Advertisement

ಫೆ. 7, 8: ಬೆಂಗಳೂರಿನಲ್ಲಿ ಐಪಿಎಲ್‌ ಹರಾಜು?

11:31 PM Dec 22, 2021 | Team Udayavani |

ಹೊಸದಿಲ್ಲಿ: ಎರಡು ದಿನಗಳ ಐಪಿಎಲ್‌ ಮೆಗಾ ಹರಾಜು ಫೆಬ್ರವರಿ 7 ಮತ್ತು 8ರಂದು ಬೆಂಗಳೂರಿನಲ್ಲಿನಡೆ ಯಲಿದೆ ಎಂಬುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

“ಕೋವಿಡ್‌ ಸ್ಥಿತಿ ನಿಯಂತ್ರಣದಲ್ಲಿ ಇದ್ದರೆ ಐಪಿಎಲ್‌ ಬೃಹತ್‌ ಹರಾಜನ್ನು ಭಾರತದಲ್ಲೇ ನಡೆಸಲಾಗುವುದು. ಎಂದಿನಂತೆ ಇದು ಎರಡು ದಿನಗಳ ಕಾಲ ನಡೆಯಲಿದೆ.

ಫೆ. 7 ಮತ್ತು 8ರಂದು ಈ ಹರಾಜನ್ನು ಬೆಂಗಳೂರಿನಲ್ಲಿ ನಡೆಸುವ ಯೋಜನೆ ನಮ್ಮದು. ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಷರತ್ತಿನನ್ವಯ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌: ಲಬುಶೇನ್‌ ನಂ. ವನ್‌

ಇದಕ್ಕೂ ಮುನ್ನ ಈ ಹರಾಜು ಯುಎಇಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.

Advertisement

ಆದರೆ ಬಿಸಿಸಿಐ ಇಂಥ ಯೋಜನೆ ಹೊಂದಿಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next