Advertisement

ವಿದ್ಯುತ್‌ ಬಿಲ್‌ಗೆ ಹೆದರಿ ನೇಣು 

08:23 AM May 12, 2018 | Team Udayavani |

ಔರಂಗಾಬಾದ್‌: ಎಲೆಕ್ಟ್ರಿಸಿಟಿ ಬಿಲ್‌ ನೂರು, ಇನ್ನೂರು, ಅಬ್ಬಬ್ಬ… ಅಂದ್ರೆ ಮುನ್ನೂರು ದಾಟಿದರೆ ಸಾಮಾನ್ಯ ಬಳಕೆದಾರ ಏದೇನಿದು ಎಂದು ಕಂಗಾಲಾಗುವುದುಂಟು. ಆದರೆ, ಇಲ್ಲಿನ ಭಾರತ್‌ ನಗರದ ನಿವಾಸಿಯೊಬ್ಬರ ಮನೆಯ ವಿದ್ಯುತ್‌ ಬಿಲ್‌ ಬರೋಬ್ಬರಿ 8.64 ಲಕ್ಷ ರೂ. ಬಂದಿದ್ದು, ಬಿಲ್‌ ನೋಡುತ್ತಿದ್ದಂತೆ ವ್ಯಕ್ತಿ ಗಾಬರಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾನೆ.

Advertisement

ಗುರುವಾರ ಬೆಳಗ್ಗೆ ಕೈಸೇರಿದ ಬಿಲ್‌ ನೋಡುತ್ತಿದ್ದಂತೆ ಬದುಕಿಗೇ ಕೊಳ್ಳಿ ಇಟ್ಟುಕೊಂ ಡಿರುವ ವ್ಯಕ್ತಿ ಜಗನ್ನಾಥ್‌ ಶೆಲ್ಕೆ. ಸೂಸೈಡ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ 55,519 ಯೂನಿಟ್‌ ಬಳಕೆ ಮಾಡಿದ್ದು, 8,64,781 ರೂ. ಬಿಲ್‌ ಬಂದಿದೆ. ಬಿಲ್‌ ಮಾಡುವಾತನ ಎಡವಟ್ಟೇ ಇದಕ್ಕೆ ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next