Advertisement

Shirva ಆರೋಗ್ಯ ಮಾತಾ ದೇವಾಲಯ: ಗರಿಗಳ ರವಿವಾರ ಆಚರಣೆ

12:08 PM Mar 24, 2024 | Team Udayavani |

ಶಿರ್ವ: ಏಸು ಸ್ವಾಮಿ ಜೆರುಸಲೆಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಪ್ರಪಂಚದಾದ್ಯಂತ ಕ್ರೈಸ್ತ ಸಮುದಾಯದವರು ಗರಿಗಳ ರವಿವಾರವನ್ನು ಆಚರಿಸುತ್ತಿದ್ದು, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಶಿರ್ವ ವಲಯದ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾಅವರ ನೇತೃತ್ವದಲ್ಲಿ ಪಾಮ್‌ ಸಂಡೆಯ ಬಲಿಪೂಜೆ ನೆರವೇರಿತು.

Advertisement

ಶಿರ್ವ ಸಂತ ಮೇರಿ ಪ.ಪೂ. ಕಾಲೇಜಿನ ಹಿಲಾರಿ ರಂಗಮಂಟಪದಲ್ಲಿ ಶಿರ್ವ ವಲಯದ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ, ಸಹಾಯಕ ಧರ್ಮಗುರುಗಳಾದ ರೆ|ಫಾ|ರೋಲ್ವಿನ್‌ ಅರಾನ್ಹಾ, ರೆ|ಫಾ|ರೋನ್ಸನ್‌ ಪಿಂಟೊ, ರೆ|ಫಾ|ಜೇಸನ್‌ ಲೋಬೋ ಅವರು ಗರಿಗಳ ಆಶೀರ್ವಚನ ನೆರವೇರಿಸಿದ ಬಳಿಕ ಕ್ರೈಸ್ತ ಬಾಂಧವರು ತೆಂಗಿನ ಗರಿಗಳನ್ನು ಹಿಡಿದು ಮೆರವಣಿಗೆಯ ಮೂಲಕ ಚರ್ಚ್‌ಗೆ ತೆರಳಿದರು.

ಚರ್ಚ್‌ ಆರ್ಥಿಕ ಮತ್ತು ಪಾಲನ ಮಂಡಳಿಯ ಸದಸ್ಯರು ಮೆರವಣಿಗೆಯ ನೇತೃತ್ವ ವಹಿಸಿದ್ದು ಸುಮಾರು 1,500ಕ್ಕೂ ಹೆಚ್ಚು ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

ಚರ್ಚ್‌ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್‌ ಅರಾನ್ಹ, ಕಾರ್ಯದರ್ಶಿ ಫ್ಲಾವಿಯಾ ಡಿಸೋಜಾ, ಚರ್ಚ್‌ ಆಯೋಗದ ಸಂಯೋಜಕಿ ಲೀನಾ ಮಚಾದೋ, ಚರ್ಚ್‌ ಆರ್ಥಿಕ ಮತ್ತು ಪಾಲನ ಮಂಡಳಿಯ ಸದಸ್ಯರು, ನೇಟಿವಿಟಿ ಕಾನ್ವೆಂಟ್‌ನ ಧರ್ಮಭಗಿನಿಯರು, ಚರ್ಚ್‌ನ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಐಸಿವೈಎಂ, ಉಸ್ವಾಸ್‌ ಮತ್ತು ಸ್ವಾಕ್‌ ಸಂಘಟನೆಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next