Advertisement

Police ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ಶಾಸಕ ಕಂದಕೂರ ರಾಜೀನಾಮೆ ಎಚ್ಚರಿಕೆ

07:08 PM Jul 04, 2024 | Team Udayavani |

ಯಾದಗಿರಿ: ಗುರುಮಠಕಲ್ ತಾಲೂಕಿನಲ್ಲಿ ಪೊಲೀಸರಿಂದ ನಡೆಯುವ ಭ್ರಷ್ಟಾಚಾರದಿಂದ ನಿಜಕ್ಕೂ ಬೇಸರಗೊಂಡಿದ್ದೇನೆ. ತಮ್ಮ ವೈಯಕ್ತಿಕ ಕೆಲಸ ಹಾಗೂ ಅಕ್ರಮ ದಂಧೆಗೆ ಶಾಮೀಲಾಗಿರುವುದು ನೋವು ತರಿಸುತ್ತದೆ. ಸ್ವತಃ ಶಾಸಕನಾಗಿ ನಾನೇ ಕರೆ ಮಾಡಿದರೂ ತಾಲೂಕಿನ ಪೊಲೀಸರು ಸರಿಯಾದ ಉತ್ತರ ನೀಡುವುದಿಲ್ಲ, ಪೊಲೀಸರ ನಡೆಯಿಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಬೇಸರ ವ್ಯಕ್ತಪಡಿಸಿದರು.

Advertisement

ಗುರುಮಠಕಲ್ ನಗರದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಹಾಗೂ ಎಸ್ಪಿ ಸಂಗೀತಾ ಜಿ. ಅವರ ಮುಂದೆ ತಾಲೂಕಿನ ಪೊಲೀಸರ ಬಗ್ಗೆ ಆರೋಪಿಸಿ, ನೋವಿನ ಮಾತುಗಳಾಡಿದ ಅವರು, ತಾಲೂಕಿನ ತುಂಬೆಲ್ಲಾ ಪೊಲೀಸರು ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಬೇಕೆ ಹೊರತು, ಕಾನೂನು ಬಾಹೀರಕ್ಕೆ ಎಂದಿಗೂ ಕುಮ್ಮಕ್ಕು ನೀಡಬಾರದು. ಒಬ್ಬ ಶಾಸಕನ ಕಣ್ಣು ತಪ್ಪಿಸಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದರೆ, ರಕ್ಷಣೆ ಮಾಡುವ ಪೊಲೀಸರು ಕಣ್ಣು ಮುಚ್ಚಿಕೊಂಡಿದ್ದಾರಾ ಎಂದು ಕೋಪಗೊಂಡರು.

ಬಡವರು ಪೊಲೀಸ್ ಠಾಣೆಗೆ ಹೋದರೆ ಸರಿಯಾದ ಸ್ಪಂದನೆ ನೀಡುವುದಿಲ್ಲ ಎಂದು ಅನೇಕರು ದೂರಿದ್ದಾರೆ. ಠಾಣೆಯಲ್ಲಿ ನ್ಯಾಯ ಸಿಗದೆ ಜನರು ಯಾರ ಹತ್ತಿರ ಕಾನೂನು ಪರಿಹಾರಕ್ಕೆ ಹೋಗಬೇಕು ನೀವೇ ಹೇಳಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ. ಅವರಿಗೆ ಶಾಸಕ ಶರಣಗೌಡ ಕಂದಕೂರು ಪ್ರಶ್ನೆ ಮಾಡಿದರು.

ಪೊಲೀಸರ ಮೇಲೆ ಮೇಲಾಧಿಕಾರಿಗಳು ದಯವಿಟ್ಟು ಹಿಡಿತ ಸಾಧಿಸಿ, ಕ್ರಮ ವಹಿಸುವಂತೆ ಈ ಕಾರ್ಯಕ್ರಮದ ಮೂಲಕ, ತಾಲೂಕಿನ ನೊಂದ ಜನರ ಪರವಾಗಿ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಇಟ್ಟಿದ್ದೇನೆ, ಸರಿ ಮಾಡುವುದು ನಿಮ್ಮ ಮೇಲಿದೆ, ಇಲ್ಲವಾದಲ್ಲಿ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಗದ್ದುಗೆಗೆ ರಾಜೀನಾಮೆ ಪತ್ರ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next