ ನಂತರ ನಾನು ತುಂಬಾ ಖುಷಿಯಾಗಿದ್ದೇನೆ ಎಂದರು.

ಭಾರತವು ಗುರುವಾರ ಪ್ರಾರಂಭವಾಗುವ ಮೂರು ಟಿ 20 ಗಳಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ, ನಂತರ ಎರಡು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next