Advertisement

ವಿದ್ಯಾರ್ಥಿಗಳಿಗೆ ಆಹಾರ ಸರಿಯಾಗಿ ಮುಟ್ಟಿಸಿ

11:54 AM Jul 31, 2021 | Team Udayavani |

ಸಿರುಗುಪ್ಪ: ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಗೆ ಕಡ್ಡಾಯವಾಗಿ ಅವರ ಪಾಲಕರನ್ನು ಶಾಲೆಗೆ ಕರೆಸಿಕೊಂಡು ಬಿಸಿಯೂಟಕ್ಕೆ ನೀಡುವ ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಹಾಲಿನಪುಡಿಯನ್ನು ವಿತರಿಸಬೇಕೆಂದು ತಾಪಂ ಇಒ ಶಿವಪ್ಪ ಸುಬೇದಾರ್‌ ತಿಳಿಸಿದರು.

Advertisement

ತಾಲೂಕಿನ ಕೆಂಚನಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ತಾಪಂ ಇಒ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಧಾನ್ಯಗಳನ್ನು ವಿತರಿಸಿದ ಬಗ್ಗೆ ದಾಖಲೆಗಳನ್ನು ಪರಿಶೀಲನೆ ಮಾಡಿ ಮಾತನಾಡಿ, ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ ಸರ್ಕಾರದ ಕೊರೊನಾ ನಿಯಮಾವಳಿ ಪ್ರಕಾರ ಪಾಲಕರಿಗೆ ಮಾತ್ರ ಆಹಾರ ಧಾನ್ಯಗಳನ್ನು ವಿತರಿಸಬೇಕೆಂದು ಸೂಚಿಸಿದರು.

ಪ್ರತಿ ವಿದ್ಯಾರ್ಥಿಗಳಿಗೆ ಸರ್ಕಾರ ನಿಗದಿ  ಪಡಿಸಿದ ಪ್ರಕಾರ ಆಹಾರಧಾನ್ಯ ಗಳನ್ನು ವಿತರಣೆ ಮಾಡಲಾಗುತ್ತದೆ. ಕೆಲ ವಿದ್ಯಾರ್ಥಿಗಳ ಆಧಾರ್‌ ನಂಬರ್‌ನ್ನು ಶಾಲಾ ದಾಖಲಾತಿಯಲ್ಲಿ ದಾಖಲಿಸದೆ ಇರುವುದರಿಂದ ಅಂಥ ವಿದ್ಯಾರ್ಥಿಗಳಿಗೆ ಮಾತ್ರ ಆಹಾರ ಧಾನ್ಯ ವಿತರಣೆ ಮಾಡಿಲ್ಲವೆಂದು ಶಿಕ್ಷಕ ಮಹಾದೇವ ಮಾಹಿತಿ ನೀಡಿದರು. ಶಾಲಾ ಖಾತೆಯಲ್ಲಿರುವ ಹಣ ಯಾವ ಕೆಲಸಗಳಿಗೆ ಬಳಕೆ ಮಾಡಲಾಗಿದೆ ಎನ್ನುವುದರ ಬಗ್ಗೆ ರಿಜಿಸ್ಟರ್‌ಬುಕ್‌ನಲ್ಲಿ ದಾಖಲಿಸಬೇಕು.

ಖರ್ಚಾಗಿದ್ದರೆ ಖರ್ಚಾದ ಮಾಹಿತಿಯನ್ನು, ಖರ್ಚಾಗಿಲ್ಲದಿದ್ದರೆ ಖಾತೆಯಲ್ಲಿ ಉಳಿದಿರುವ ಹಣ ಎಷ್ಟು ಎಂಬುದನ್ನು ಕಡ್ಡಾಯವಾಗಿ ದಾಖಲಿಸಬೇಕು. ಆದರೆ ನೀವು ಹಣ ಉಳಿಕೆ ಮತ್ತು ಖರ್ಚಿನ ಬಗ್ಗೆ ಯಾವುದೇ ಕಡತ ನಿರ್ವಹಿಸದೇ ಇರುವುದು ಸರಿಯಾದ ಕ್ರಮವಲ್ಲ, ಇನ್ನು ಮುಂದೆ ಹಣದ ಖರ್ಚುವೆಚ್ಚದ ಬಗ್ಗೆ ದಾಖಲಾತಿ ಕಡ್ಡಾಯವಾಗಿ ಬರೆದಿಡಬೇಕು. ಶಾಲೆ ಆವರಣ ಸ್ವತ್ಛವಾಗಿಟ್ಟುಕೊಳ್ಳಬೇಕು. ಕಾಂಪೌಂಡ್‌ ಎತ್ತರಿಸಲು ಬೇಕಾದ ಅನುದಾನ ನೀಡಲಾಗುವುದು. ಈ ಬಗ್ಗೆ ವರದಿ ತಯಾರಿಸಿ ತಾಪಂಗೆ ಸಲ್ಲಿಸಬೇಕೆಂದು ಇಒ ಸೂಚನೆ ನೀಡಿದರು. ಶಿಕ್ಷಕ ಅಜ್ಮಿàರ್‌, ಪಿಡಿಒ ಆದೆಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next