Advertisement

ಫೆ. 26ರಿಂದ ಮಾ. 4ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

10:19 AM Jan 10, 2020 | Sriram |

ಬೆಂಗಳೂರು: ಪ್ರತಿಷ್ಠಿತ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.26ರಿಂದ ಮಾ.4ರವರೆಗೆ ನಡೆಯಲಿದ್ದು, ಫೆ. 26ರಂದು ಸಂಜೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನ ಸಮಾರಂಭ ನಡೆಯಲಿದೆ.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಗುರುವಾರ ಚಲನಚಿತ್ರೋತ್ಸವದ ಸಂಘಟನ ಸಮಿತಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ದಿನಾಂಕವನ್ನು ಪ್ರಕಟಿಸಿ, ಲಾಂಛನ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಯಡಿಯೂರಪ್ಪ ಅವರು, ಅವರು ರಾಜಾಜಿನಗರದ ಒರಾಯನ್‌ ಮಾಲ್‌ನಲ್ಲಿರುವ ಪಿವಿಆರ್‌ನ 11 ಪರದೆಗಳಲ್ಲಿ ಸಿನೆಮಾಗಳು ಪ್ರದರ್ಶಿತವಾಗಲಿವೆ ಎಂದು ತಿಳಿಸಿದರು.

ವಿಶ್ವದ 50 ದೇಶಗಳಿಂದ ಸುಮಾರು 200 ಸಮಕಾಲೀನ ಚಲನಚಿತ್ರಗಳು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿವೆ. ಏಳು ದಿನಗಳ ಕಾಲ ನಡೆಯಲಿರುವ ಈ ಸಿನಿಮೋತ್ಸವದಲ್ಲಿ 14 ವಿಭಾಗಗಳಿರಲಿವೆ. ಸಿನೆಮಾ ಬೆಳವಣಿಗೆ ಕುರಿತು ಸಂವಾದ, ಉಪನ್ಯಾಸ, ಚಲನಚಿತ್ರ ತಯಾರಿಕೆ, ಚಲನಚಿತ್ರ ಕಲೆ ರಸಗ್ರಹಣ ಶಿಬಿರ, ವಿಚಾರ ಸಂಕಿರಣ, ಕಾರ್ಯಾಗಾರ, ಮಾಸ್ಟರ್‌ ಕ್ಲಾಸ್‌ ವಿಭಾಗದಲ್ಲಿ ಸಿನೆಮಾ ತಜ್ಞರಿಂದ ಉಪನ್ಯಾಸವಿರಲಿದೆ.

ಬೆಂಗಳೂರು ನಗರಕ್ಕೆ ವಿಶ್ವವನ್ನು ಪರಿಚಯಿಸುವುದೇ ಚಲನಚಿತ್ರೋತ್ಸವದ ಉದ್ದೇಶ. ಹಾಗೆಯೇ ಕನ್ನಡ ಸಿನೆಮಾದ ಸೃಜನಶೀಲ ಮುಖಗಳನ್ನು ವಿಶ್ವದ ನಾನಾ ರಾಷ್ಟ್ರಗಳಿಗೆ ಪರಿಚಯಿಸುವ ಕಾರ್ಯವೂ ನಡೆಯಲಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next