Advertisement

DK Shivakumar ಅವರ ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಬಗ್ಗೆ ಭಯವಿದೆ: ಸಿ.ಟಿ ರವಿ

05:19 PM Aug 15, 2023 | Team Udayavani |

ಚಿಕ್ಕಮಗಳೂರು: ಸಿ.ಟಿ.ರವಿಗೆ ಟ್ರೀಟ್ಮೆಂಟ್ ಅಗತ್ಯವಿದೆ ಎಂದು ಹೇಳಿಕೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಿ.ಟಿ ರವಿ ತಿರುಗೇಟು ನೀಡಿದ್ದು, ನಾನು ಸಂಘದ ಸ್ವಯಂ ಸೇವಕ, ಅವ್ರು ಕೊತ್ವಾಲ್ ರಾಮಚಂದ್ರನ ಶಿಷ್ಯ. ಅವರು ಎಲ್ಲರಿಗೂ ಟ್ರೀಟ್ಮೆಂಟ್ ಕೊಡುತ್ತಾರೆ. ಆದರೆ ಅವರ ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಬಗ್ಗೆ ನನಗೆ ಭಯ. ಅದಕ್ಕಾಗಿ ರಕ್ಷಣೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.

Advertisement

ಸುದ್ದಿಗಾರರೊಂದರೆ ಮಾತನಾಡಿದ ಅವರು, ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಅವರು ದೇಶದ ಶ್ರೀಮಂತ ಶಾಸಕ. ಅವರ ಬಳಿ ಬೆಂಗಳೂರು ಅಭಿವೃದ್ಧಿ, ಉಸ್ತುವಾರಿ, ನೀರಾವರಿ ಎಲ್ಲಾ ಇದೆ. ನಾನು ಸೋತಿದ್ದೀನಿ, ಅವರು ಗೆದ್ದಿದ್ದಾರೆ, ಅಧಿಕಾರ ಮದ ನಿರ್ಮಾಣ ಮಾಡುತ್ತದೆ. ಬಹುಶಃ, ಅಧಿಕಾರದ ಅಹಃ ಭಾವದಲ್ಲಿ ಎಲ್ಲರಿಗೂ ಟ್ರೀಟ್ಮೆಂಟ್ ಕೊಡುವ ಹುಮ್ಮಸ್ಸು ಬಂದಿರಬಹುದು. ಆ ಹುಮ್ಮಸ್ಸಿನಿಂದಲೇ ನನಗೂ ಟ್ರೀಟ್ಮೆಂಟ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ನಾನು ಸೋತಿರುವ ಸಾಮಾನ್ಯ ಕಾರ್ಯಕರ್ತ, ನನ್ನ ಟಾರ್ಗೆಟ್ ಮಾಡಿದರೆ ಮುಖ್ಯಮಂತ್ರಿಯಾಗಲು ಆಗದು. ನೀವು ಸಿಎಂ ಆಗಬೇಕಾದರೆ ಬೇರೆಯವರನ್ನು ಟಾರ್ಗೆಟ್ ಮಾಡಬೇಕು ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ಓಲೈಕೆ ರಾಜಕೀಯಕ್ಕೆ ಕಡಿವಾಣ: ನಾವು ಜಾತ್ಯತೀತ ಎಲ್ಲರೂ ಸಮಾನರು ಎಂದು ಹೇಳುತ್ತೇವೆ. ಸಂವಿಧಾನದ ಮೂಲ ಪೀಠಿಕೆಯಲ್ಲಿ ಸಮಾನತೆಯ ಪ್ರಸ್ತಾಪವಿದೆ. ಕಾನೂನು ಯಾಕೆ ಮತಕ್ಕೊಂದು, ಕೋಮಿಗೊಂದು ಇರಬೇಕು. ಯಾಕೆ ಸಮಾನ ಇರಬಾರದು. ಓಲೈಕೆಯ ರಾಜನೀತಿಗೆ ಕಡಿವಾಣ ಬೀಳಬೇಕು ಎಂದು ಸಿ.ಟಿ ರವಿ ಹೇಳಿದರು.

ಇದನ್ನೂ ಓದಿ:Loksabha ಚುನಾವಣೆಗೆ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ: ಮಂಕಾಳು ವೈದ್ಯ

Advertisement

ಸಂವಿಧಾನ ಕೂಡ ದೇಶದ ಎಲ್ಲರೂ ಸಮಾನರೂ ಎಂಬ ಆಶಯವನ್ನು ಎತ್ತಿ ಹಿಡಿದಿದೆ. ಶೀಘ್ರವೇ ಸಮಾನ ನಾಗರೀಕ ಸಂಹಿತೆ ಬರಬೇಕು. ಸಮಾನ ನಾಗರಿಕ ಸಂಹಿತೆ ಸಂವಿಧಾನದಲ್ಲಿ ಉಲ್ಲೇಖವಾಗಿದೆ. 3-4 ಬಾರಿ ಸುಪ್ರೀಂ ಕೋರ್ಟ್ ಕೂಡ ನಾಗರೀಕ ಸಂಹಿತೆ ಅನುಷ್ಠಾನದತ್ತ ಹೆಜ್ಜೆ ಹಾಕಬೇಕೆಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next