Advertisement
ಜೆಮ್ಶೆಡ್ಪುರದ ಆದಿತ್ಯಪುರ ಕೈಗಾರಿಕಾ ಪ್ರದೇಶದಲ್ಲಿ ಇರುವ ವಾಹನಗಳ ಬಿಡಿಭಾಗ ತಯಾರಿಸುವ ಕಾರ್ಖಾನೆಗಳು ಸಂಕಷ್ಟದ ಸ್ಥಿತಿ ಎದುರಿಸುತ್ತಿವೆ. ಟಾಟಾ ಮೋಟರ್ಸ್ ತನ್ನ 1 ಸಾವಿರ ತಾತ್ಕಾಲಿಕ ನೌಕರರನ್ನು ಸದ್ಯಕ್ಕೆ ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿದೆ. 2 ತಿಂಗಳಲ್ಲಿ 15 ದಿನ ಮಾತ್ರ ಉತ್ಪಾದನಾ ಪ್ರಕ್ರಿಯೆ ನಡೆದಿದೆ. ಪೂರ್ಣಕಾಲಿಕ ಉದ್ಯೋಗಿಗಳು ಆ.5ರ ನಂತರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ವಿದ್ಯುತ್ ಶುಲ್ಕದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದರಿಂದ ಕೂಡ 30 ಕಂಪನಿಗಳಿಗೆ ಕಷ್ಟ ಉಂಟಾಗಿದೆ. ವಾಹನೋದ್ಯಮ ಕ್ಷೇತ್ರದಲ್ಲಿ ಉಂಟಾಗಿರುವ ಹಿಂಜರಿತ ಕೂಡ ಈ ಬೆಳವಣಿಗೆಗೆ ಕಾರಣ. ಇಂಥ ಬೆಳವಣಿಗೆ ಕ್ಷೇತ್ರಕ್ಕೆ ಹೊಸತೇನೂ ಅಲ್ಲ. ಪ್ರತಿ 2-3 ವರ್ಷಗಳಿಗೆ ಇಂಥ ಪರಿಸ್ಥಿತಿ ಬರುತ್ತದೆ ಎಂದು ಆದಿತ್ಯಪುರ ಸಣ್ಣ ಕೈಗಾರಿಕಾ ಸಂಘಗಳ ಅಧ್ಯಕ್ಷ ಇಂದ್ರ ಅಗರ್ವಾಲ್ ಹೇಳಿದ್ದಾರೆ. Advertisement
ಉಕ್ಕು ಕಂಪನಿಗಳಿಗೆ ಮುಚ್ಚುವ ಭೀತಿ
12:53 AM Aug 04, 2019 | mahesh |
Advertisement
Udayavani is now on Telegram. Click here to join our channel and stay updated with the latest news.