Advertisement

ಫೆ. 17-19: ವಂಡಾರು ಕೊಕ್ಕನಬೈಲು ದೇಗುಲ ಲೋಕಾರ್ಪಣೆ, ನಾಗಮಂಡಲ

11:51 PM Feb 15, 2024 | Team Udayavani |

ಕೋಟ: ಬ್ರಹ್ಮಾವರ ತಾಲೂಕಿನ ಕೊಕ್ಕನಬೈಲು ವಂಡಾರಿನಲ್ಲಿರುವ ಬಾಯರಿ ಕುಟುಂಬಸ್ಥರ ಮೂಲ ನಾಗದೇವರ ಸಾನ್ನಿಧ್ಯದಲ್ಲಿ ಕಮಲಪುಷ್ಪ ಆಕಾರದ ಶಿಲಾಮಯ, ವಿಶೇಷ ಕಾಷ್ಠಶಿಲ್ಪದ ದೇಗುಲವನ್ನು ವಂಡಾರು ರಮೇಶ್‌ ಬಾಯರಿ ಅವರ ನೇತೃತ್ವದಲ್ಲಿ ನಿರ್ಮಿಸಿದ್ದು ಫೆ. 17ರಿಂದ 19ರ ವರೆಗೆ ಲೋಕಾರ್ಪಣೆ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವ ಜರಗಲಿವೆ.

Advertisement

ಫೆ. 17ರಂದು ಬೆಳಗ್ಗಿನಿಂದ ರಾತ್ರಿ ತನಕ ವಿವಿಧ ಹೋಮಗಳು, ಕಲಶಸ್ಥಾಪನೆ, ಬಿಂಬಶುದ್ಧಿ ಶಯ್ನಾಕಲ್ಪಾರಾಧನೆ ಜರಗಲಿದೆ. ಫೆ. 18ರಂದು ಬೆಳಗ್ಗೆ ಶ್ರೀನಾಗದೇವರ ಪುನಃ ಪ್ರತಿಷ್ಠಾ ಮಹೋತ್ಸವ, ಹೋಮಗಳು ಜರಗಲಿದ್ದು, ಸಂಜೆ 5.30ಕ್ಕೆ ಶೃಂಗೇರಿ ಜಗದ್ಗುರುಗಳಾದ ಕಿರಿಯ ಯತಿ ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿ ಆಗಮನ, ಪ್ರಾಯಶ್ಚಿತ ಆಶ್ಲೇಷಾ ಬಲಿ, ಜಗದ್ಗುರುಗಳಿಂದ ಚಂದ್ರಮೌಳೀಶ್ವರ ದೇವರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಫೆ. 19ರಂದು ಬೆಳಗ್ಗೆ ಜಗದ್ಗುರುಗಳಿಂದ ಶ್ರೀದೇವರಿಗೆ ಕುಂಭಾಭಿಷೇಕ ಪೂರ್ವಕ ಮಹಾಪೂಜೆ, ಶಿಖರಾಭಿಷೇಕ, ಪಾದಪೂಜೆ, ಭಿನ್ನವತ್ತಳೆ ಸಮರ್ಪಣೆ, ಆಶೀರ್ವಚನ, ಫಲಮಂತ್ರಾಕ್ಷತೆ ಮತ್ತು ಮಹಾ ಅನ್ನಸಂತರ್ಪಣೆ, ಹಾಲಿಟ್ಟು ಸೇವೆ, ಸಂಜೆ 5.30ರಿಂದ ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ ನಡೆಯಲಿದ್ದು, ಅನಂತರ ಪ್ರಸಾದ ವಿತರಣೆ, ಆಶೀರ್ವಚನ, ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ಫೆ. 19ರಂದು ಅಪರಾಹ್ನ ಪಂಡಿತ್‌ ಡಾ| ಪ್ರವೀಣ ಗೋಡ್ಕಿಂಡಿ ಅವರಿಂದ ಕೊಳಲು ವಾದನವಿದೆ ಎಂದು ದೇವಸ್ಥಾನದ ಮುಖ್ಯಸ್ಥ ವಂಡಾರು ರಮೇಶ್‌ ಬಾಯರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next